ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ

Home/Birthday/ಡಾ. ಚಿಕ್ಕಣ್ಣ ಯೆಣ್ಣೆಕಟ್ಟೆ
Loading Events

೨೪-೫-೧೯೬೩ ಜಾನಪದ ವಿದ್ವಾಂಸ, ಸಂಶೋಧಕ ಚಿಕ್ಕಣ್ಣ ಯೆಣ್ಣೆಕಟ್ಟೆಯವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಯೆಣ್ಣೆಕಟ್ಟೆ ಗ್ರಾಮದಲ್ಲಿ. ತಂದೆ ಗೊರವಯ್ಯ, ತಾಯಿ ಹನುಮಕ್ಕ. ಮಾಧ್ಯಮಿಕದವರೆಗೆ ಯೆಣ್ಣೆಕಟ್ಟೆ, ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಬಿ.ಎ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ. ‘ಸಾಳ್ವಭಾರತ-ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ. ಉದ್ಯೋಗ ಪ್ರಾರಂಭಿಸಿದ್ದು ಕನ್ನಡ ಉಪನ್ಯಾಸಕರಾಗಿ ಬೆಂಗಳೂರಿನ ಎಸ್.ಜೆ.ಆರ್. ಮಹಿಳಾ ಕಾಲೇಜಿನಲ್ಲಿ. ಕೆಲಕಾಲ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪಿಎಚ್.ಡಿ. ಮಾರ್ಗದರ್ಶಕರಾಗಿ ಸೇವೆ. ಈಗ ಶಿರಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿರಿಯ ಶ್ರೇಣಿಯ ಉಪನ್ಯಾಸಕರ ಹುದ್ದೆ. ಉಪನ್ಯಾಸಕರಾಗಿಯೂ ಹಲವಾರು ಕಡೆ, ವಿವಿಧ ಜವಾಬ್ದಾರಿ. ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾ ಮಂಡಲಿಯ ಅಧ್ಯಕ್ಷರಾಗಿ, ಶಿರಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್.ಎಸ್.ಎಸ್. ಕಾರ‍್ಯಕ್ರಮಾಕಾರಿಯಾಗಿ, ಗಡಿನಾಡ ಜಾನಪದ ಕೇಂದ್ರದ ಸಂಸ್ಥಾಪಕ ಸಂಚಾಲಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಗೌ|| ಕಾರ‍್ಯದರ್ಶಿಯಾಗಿ, ಗಡಿನಾಡ ಜಾನಪದ ಸಮ್ಮೇಳನದ ಸಂಚಾಲಕರಾಗಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿ ಸೇವೆ. ಇವರ ಮಾರ್ಗದರ್ಶನದಲ್ಲಿ ಒಬ್ಬರು ಪಿಎಚ್.ಡಿ. ಪಡೆದಿದ್ದು ೬ ಜನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ತೊಡಗಿದ್ದಾರೆ. ಪ್ರಕಟಿತ ಕೃತಿಗಳು : ನಾಟಕ-ತುಳಿತ ಸ್ಪಂದನ. ಜೀವನಚರಿತ್ರೆ-ಊರ ಮುಂದಲ ಮಾವು. ಕಲಾವಿದರ ಪರಿಚಯ-ಸಂಪರ್ಕ. ಜನಪದ ಮಹಾಕಾವ್ಯ ಸಂಗ್ರಹ-ಚಿತ್ರದೇವರ ಕಾವ್ಯ. ಜಾನಪದ ಅಧ್ಯಯನ-ಹೊಳೆದಂಡೆಯ ಕರಿಕೆ, ತುಮಕೂರಿನ ಜಿಲ್ಲಾ ಜಾನಪದ ಅಧ್ಯಯನ. ಸಂಪಾದನೆ-ರಾಮಧಾನ್ಯ ಚರಿತೆ, ಕಿನ್ನರಿಯ ಮೇಲೆ ಕಿರುಗೆಜ್ಜೆ ಮುಂತಾದವು. ಇತರರೊಡನೆ ಸಂಪಾದಿತ-ಹೊಂಬಾಳೆ, ಕನಕಮಾಧುರಿ, ಕನಕ ಸೂರ್ತಿ, ಸಾತ್ವಿಕ, ಹಾಲ ತೊರೆ, ಕನಕಸಂಪದ, ಜನಪದ ಹಾಗೂ ಯಕ್ಷಗಾನ ಮಹಾಸಂಪುಟ, ಒಟ್ಟು ೨೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ದೊರೆತ ಪ್ರಶಸ್ತಿ ಗೌರವಗಳು-ಬೇಟೆ ನಾಟಕಕ್ಕೆ ೧೯೯೦ರ ಅಂತಾರಾಷ್ಟ್ರೀಯ ಸಾರ್ಕ್ ರಾಷ್ಟ್ರಗಳ ಹೆಣ್ಣು ಮಗುವಿನ ವರ್ಷದ ಬಹುಮಾನ, ಹೊಳೆದಂಡೆಯ ಕರಿಕೆ ಕೃತಿಗೆ ಗೊರೂರು ಪ್ರಶಸ್ತಿ, ತುಮಕೂರು ಜಿಲ್ಲಾ ಜಾನಪದೀಯ ಅಧ್ಯಯನಕ್ಕೆ ದೆಹಲಿ ಮಾನವ ಸಂಪನ್ಮೂಲ ಇಲಾಖೆಯ ಬಹುಮಾನ, ಭಾರತ ಸರ್ಕಾರದ ಜನಗಣತಿ ೨೦೦೧ರ ಅತ್ಯುತ್ತಮ ಕಾರ‍್ಯನಿರ್ವಹಣೆಗೆ ರಾಷ್ಟ್ರಪತಿಗಳಿಂದ ಬೆಳ್ಳಿ ಪದಕ, ಪ್ರಶಸ್ತಿ ಪಡೆದ ಇವರು ಜನಪದ ಸಂಗ್ರಹ, ಅಧ್ಯಯನ, ಅಧ್ಯಾಪನದಲ್ಲಿ ನಿರತರು.   ಇದೇ ದಿನ ಹುಟ್ಟಿದ ಸಾಹಿತಿಗಳು : ಸದಾನಂದನಾಯಕ್ – ೧೯೧೩ ಎಂ.ಬಿ. ಸಿಂಗ್ – ೧೯೨೫ ಸ್ವರ್ಣಂ ಭೂಪಾಳಂ – ೧೯೪೭

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top