ಡಾ. ಚೆನ್ನಕ್ಕ ಪಾವಟೆ

Home/Birthday/ಡಾ. ಚೆನ್ನಕ್ಕ ಪಾವಟೆ
Loading Events
This event has passed.

೧೨-೩-೧೯೫೧ ಸಂಶೋಧನಾ ಕ್ಷೇತ್ರದಲ್ಲಿ ಸುಪರಿಚಿತರಾಗಿರುವ ಚೆನ್ನಕ್ಕ ಪಾವಟೆಯವರು ಹುಟ್ಟಿದ್ದು ಧಾರವಾಡದಲ್ಲಿ. ಇವರ ತಂದೆ ತಾಯಿಗಳು ಐತಿಹಾಸಿಕ ಪ್ರಸಿದ್ಧ ಪ್ರದೇಶ ಬಂಕಾಪುರದಿಂದ ವಲಸೆ ಬಂದು ನೆಲಸಿದವರು. ತಂದೆ ಚೆನ್ನಬಸಪ್ಪ, ತಾಯಿ ನೀಲಗಂಗಮ್ಮ. ಪ್ರಾರಂಭಿಕ ಶಿಕ್ಷಣ ಧಾರವಾಡದ ಪ್ರೆಸೆಂಟೇಷನ್ ಹೈಸ್ಕೂಲು ಮತ್ತು ಯೂನಿವರ್ಸಿಟಿ ಪಬ್ಲಿಕ್ ಶಾಲೆಯಲ್ಲಿ. ಫಿಲಾಸಫಿ, ಹಿಂದಿ ವಿಷಯಗಳಲ್ಲಿ ಬಿ.ಎ. ಪದವಿ. ಶಾಸನ ಅಧ್ಯಯನವನ್ನೇ ಪ್ರತ್ಯೇಕ ವಿಷಯವಾಗಿ ಅಭ್ಯಸಿಸಿದ್ದು ಎಂ.ಎ. ತರಗತಿಯಲ್ಲಿ. ‘ಶಾಸನಗಳಲ್ಲಿ ಕರ್ನಾಟಕದ ಸ್ತ್ರೀಯರು’ ವಿಷಯದಲ್ಲಿ ಪಿಎಚ್.ಡಿ. ಪಡೆದಿದ್ದು. ಜೊತೆಗೆ ೧೯೮೫ರಲ್ಲಿ ಡಿಪ್ಲೊಮ ಇನ್ ಎಫಿಗ್ರಫಿ ಪದವಿ ಪಡೆದಿದ್ದಾರೆ. ೧೯೭೩ರಲ್ಲಿ ಉದ್ಯೋಗದ ಬೇಟೆ ಪ್ರಾರಂಭ. ಅಂಜುಮಾನ್ ಜ್ಯೂನಿಯರ್ ಕಾಲೇಜು ಧಾರವಾಡ, ಕೆ.ಎಲ್.ಇ. ಸಂಸ್ಥೆಯ ಮೃತ್ಯುಂಜಯ ಕಲಾ ವಾಣಿಜ್ಯ ಮಹಾವಿದ್ಯಾಲಯ ಮತ್ತು ಇದೀಗ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಆರ್.ಸಿ. ಹಿರೇಮಠ ಕನ್ನಡ ಅಧಯ್ಯನ ಪೀಠದಲ್ಲಿ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಾರಂಭದಿಂದಲೂ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕಿ. ಕನ್ನಡ ನಾಡು ನುಡಿಗಾಗಿ ಹೋರಾಟಕ್ಕೆ ಯಾವಾಗಲೂ ಸಿದ್ಧ. ಗೋಕಾಕ ಚಳುವಳಿ ಸಂದರ್ಭದಲ್ಲಿ ಬಂಧನ, ೪ ದಿನ ಸೆರೆಮನೆ ವಾಸ, ವೃತ್ತಿಯ ಜೊತೆಗೆ ನಿರ್ವಹಿಸಿದ್ದು ಹಲವಾರು ಜವಾಬ್ದಾರಿಗಳು. ವಿಶ್ವವಿದ್ಯಾಲಯದ ಅಕೆಡಮಿಕ್ ಕೌನ್ಸಿಲ್ ಸದಸ್ಯೆಯಾಗಿಯೂ ಕಾರ‍್ಯ ನಿರ್ವಹಣೆ. ನಿರಂತರ ಸಂಶೋಧನೆ-ಸಂಶೋಧನಾ ಕ್ಷೇತ್ರದಲ್ಲಿ ಪ್ರಕಟಿಸಿದ್ದು ಹಲವಾರು ಕೃತಿಗಳು-ಶಾಸನಗಳಲ್ಲಿ ಕರ್ನಾಟಕದ ಸ್ತ್ರೀ ಸಮಾಜ, ಪ್ರಾಚೀನ ಕರ್ನಾಟಕ ರಾಣಿಯರು, ಬಂಕಾಪುರ ಶೋಧನೆ, ಸಂಸ್ಕೃತಿ ಸಂಶೋಧನೆ, ಹಾನಗಲ್ಲು ಕದಂಬರು, ಶರಣ ಕ್ಷೇತ್ರ ಉಳವಿ, ಕಿತ್ತೂರು ಕಥನ, ಬೆಳವಡಿ ಸಂಸ್ಥಾನ ಸಾಹಿತ್ಯ, ಕನ್ನಡ ಶಾಸನಗಳಲ್ಲಿ ರಾಷ್ಟ್ರಕೂಟ ಸಾಮಂತ ಚಲ್ಲಕೇತನರು ಮುಂತಾದುವು. ವೈಚಾರಿಕ ಕೃತಿಗಳು-ಸಾಹಿತ್ಯ ಚೈತ್ರ, ವಚನ ಸನ್ನಿ, ಸುಯಿದಾನ, ಅನುಗ್ರಹ ಶರಣ ಸಂಸ್ಕೃತಿ ಮುಖಾಮುಖಿ ಮೊದಲಾದುವು. ಸಂಪಾದಿತ ಕೃತಿಗಳು-ಮಹಾದೇವಿಯಕ್ಕನ ವಚನಗಳು ವಚನ ಮಂಜರಿ, ದುರ್ಗಸಿಂಹ, ಕಿತ್ತೂರು ಸಂಸ್ಥಾನ ಸಾಹಿತ್ಯ (ಭಾಗ ೧, ೨) ಮಡಿವಾಳ ಮಾಚಿದೇವರ ವಚನಗಳು ಮುಂತಾದುವು. ಪ್ರಶಾಂತ, ಧರ್ಮದೀಪ್ತಿ, ಪೇಜಾವರ ಶ್ರೀ, ಸಚ್ಛರಿತ ಮುಂತಾದ ಅಭಿನಂದನ ಗ್ರಂಥಗಳಿಗೆ ಲೇಖನಗಳು. ರೂಪಕ ಸಾಹಿತ್ಯ-ಬೆಳವಡಿ ಭಾಗ್ಯಶ್ರೀ ಮತ್ತು ಇತರ ರೂಪಕಗಳು. ಮಕ್ಕಳ ಸಾಹಿತ್ಯ-ಲಾಲಿ ಚಿನ್ನ. ಒಟ್ಟು ೪೦ಕ್ಕೂ ಹೆಚ್ಚು  ಕೃತಿ ಪ್ರಕಟಿತ. ಸಂದ ಪ್ರಶಸ್ತಿಗಳು-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸ.ಸ. ಮಾಳವಾಡ ಪ್ರಶಸ್ತಿ, ವಸುದೇವ ಭೂಪಾಳಂ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಸಾವಿತ್ರಮ್ಮ ದತ್ತನಿ ಪ್ರಶಸ್ತಿ, ಅಂತಾರಾಷ್ಟ್ರೀಯ ಮಹಿಳಾವರ್ಷ ಪ್ರಶಸ್ತಿ, ಅತ್ತಿಮಬ್ಬೆ  ಪ್ರತಿಷ್ಠಾನ ಪ್ರಶಸ್ತಿ, ಸದೋದಿತ ಪ್ರಶಸ್ತಿ, ಚಾಲುಕ್ಯ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಆರ‍್ಯಾಂಬ ಪಟ್ಟಾಭಿ – ೧೯೩೬ ಎಸ್.ಪಿ. ಜಾವಳಿ – ೧೯೩೮ ರಾಮಚಂದ್ರಭಾವೆ – ೧೯೪೯ ಕೊಡಗಿನ ಸೀತಮ್ಮ – ೧೯೫೨

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top