ಡಾ.ಜಿ. ಎಸ್.ಗಾಯಿ

Home/Birthday/ಡಾ.ಜಿ. ಎಸ್.ಗಾಯಿ
Loading Events
This event has passed.

..೧೯೧೭ ..೧೯೯೫ ಇತಿಹಾಸಕಾರ, ಶಾಸನ ತಜ್ಞ, ಕವಿ ಗೋವಿಂದರಾವ್, ಸ್ವಾಮಿರಾವ್ ಗಾಯಿ ಅವರು ಹುಟ್ಟಿದ್ದು ಬಿಜಾಪುರದಲ್ಲಿ ಮಾರ್ಚ್ ೩ರ ೧೯೧೭ರಲ್ಲಿ. ತಂದೆ ಸ್ವಾಮಿರಾವ್ ತಾಯಿ ಅಂಬಿಕಾ. ಪ್ರಾರಂಭಿಕ ಶಿಕ್ಷಣ ಹುಟ್ಟಿದ್ದು ಬಿಜಾಪುರದಲ್ಲಿ. ಪುಣೆಯ ವಾಡಿಯಾ ಕಾಲೇಜಿನಿಂದ ಸಂಸ್ಕೃತ ಅಧ್ಯಯನ ನಡೆಸಿ ಮುಂಬಯಿ ವಿಶ್ವವಿದ್ಯಾಲಯದಿಂದ ಪಡೆದ ಬಿ.ಎ. (ಆನರ್ಸ್) ಪದವಿ ೧೯೩೯, ಫರ್ಗುಸನ್ ಕಾಲೇಜಿನಲ್ಲಿ ಎಂ.ಎ. ತರಗತಿಗಳಿಗೆ ಹಾಜರಾದರೂ ಕಾರಣಾಂತರದಿಂದ ಪದವಿ ಪಡೆಯಲಾಗಲಿಲ್ಲ. ಆದರೆ ಬ್ರಾಷಾಶಾಸ್ತ್ರದ ವಿಷಯದಲ್ಲಿ ಅಧ್ಯಯನ ಮಾಡಬೇಕೆಂಬ ಇಚ್ಛೆಯಿಂದ ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನ ಸಂಸ್ಥೆಯ ಮೂಲಕ ಪ್ರಾಚೀನ ಕನ್ನಡ ಶಾಸನಗಳ ಭಾಷೆಯ ಚಾರಿತ್ರಿಕ ವ್ಯಾಕರಣವನ್ನು ಕುರಿತು ಸಂಶೋಧನೆ ನಡೆಸಿದರು. ವಿ.ಎಸ್. ಸುಕ್ಥಣಕರ್‌, ಸಿ.ಶಂಕರನ್ ಮತ್ತು ಎಸ್.ಎಂ.ಕತ್ರೆಯವರ ಮಾರ್ಗದರ್ಶನದಲ್ಲಿ `HISTORICAL GRAMMER OF THE 8TH AND 9TH CENTURIES AD’ ಎಂಬ ಮಹಾಪ್ರಬಂಧವನ್ನು ಮುಮಬಯಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಪಿಎಚ್‌ಡಿ ಪದವಿ ಪಡೆದರು (೧೯೪೩). ಹೀಗೆ ಪಿಎಚ್‌ಡಿ ಪಡೆದ ಕನ್ನಡಿಗರಲ್ಲಿ ಈ ಕ್ಷೇತ್ರದಲ್ಲಿ ಇವರೇ ಮೊದಲಿಗರು. ಶಾಸನಗಳ ಕ್ಷೇತ್ರದಲ್ಲೇ ಅದ್ವಿತೀಯ ಪಾಂಡಿತ್ಯ ಪಡೆದದ್ದರಿಂದ ಶಿಲಾಶಾಸನಗಳ ಇಲಾಖೆಗೆ ಸೇರಿ ವೃತ್ತಿಯನ್ನು ನೀಲಗಿರಿಯಲ್ಲಿದ್ದ ಭಾರತ ಸರಕಾರದ ಪ್ರಾಚ್ಯವಸ್ತು ಮತ್ತು ಶಿಲಾಶಾಸನಗಳ ಇಲಾಖೆಗೆ ಶಾಸನ ಸಹಾಯಕರಾಗಿ ೧೯೪೩ರಲ್ಲಿ ಸೇರಿ ಆರು ವರ್ಷಗಳ ಕಾಲ ಅಲ್ಲಿದ್ದು ನಂತರ ಧಾರವಾಡದಲ್ಲಿ ದ್ರಾವಿಡ ಭಾಷಾ ವಿಜ್ಞಾನದ ರೀಡರ್‌ ಎಂದು ಕನ್ನಡ ಸಂಶೋಧನ ಸಂಸ್ಥೆಯಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರಾದರೂ ಪುನಃ ಶಾಸನ ಇಲಾಖೆಗೆ ಹಿರಿಯ ಸಹಾಯಕರಾಗಿ ನೇಮಕಗೊಂಡು ಸೂಪರಿಂಟೆಂಡೆಂಟರ್‌ವರೆವಿಗೂ ಭಡ್ತಿ ಪಡೆದು ಕಾರ್ಯ ನಿರ್ವಹಿಸಿದರು. ದೇಶದಲ್ಲಲ್ಲದೆ ವಿದೇಶದ ಶಾಸನ ಸಂಸ್ಥೆಗಳೊಡನೆಯೂ ಒಡನಾಟ ಹೊಂದಿದ್ದ ಗಾಯಿಯವರು ರಾಕ್‌ಫೆಲರ್‌ ಪ್ರತಿಷ್ಠಾನದ ಫೆಲೊ ಆಗಿ ೯ ತಿಂಗಳು ಅಮೆರಿಕದ ವಿದ್ವಾಂಸರೊಡನೆ ಸಂದರ್ಶನ, ವಿಚಾರವಿನಿಮಯದಿಂದ ಪಾಂಡಿತ್ಯವನ್ನು ಬೆಳೆಸಿಕೊಂಡರು. ಇದಲ್ಲದೆ ಶ್ರೀಲಂಕಾದಲ್ಲಿ ನಡೆದ ಏಷ್ಯಾದ ಪುರಾತತ್ವಶಾಸ್ತ್ರದ ದ್ವಿತೀಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಮತ್ತು ಶಾಸನ ಮತ್ತು ಲಿಪಿ ವಿಭಾಗದ ಅಧ್ಯಕ್ಷರಾಗಿ, ೧೯೭೩ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಪ್ರಾಚ್ಯ ವಿದ್ಯಾವಿದರ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಭಾಗಿ ಮತ್ತು ಭಾರತ ಶಾಕೆಯ ಪ್ರಾಚೀನ ಇತಿಹಾಸದ ಗೋಷ್ಠಿಯ ಅಧ್ಯಕ್ಷತೆ, ೧೯೭೪ರಲ್ಲಿ ಕಲಕತ್ತೆಯ ಜಾಧವ ಪುರ ವಿಶ್ವವಿದ್ಯಾಲಯದ INDIAN HISTORY CONGRESS ನ ೩೫ನೇ ಸಮ್ಮೇಳನದ ಶಾಸನ ಶಾಸ್ತ್ರ ವಿಭಾಗದ ಅಧ್ಯಕ್ಷತೆ, ೧೯೭೬ ರಲ್ಲಿ ನಡೆದ ಜೆ.ಎಫ್‌.ಫ್ಲೀಟ್ ವಿಚಾರ ಗೋಷ್ಠಿಯ ಅಧ್ಯಕ್ಷತೆ, ೧೯೮೮ ರಲ್ಲಿ ತುಮಕೂರಿನಲ್ಲಿ ನಡೆದ ಕರ್ನಾಟಕ ಇತಿಹಾಸ ಅಕಡಮಿಯ ೨ ನೆಯ ವಾರ್ಷಿಕ ಅಧಿವೇಶನದ ಅಧ್ಯಕ್ಷತೆ, ೧೯೯೨ ರಲ್ಲಿ ಮೈಸೂರಿನಲ್ಲಿ ಸೇರಿದ್ದ ಇತಿಹಾಸ ಪರಿಷತ್ತಿನ ವಾರ್ಷಿಕ ಅಧಿವೇಶನದ ಅಧ್ಯಕ್ಷತೆ – ಹೀಗೆ ಹಲವಾರು ಶಾಸನ ಶಾಸ್ತ್ರದ ಅಧಿವೇಶನಗಳ ಅಧ್ಯಕ್ಷತೆ ವಹಿಸಿದ್ದರು. ಸಮಾನ ಮನಸ್ಕರೊಡನೆ ಸೇರಿ ೧೯೭೪ ರಲ್ಲಿ ಮೈಸೂರಿನಲ್ಲಿ ಸ್ಥಾಪಿಸಿದ್ದು EPIGRAPHICAL SOCIETY OF INDIA ಎಂಬ ಅಖಿಲ ಭಾರತೀಯ ಸಂಸ್ಥೆ ಯ ಸ್ಥಾಪಕ ಅಧ್ಯಕ್ಷರಾಗಿ, ೧೯೭೮ ರಲ್ಲಿ PLACE NAME SOCIETY OF INDIA ಎಂಬ ಅಖಿಲ ಭಾರತೀಯ ಸಂಸ್ಥೆಯನ್ನು ಸ್ಥಾಪಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಕರ್ನಾಟಕ ಹಾಗೂ ಹೊರಗಿನ ಅನೇಕ ಸಂಘ ಸಂಸ್ಥೆಗಳೊಡನೆ ಸಕ್ರಿಯವಾಗಿ ಭಾಗಿಯಾಗಿದ್ದಲ್ಲದೆ ಕರ್ನಾಟಕ ಸರಕಾರದ ಗೆಜೆಟಿಯರ್‌ ನ ಸಲಹಾ ಮಂಡಲಿಲ, ಪುರಾಭಿಲೇಖನ ಸಂಸ್ಥೆ (KARNATAKA STATE ARCHIVES) ಸಲಹಾ ಮಂಡಲಿ, ಭಾರತ ಸರಕಾರದ ಇತಿಹಾಸ ಸಂಶೋಧನ ಭಾರತ ಮಹಾಮಂಡಲ (INDIAN COUNCIL OF HISTRORICAL RESEARCH) ಶಾಸನ ವಿಭಾಗದ ಸಲಹಾಮಂಡಲಿ, ಮೈಸೂರು ವಿಶ್ವವಿದ್ಯಾಲಯದ ಎಪಿಗ್ರಾಫಿಯ ಕರ್ನಾಟಕದ ಪರಿಷ್ಕರಣ ಮತ್ತು ಪುನರ್‌ ಮುದ್ರಣ ಯೋಜನೆ ಸಲಹಾ ಮಂಡಳಿ ಮುಂತಾದವುಗಳಲ್ಲಿ ಸದಸ್ಯರಾಗಿ ದುಡಿದಿದ್ದಾರೆ. ಇವುಗಳ ಜೊತೆಗೆ ದೇಶ ವಿದೇಶಗಳಲ್ಲಿ ನಡೆದ ಭಾರತದ ಇತಿಹಾಸ, ಪುರಾತತ್ವ ಶಾಸನಶಾಸ್ತ್ರ, ಭಾಷಾವಿಜ್ಞಾನದ, ಸಂಸ್ಕೃತಿಯ ಬಗ್ಗೆ ನಡೆದ ಸಮ್ಮೇಳನಗಳಲ್ಲಿ ಪ್ರಬಂಧಕಾರರಾಗಿ, ಭಾಷಣಕಾರರಾಗಿ, ಉದ್ಘಾಟಕರಾಗಿ, ಸಮಾರೋಪಕರಾಗಿಯೂ ಪಾಲ್ಗೊಂಡಿದ್ದಾರೆ. ವಿದ್ಯುತ್ ಪೂರ್ಣ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟಗೊಂಡಿವೆ. ಕನ್ನಡನಾಡು, ನುಡಿ, ಸಂಸ್ಕೃತಿಗೆ ಸಂಬಂಧಿಸಿದ ಮತ್ತು ಕದಂಬ, ರಾಷ್ಟ್ರಕೂಟ, ಹೊಯ್ಸಳ, ಗುಪ್ತ, ಕೆಳದಿಯ ನಾಯಕರು, ಮೌರ್ಯರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರ ರಾಜವಂಶಗಳ ಬಗ್ಗೆ ವಿಚಾರಪೂರಿತ ಲೇಖನಗಳು ಪ್ರಬುದ್ಧ ಕರ್ನಾಟಕ, ಮಾನವಿಕ ಕರ್ನಾಟಕ, ಗೌರವ ಗ್ರಂಥಗಳಲ್ಲಿ ಸೇರ್ಪಡೆಯಾಗಿವೆ. ಡಾ.ಜಿ.ಎಸ್.ಗಾಯಿಯವರು ಶಾಸನಗಳ ಸಂಕಲನ, ಸಂಪಾದನೆಗಳ ಕೆಲಸದಲ್ಲಿ ಕ್ರಮವಹಿಸಿದ್ದಾರೆ. ಎಪಿಗ್ರಾಫಿಯ ಇಂಡಿಕದ ೨೭,೨೮,೩೨ ರಿಂದ ೩೬ ಮತ್ತು ೩೮ ಹೀಗೆ ಎಂಟು ಸಂಪುಟಗಳಲ್ಲಿ ಸಂಸ್ಕೃತ, ಕನ್ನಡ ಶಾಸನಗಳನ್ನು ಪರಿಷ್ಕರಿಸಿ ಸಂಪಾದಿಸಿ ಪ್ರಕಟಿಸದ್ದಲ್ಲದೆ ಇಂಗ್ಲೀಷ್ ಭಾಷೆಯಲ್ಲಿ, ಮೂರು ಸ್ವತಂತ್ರ ಕೃತಿಗಳನ್ನು ಕನ್ನಡದಲ್ಲಿ ಎರಡು ಭಾಷಾಂತರ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಅವು ಪಿಎಚ್‌ಡಿ ಕೃತಿ ಮತ್ತು ‘ಸ್ಟಡೀಸ್ ಇನ್ ಇಂಡಿಯನ್ ಹಿಸ್ಟರ್‌’ ಎಪಿಗ್ರಫಿ ಅಂಡ್ ಕಲ್ಚರ್‌ ಎಂಬ ಕೃತಿಗಳು. ಹೀಗೆ ಭಾರತೀಯ ಶಾಸ್ತ್ರದ ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ಸಂಶೋಧನೆಗಳನ್ನು ನಡೆಸುತ್ತಾ ದೇಶ ವಿದೇಶಗಳಲ್ಲಿಯೂ ಶಾಸನ ತಜ್ಞರೆಂದೇ ಖ್ಯಾತಿಗಳಿಸಿದ್ದ ಡಾ. ಗಾಯಿಯವರು ನಿಧನರಾದದ್ದು ಫೆಬ್ರವರಿ ೨ರ ೧೯೫೫ರಲ್ಲಿ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top