ಡಾ. ಜಿ. ರಾಮಕೃಷ್ಣ

Home/Birthday/ಡಾ. ಜಿ. ರಾಮಕೃಷ್ಣ
Loading Events
This event has passed.

೧೭-೬-೧೯೩೯ ವಿಚಾರವಾದಿ, ಚಿಂತಕ, ಸಾಹಿತಿ ರಾಮಕೃಷ್ಣರವರು ಹುಟ್ಟಿದ್ದು ಮಾಗಡಿ ಬಳಿಯ ಕೆಂಪಸಾಗರವಾದರೂ ವಂಶ ಪಾರಂಪರ‍್ಯವಾಗಿ ಬಂದಿದ್ದು ಗಂಪಲಹಳ್ಳಿ ರಾಮಕೃಷ್ಣರೆಂದೇ. ತಂದೆ ಸುಬ್ರಹ್ಮಣ್ಯಂ, ತಾಯಿ ನರಸಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕೆಂಪಸಾಗರ, ಪ್ರೌಢಶಾಲೆಗೆ ಸೇರಿದ್ದು ಮಾಗಡಿಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್), ಎಂ.ಎ. (ಸಂಸ್ಕೃತ) ಪದವಿ. ಪೂನ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್) ಪದವಿ. ಮೈಸೂರು ವಿಶ್ವವಿದ್ಯಾಲಯಕ್ಕೆ “ORIGIN AND GROWTH OF THE CONCEPT OF RHUTA IN VEDIC LITERATURE” ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಮತ್ತು ವೇಲ್ಸ್ ವಿಶ್ವವಿದ್ಯಾಲಯದಿಂದ ‘ಕೋಲ್‌ರಿಜ್ ಅಂಡ್ ಮಿಸ್ಟಿಸಿಸಮ್’ ಎಂಬ ಮಹಾಪ್ರಬಂಧ ಮಂಡಿಸಿ, ಪಡೆದ ಮತ್ತೊಂದು ಪೋಸ್ಟ್ ಗ್ರಾಜುವೇಟ್ ಡಿಪ್ಲೊಮ ಪದವಿ. ಉದ್ಯೋಗಕ್ಕಾಗಿ ಸೇರಿದ್ದು ಅಕೌಂಟೆಂಟ್ ಜನರಲ್‌ರವರ ಕಚೇರಿಯಲ್ಲಿ ಒಂದು ವರ್ಷದ ಸೇವೆ ಸಲ್ಲಿಸಿ ನಂತರ ಆಯ್ಕೆಯಾದದ್ದು ಮೈಸೂರು ವಿಶ್ವವಿದ್ಯಾಲಯದ ಯುಜಿಸಿ ರಿಸರ್ಚ್ ಫೆಲೊ ಆಗಿ. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಕಾಲ. ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರಾಗಿ, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ. ಬ್ರಿಟನ್, ಐರ‍್ಲೆಂಡ್, ಟಿಬೆಟ್, ನೇಪಾಳ, ಆಫ್‌ಘಾನಿಸ್ತಾನ, ಸೋವಿಯತ್ ರಷ್ಯಾ ಪ್ರವಾಸದಿಂದ ಪಡೆದ ಅನುಭವ. ಹಲವಾರು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗಿ. ಮಾಲೆ ಪ್ರಕಾಶನ ಮತ್ತು ಅಚಲ ಮಾಸ ಪತ್ರಿಕೆ ಪ್ರಕಾಶನದ ಸಂಪೂರ್ಣ ಹೊಣೆ. ಪ್ರಕಟಿತ ಕೃತಿಗಳು-ವಿಚಾರ ಸಾಹಿತ್ಯ-ಮುನ್ನೋಟ, ವೈಚಾರಿಕ ಜಾಗೃತಿ, ದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ. ವ್ಯಕ್ತಿಚಿತ್ರ-ಭಗತ್‌ಸಿಂಗ್, ಭೂಪೇಶಗುಪ್ತ, ಜೆಗೆವಾರ, ಲೆನಿನ್. ಅನುವಾದ-ಬಾನೊಣವೇ… ವಾನರನಿಂದ ಮಾನವ, ದರ್ಶನ. ಹಲವಾರು ಸಂಪಾದಿತ ಕೃತಿಗಳು. ಸಂದ ಗೌರವ ಪ್ರಶಸ್ತಿಗಳು. ಮುನ್ನೋಟ, ಆಯತನ, ಭಾರತೀಯ ವಿಜ್ಞಾನದ ಹಾದಿ ಕೃತಿಗಳಿಗೆ ರಾಜ್ಯಸಾಹಿತ್ಯ ಅಕಾಡಮಿ ಬಹುಮಾನ. ೨೦೦೨ರ ರಾಜ್ಯೋತ್ಸವ ಪ್ರಶಸ್ತಿಯನ್ನು ವಿನಯದಿಂದ ನಿರಾಕರಿಸಿ ತೋರಿದ ಗೌರವ. ಪ್ರಸ್ತುತ ಹೊಸತು ಪತ್ರಿಕೆಯ ಸಂಪಾದಕತ್ವ.   ಇದೇ ದಿನ ಹುಟ್ಟಿದ ಸಾಹಿತಿಗಳು : ಗವಿಸಿದ್ದ ಎನ್. ಬಳ್ಳಾರಿ – ೧೯೫೦ ಸರಸ್ವತಿ ಎಂ. ಗೌಡ – ೧೯೫೨ ಜಯಪ್ರಕಾಶ್ ಬಂಜಗೆರೆ – ೧೯೬೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top