ಡಾ. ದ್ವಾರಕಾನಾಥ್ ಎಚ್. ಕಬಾಡಿ

Home/Birthday/ಡಾ. ದ್ವಾರಕಾನಾಥ್ ಎಚ್. ಕಬಾಡಿ
Loading Events
This event has passed.

೧೭-೨-೧೯೩೬ ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಹೊನ್ನುಸಾ, ತಾಯಿ ಗೌರಮ್ಮ. ವಿದ್ಯಾಭ್ಯಾಸ ಬೆಂಗಳೂರಿನಲ್ಲೇ. ಬಿ.ಕಾಂ., ಬಿ.ಎಲ್. ಪದವಿ ಪಡೆದ ನಂತರ ಲೆಕ್ಕ ಪರಿಶೋಧಕರಾಗಿ ವೃತ್ತಿ ಆರಂಭ. ಹಚ್ಚಿಕೊಂಡ ಸಾಹಿತ್ಯದ ಗೀಳು. ವಿದ್ಯಾರ್ಥಿ ದೆಸೆಯಿಂದಲೇ ಕೀಟ್ಸ್, ಎಲಿಯೆಟ್, ಷೆಲ್ಲಿ, ಷೇಕ್ಸ್‌ಪಿಯರ್ ಮತ್ತು ಕನ್ನಡ ಕವಿಗಳ ಅಧ್ಯಯನ. ಕಾಲೇಜು ಮ್ಯಾಗಜಿನ್‌ನಲ್ಲಿ ‘ಗೌರಿಶಂಕರ’ ಎಂಬ ಕವನ ಪ್ರಕಟ. ಹುಚ್ಚೆದ್ದು ಕುಣಿದಾಡಿದ ಮನಸ್ಸು. ಕಥಾವಳಿ, ಮೈಸಿಂಡಿಯಾ ಪತ್ರಿಕೆಗಳಿಗೆ ಬರವಣಿಗೆ. ರಾಜಾಸ್ಥಾನದ ಕವಿ ನರದೇವ ಶರ್ಮರವರ ಮೇಲೆ ಬರೆದ MONOGRAPH ON STYLISTICS ಮಹಾಪ್ರಬಂಧ ಮಂಡನೆ. ಬಿಹಾರದ ಡಾ. ಬ್ರಿಜ್ ಕಿಶೋರ್ ಪಾಂಡೆಯವರ ಸಮಗ್ರ ಆಂಗ್ಲ ಕವನ ಸಂಕಲನ ಕುರಿತ ಮಹಾಪ್ರಬಂಧಕ್ಕೆ ಕುನ್ವಾರ್ ವಿಶ್ವವಿದ್ಯಾಲಯದ ಡಾಕ್ಟರೇಟ್. ಇಂಗ್ಲಿಷ್, ಕನ್ನಡ ಎರಡು ಭಾಷೆಯ ಪರಿಣತಿ, ಬರಹಗಳು. ರಾಜರತ್ನಂ ಮುನ್ನುಡಿಯ ‘ಹೊನ್ನಿನ ಮಡಿಲಲ್ಲಿ’ ಕಾದಂಬರಿ ೧೯೬೦ರಲ್ಲಿ ಪ್ರಕಟ. ಗೀತಗಂಗೋತ್ರಿ, ಸ್ವಪ್ನಸೋಪಾನ, ಹೀಗೂ ಒಂದು ಇತಿಹಾಸ, ಬೆಳಕ ಬಿಂಬದಲ್ಲಿ ಮುಂತಾದ ಕವನ ಸಂಕಲನಗಳು. ಮಿಂಚಿನ ಬುಟ್ಟಿ, ಕೋಲ್ಮಿಂಚಿನ ದಾರಿಯಲ್ಲಿ-ವಿನೂತನ ತ್ರಿಪದಿಗಳು. ಬಿಂಬ-ಪ್ರತಿಬಿಂಬ, ಪಿರಮಿಡ್ ಮಾದರಿಯ ಸಾಲುಗಳ ರಚನೆಯ ಪಿರಮಿಡ್ ಕವನ ಸಂಗ್ರಹ. ಇಂಗ್ಲಿಷ್‌ನಲ್ಲಿ ಬರೆದ ಕವನ ಸಂಕಲನಗಳು ಹಲವಾರು-LAMPS OF HOPES, RYE ON THE RAVINES, RUPTURED SENSES, TENDER WINGS, PYRAMID POEMS ಮುಂತಾದುವು. RYE ON THE RAVINES ಮೂರು ಸಾಲಿನ ಫ್ಲಿಕ್ಕರ್ ಇಂಗ್ಲಿಷ್‌ನಲ್ಲಿ ಪ್ರಸಿದ್ಧಿ ತಂದ ಕೃತಿ. ಬಾಲ್ಟಿಮೋರ್‌ನ ವಿಶ್ವಕವಿ ಸಮ್ಮೇಳನದ ಛಾನ್ಸಲರ್ ಆಗಿ ಆಯ್ಕೆ. ಲಂಡನ್ನಿನ ರೀಜನ್ಸಿ ಪ್ರೆಸ್‌ನಿಂದ ODE TO MY WINDOWS ಕಾವ್ಯಕ್ಕೆ ಬಹುಮಾನ. ಕಾವ್ಯರಚನೆಗಾಗಿ ಡೆಲ್ಲೆ, ಆರ್ತೆ, ಇಟಲಿ ವಿಶ್ವವಿದ್ಯಾಲಯದ ಡಿಪ್ಲೊಮ ಶ್ರೇಣಿಯ ಮನ್ನಣೆ, ಫಿಲಿಫೈನ್ಸ್ ಅಂತಾರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ  ಪ್ರಶಂಸೆ. ನೆಪೋಲಿ ಅಕಾಡಮಿಯಿಂದ SYMPHONY OF SKELETONS ಕೃತಿ ಪ್ರಕಟಣೆ. ಮೆಲ್ಬೋರ್ನ್ ಕಾವ್ಯ ಸಂಘದಿಂದ TENDER WINGS ಕೃತಿಗೆ ಮನ್ನಣೆ. SING O RAIN SING ನ್ಯೂಯಾರ್ಕ್ ಮತ್ತು ಬಾಲ್ಟಿಮೋರ್‌ನಲ್ಲಿ ಬ್ಯಾಲೆಯಾಗಿ ಪ್ರದರ್ಶನ. RYE ON THE RAVINESಗೆ ಮೈಕೇಲ್ ಮಧುಸೂಧನ ದತ್ತ ಪ್ರಶಸ್ತಿ, WORLD LITERARY ACADEMY OF POETS-ಕ್ಯಾಲಿಫೋರ್ನಿಯಾ ; WORLD ACADEMY OF ARTS AND CULTURE ಚೆನ್ನೈ ; WORLD POETRY SOCIETY ಫೆಲೋ ಆಗಿ ಆಯ್ಕೆ ಆಗಿದ್ದಾರೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ವಿನೋದಾಬಾಯಿ – ೧೯೩೦ ಆರ್. ನಾಗರಾಜಪ್ಪ – ೧೯೫೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top