Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಡಾ. ನಳಿನಿಮೂರ್ತಿ – ಕಣಜ

ಡಾ. ನಳಿನಿಮೂರ್ತಿ

Home/Birthday/ಡಾ. ನಳಿನಿಮೂರ್ತಿ
Loading Events
This event has passed.

೨೪.೨.೧೯೩೭ ೨೦.೧೦.೧೯೯೨ ವಿಜ್ಞಾನ ಸಂಶೋಧಕಿ, ಸಂವಹನ ತಂತ್ರಜ್ಞೆ, ಸಾಹಿತಿ, ಕಲೋಪಾಸಕಿ ಶ್ರೀಮತಿ ನಳಿನಿಮೂರ್ತಿಯವರು ಹುಟ್ಟಿದ್ದು ಚಿತ್ರದುರ್ಗದಲ್ಲಿ. ತಂದೆ ಎಂ.ಆರ್. ಸೀತಾರಾಮ್, ವಿದ್ಯುತ್ ಇಲಾಖೆಯಲ್ಲಿ ಎಂಜನಿಯರ್. ತಾಯಿ ಅನ್ನಪೂರ್ಣ. ಪ್ರಾರಂಭಿಕ ವಿದ್ಯಾಭ್ಯಾಸ ಶಿಂಷಾದಲ್ಲಿ. ಓದಿದ್ದು ಗಣಿತದ ಆನರ್ಸ್. ಕನ್ನಡಕ್ಕೆ ಎ.ಆರ್. ಕೃಷ್ಣಶಾಸ್ತ್ರಿಯವರ ಬಹುಮಾನ. ಆನರ್ಸ್ ಮುಗಿಸಿ ವಿಶ್ವವಿದ್ಯಾಲಯಕ್ಕೆ ಪ್ರಥಮರಾಗಿ ಪಡೆದ ಚಿನ್ನದ ಪದಕ. ನಂತರ ಸೇರಿದ್ದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಎಂಜನಿಯರಿಂಗ್. ಓದಿದ್ದು ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಎಂಜನಿಯರಿಂಗ್. ಇಂಡಿಯನ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ. ಶ್ರೀ ಎಸ್. ನರಸಿಂಗಮೂರ್ತಿಯವರೊಡನೆ ವಿವಾಹ. ಜರ್ಮನಿಗೆ ಪಯಣ. ನಂತರ ಇಂಗ್ಲೆಂಡ್-ಮ್ಯಾಂಚೆಸ್ಟರ್‌ನಲ್ಲಿ  ಎಂ.ಟೆಕ್ ಪದವಿ. ಭಾರತಕ್ಕೆ ವಾಪಸ್ಸಾಗಿ ಮುಂಬೈ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ  ಸಂಶೋಧನೆ. ಮನಸ್ಸಿನಲ್ಲಿ ಏನೋ ಅತೃಪ್ತಿ. ಇನ್ನೂ  ಸಾಸುವಾಸೆ. ಪುನಃ ವಿದೇಶ ಪ್ರಯಾಣ. ೧೯೬೭ರಲ್ಲಿ ಕೆನಡದ ನೋವಸ್ಕೋಶಿಯ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜನಿಯರಿಂಗ್‌ನಲ್ಲಿ ಪಿಎಚ್.ಡಿ. ನೋವಸ್ಕೋಶಿಯ ಪ್ರಾಂತದ ಎಂಜನಿಯರಿಂಗ್ ಸಂಸ್ಥೆ ಸದಸ್ಯತ್ವ. ೧೯೭೨ರಲ್ಲಿ ಜಾಂಬಿಯಕ್ಕೆ ಪಯಣ. ಕೆನಡಕ್ಕೆ ಹಿಂದಿರುಗಿ ಸಣ್ಣ ಶಸ್ತ್ರಚಿಕಿತ್ಸೆಗೊಳಗಾದ್ದು ಪ್ರಿನ್ಸ್ ಜಾರ್ಜ್ ಆಸ್ಪತ್ರೆಯಲ್ಲಿ. ಕೆಲದಿನಗಳ ನಂತರ ಆಕಸ್ಮಿಕ ಮರಣ. ‘ಪ್ರತಿಜ್ಞೆ’ ಕಾದಂಬರಿ ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟ. ವಿದೇಶ ಸುತ್ತಾಡಿ ಕನ್ನಡಕ್ಕೆ ಕೊಡುಗೆ ನೀಡಿ, ರಚಿಸಿದ ಕೃತಿಗಳು ಹಲವಾರು. ಸಾಮಾಜಿಕ ಕಾದಂಬರಿ-ಬಿಸಿಲು ಮಳೆ (೧೯೬೭), ಬೀಸಿ ಬಂದ ಬಿರುಗಾಳಿ (೧೯೭೯), ಹೊಸಬಾಳು (೧೯೮೨). ಮಕ್ಕಳಿಗಾಗಿ-ಗಣಕದ ಕಥೆ (೧೯೮೦), ಗಣಕ ಎಂದರೇನು (೧೯೮೦). ಕಿರು ಕಾದಂಬರಿ-ಬಂಗಾರದ ಜಿಂಕೆ (೧೯೮೨), ಊರ್ಮಿಳಾ (೧೯೮೮), ಪ್ರತಿಜ್ಞೆ (೧೯೯೪)ರಲ್ಲಿ ಪ್ರಕಟ. ಶ್ರೀಮತಿ ನಳಿನಿಯವರ ಪತಿ ಸಹಕಾರದಿಂದ ಅವರು ಬರೆದಿದ್ದ ಸಾಹಿತ್ಯ, ವಿಜ್ಞಾನ ಲೇಖನಗಳ ‘ಸಾಹಿತ್ಯ ವಿಜ್ಞಾನ’ ಸಂಕೀರ್ಣ ಕೃತಿ ಇತ್ತೀಚೆಗೆ ಪ್ರಕಟಗೊಂಡಿದೆ.   ಇದೇ ದಿನ ಹುಟ್ಟಿದ ಸಾಹಿತಿ : ಕಾಶಿ ವಿಶ್ವನಾಥ ಶೆಟ್ಟಿ – ೧೯೨೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top