
ಡಾ. ಪದ್ಮಾಮೂರ್ತಿ
July 24, 2024
೨೪.೭.೧೯೩೨ ಮ್ಯೂಸಿಕ್ ಸೈಕಾಲಜಿಯಲ್ಲಿ ವಿಶೇಷ ಅಧ್ಯಯನ ನಡೆಸಿ ಡಾಕ್ಟರೇಟ್ ಪಡೆದಿರುವ ಪದ್ಮಾಮೂರ್ತಿಯವರು ಹುಟ್ಟಿದ್ದು ಮೈಸೂರು. ಪತಿ ಪಿಟೀಲು ವಿದ್ವಾಂಸರಾದ ಟಿ.ಎಸ್. ಮೂರ್ತಿ. ಚಿಕ್ಕಂದಿನಿಂದಲೂ ಸಂಗೀತದಲ್ಲಿ ಅಭಿರುಚಿ. ಮೈಸೂರು ವಾಸುದೇವಾಚಾರ್ಯರು, ಟಿ ಚೌಡಯ್ಯ, ಟಿ. ಪುಟ್ಟಸ್ವಾಮಯ್ಯ, ಶೆಲ್ವಪುಳ್ಳೆ ಅಯ್ಯಂಗಾರ್, ತಿಟ್ಟೆ ಕೃಷ್ಣ ಅಯ್ಯಂಗಾರ್, ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಮುಂತಾದವರಿಂದ ಸಂಗೀತ ಗಾಯನ, ಎಚ್. ಎಸ್. ಕೃಷ್ಣಮೂರ್ತಿ, ಆರ್. ಎಸ್. ಕೇಶವಮೂರ್ತಿ ಇವರಿಂದ ಪಡೆದ ವೀಣಾವಾದನ ಶಿಕ್ಷಣ. ಸೈಕಾಲಜಿ ಆಫ್ ಮ್ಯೂಸಿಕ್ ಮಹಾಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಡಾಕ್ಟರೇಟ್ ಪದವಿ. ಬೆಂಗಳೂರು ವಿಶ್ವವಿದ್ಯಾಲಯದ ಕಲಾ ವಿಭಾಗದ ಮುಖ್ಯಸ್ಥರಾಗಿ, ಮದರಾಸು ಮ್ಯೂಸಿಕ್ ಅಕಾಡಮಿಯ ತಜ್ಞರ ಸಮಿತಿಯ ಸದಸ್ಯರಾಗಿ ಸಲ್ಲಿಸಿದ ಸೇವೆ. ವಾಗ್ಗೇಯಕಾರರಾಗಿ ಕರ್ನಾಟಕ ಸಂಗೀತ ಲಕ್ಷಣ ಸಂಗ್ರಹ ೨ ಭಾಗಗಳಲ್ಲಿ ಪ್ರಕಟಿತ. ಪ್ರಮುಖ ಪತ್ರಿಕೆಗಳಿಗೆ ಸಂಗೀತದ ಬಗ್ಗೆ ಬರೆದ ಹಲವಾರು ಲೇಖನಗಳು. ರಾಜ್ಯದ ಹಲವಾರು ಕಡೆ, ಹೊರರಾಜ್ಯಗಳಲ್ಲಿ ಕಚೇರಿ ನಡೆಸಿದ ಕೀರ್ತಿ ವಿದೇಶಗಳಲ್ಲಿ ನೀಡಿದ ಪ್ರದರ್ಶನ, ಪ್ರಾತ್ಯಕ್ಷಿಕೆ, ಗಾಯನ, ವೀಣಾವಾದನದ ಕಚೇರಿ. ಹಲವಾರು ಗ್ರಾಮಫೋನ್ ರೆಕಾರ್ಡ್‌ಗಳ ಬಿಡುಗಡೆ. ಮದರಾಸು ಪಾರ್ಥಸಾರಥಿ ಸಭಾ, ಮ್ಯೂಸಿಕ್ ಅಕಾಡೆಮಿಯಿಂದ ವಿದ್ಯಾರತ್ನ ಪ್ರಶಸ್ತಿ. ಗಾಯನ ಸಮಾಜ, ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ. ಇದೀಗ ಮೈಸೂರಿನ ಗಣಪತಿ ಸಚ್ಛಿದಾನಂದ ಆಶ್ರಮದಲ್ಲಿ ಮ್ಯೂಸಿಕ್ ಥೆರಪಿಯ ವಿಭಾಗದ ಮುಖ್ಯಸ್ಥರ ಜವಾಬ್ದಾರಿ. ಇದೇ ದಿನ ಹುಟ್ಟಿದ ಕಲಾವಿದೆ ವೃಂದಾ ಮೆಹತಾ – ೧೯೭೩
* * *