ಡಾ. ಪದ್ಮಾಶೇಖರ್

Home/Birthday/ಡಾ. ಪದ್ಮಾಶೇಖರ್
Loading Events

೧೧-೧೨-೧೯೫೩ ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನದಲ್ಲಿ ಪ್ರಮುಖರೆನಿಸಿರುವ ಪದ್ಮಾಶೇಖರ್ರ‌‌ವರು ಹುಟ್ಟಿದ್ದು ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನ ತೊರೆನೂರು. ತಂದೆ ವೆಂಕಟಪ್ಪನಾಯ್ಡು, ತಾಯಿ ಜಯಲಕ್ಷ್ಮಿ. ಪ್ರಾರಂಭಿಕ ಶಿಕ್ಷಣ ಕುಶಾಲನಗರ, ಹೆಬ್ಬಾಲೆ, ಸೋಮವಾರ ಪೇಟೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಉನ್ನತ ಶ್ರೇಣಿಯಲ್ಲಿ. ಜೈನಶಾಸ್ತ್ರದಲ್ಲಿ ಚಿನ್ನದ ಪದಕದೊಡನೆ ಪಿಎಚ್.ಡಿ. ಪದವಿ. ಶಾಸನ ಶಾಸ್ತ್ರ ಮತ್ತು ಜೈನಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೊಮ. ಹುಣಸೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭ. ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಜೈನ ಶಾಸ್ತ್ರ ಮತ್ತು ಪ್ರಾಕೃತ ವಿಭಾಗದ ಅಧ್ಯಕ್ಷರಾಗಿ, ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ವಿವಿಧೆಡೆಗಳಲ್ಲಿ ಸೇವೆ. ಐದು ಮಂದಿ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ, ಯಶಸ್ವಿ ಪದವಿ. ಆರು ಜನ ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ನಿರತರು. ಮೈಸೂರು ವಿಶ್ವವಿದ್ಯಾಲಯದ ಶಿಕ್ಷಣ ಮಂಡಲಿ, ಸೆನೆಟ್, ಹಣಕಾ ಸಮಿತಿ, ಅಧ್ಯಯನ ಕೇಂದ್ರ, ಪರೀಕ್ಷಾಮಂಡಲಿ, ಜೈನಶಾಸ್ತ್ರ ವಿಭಾಗದ ಅಧ್ಯಯನ ಮಂಡಲಿ, ಮುಂತಾದುವುಗಳ ಸದಸ್ಯೆಯಾಗಿ, ಸ್ನಾತಕೋತ್ತರ ಅಧ್ಯಾಪಕರ ಸಂಘದ ಸಹಕಾರ್ದಯರ್ಶಿಯಾಗಿ, ಅಧ್ಯಾಪಕರ ಸಂಘದ ಖಜಾಂಚಿಯಾಗಿ ನಿರ್ವಹಿಸಿದ ಕಾರ್ಯಗಳು. ಪ್ರಕಟಿತ ಕೃತಿಗಳು. ಜೈನಶಾಸ್ತ್ರದ ಕೆಲವು ಅಧ್ಯಯನಗಳು, ಕನ್ನಡ ಛಂದಸ್ಸು ಒಂದು ಅವಲೋಕನ. ವಿಮರ್ಶೆ-ರತ್ನಾಕರನ ಭರತೇಶ ವೈಭವ, ಪರಿಸ್ಪಂದನ. ಕವನ ಸಂಕಲನ-ಹಕ್ಕಿಯ ಹರೆಯ, ಉರಿಯ ಚಪ್ಪರ, ಜೀವಂಧರನ ಕಥಾಸಾಹಿತ್ಯ. ಸಂಪಾದಿತ-ಶ್ರೀಕಂಠ, ಪಂಚಲಿಂಗ, ವಜ್ರದೀಪ್ತಿ, ಶ್ರೀಮುಖ, ನಮ್ಮ ನಾಯಕರು, ನಮ್ಮ ನಾಡೋಜ, ನಾಗಸಂಪಿಗೆ. ಸಂದ ಪ್ರಶಸ್ತಿಗಳು. ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಬಹುಮಾನ, ಅಂಬರೀಶ ಸಾಹಿತ್ಯ ಪ್ರಶಸ್ತಿ, ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಬಹುಮಾನ, ಗೊರೂರು ಪ್ರಶಸ್ತಿ, ಗೊಮ್ಮಟೇಶ್ವರ ವಿದ್ಯಾಪೀಠ ಪ್ರಶಸ್ತಿ, ಸಾಹಿತ್ಯ ದಂಪತಿ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಶಾಂತಕ್ಕ ಮಠದ – ೧೯೩೫ ಶಾಂತಲಾ ಯೋಗೀಶ ಯಡ್ರಾವಿ – ೧೯೪೨ ಎ. ಶ್ರೀಶದೇವ ಪೂಜಿತ್ರಾಯ – ೧೯೪೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top