Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಡಾ. ಬಸವರಾಜ ಸಬರದ – ಕಣಜ

ಡಾ. ಬಸವರಾಜ ಸಬರದ

Home/Birthday/ಡಾ. ಬಸವರಾಜ ಸಬರದ
Loading Events

೨೦-೬-೧೯೫೪ ಕವಿ, ಚಿಂತಕ, ನಾಟಕಕಾರ, ಸಾಮಾಜಿಕ ಹೋರಾಟ ಗಾರರಾದ ಬಸವರಾಜ ಸಬರದರವರು ಹುಟ್ಟಿದ್ದು ಕೊಪ್ಪಳ ಜಿಲ್ಲೆಯ ಕುಕನೂರು. ತಂದೆ ಬಸಪ್ಪ ಸಬರದ, ತಾಯಿ ಬಸಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಕುಕನೂರಿನಲ್ಲಿ. ಗದಗದ ಜೆ.ಟಿ. ಕಾಲೇಜಿನಿಂದ ಬಿ.ಎ. ಪದವಿ, ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. (ಕನ್ನಡ), ಡಿಪ್ಲೊಮ ಇನ್ ಎಪಿಗ್ರಫಿ ಮತ್ತು “ಬಸವೇಶ್ವರ ಮತ್ತು ಪುರಂದರದಾಸರು : ಒಂದು ಸಾಂಸ್ಕೃತಿಕ ಅಧ್ಯಯನ” ಕುರಿತು ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿ ರಾಯಭಾಗ ಆರ್ಟ್ಸ್ ಕಾಲೇಜು, ಬೀದರ ಕರ್ನಾಟಕ ಕಾಲೇಜು, ಔರದ್‌ನ ಅಮರೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ, ಗುಲಬರ್ಗಾ ವಿ.ವಿ. ನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ೨೫ ವರ್ಷ ಅಧ್ಯಾಪನಕಾರ‍್ಯ. ಜೊತೆಗೆ ಗುಲಬರ್ಗಾ ವಿ.ವಿ.ದ ಶೈಕ್ಷಣಿಕ ಮಂಡಳಿ, ಕನ್ನಡ ಅಭ್ಯಾಸ ಮಂಡಳಿ, ಕಲಾನಿಕಾಯದ, ಕನ್ನಡ ವಿಭಾಗದ, ಸದಸ್ಯತ್ವ. ಪರೀಕ್ಷಾಮಂಡಲಿಯ ಚೇರ್‌ಮನ್, ವಿ.ವಿ.ದ ಅಫಿಲಿಯೇಷನ್ ಕಮಿಟಿ ಚೇರ್‌ಮನ್ ಮುಂತಾದ ಜವಾಬ್ದಾರಿಯುತ ಹುದ್ದೆಗಳು. ಇವರ ಮಾರ್ಗದರ್ಶನದಲ್ಲಿ ೧೫ ವಿದ್ಯಾರ್ಥಿಗಳು ಎಂ.ಫಿಲ್, ೪ ವಿದ್ಯಾರ್ಥಿಗಳು ಪಿಎಚ್.ಡಿ ಯಶಸ್ವಿ ಗಳಿಕೆ. ಸಾಮಾಜಿಕ ಹೋರಾಟದಲ್ಲಿ ಮುಂಚೂಣಿ ನಾಯಕರು. ಅಸ್ಪೃಶ್ಯತಾ ನಿವಾರಣಾ, ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ದಲಿತ-ಬಂಡಾಯ ಚಳವಳಿಯ ನೇತಾರರಾಗಿ…ಹೀಗೆ ಹಲವಾರು ಜನಪರ ಹೋರಾಟಗಳಲ್ಲಿ ಭಾಗಿ. ಅಧ್ಯಾಪನದ ಜೊತೆಗೆ ಬರವಣಿಗೆ. ಹಲವಾರು ಕೃತಿ ರಚನೆ. ಕವನ ಸಂಕಲನಗಳು-ನನ್ನವರ ಹಾಡು, ಹೋರಾಟ, ಮೂಡಲಕ ಕೆಂಪು ಮೂಡ್ಯಾನ, ನೂರು ಹನಿಗಳು, ದನಿಯೆತ್ತಿ ಹಾಡೇನ, ಬೆಳದಿಂಗಳು ಬಿಸಿಲಾತು ಮೊದಲಾದ ೧೦ ಸಂಕಲನಗಳು. ನಾಟಕಗಳು-ಪ್ರತಿರೂಪ, ರೆಕ್ಕೆ ಮೂಡಿದಾಗ, ಬೆಳ್ಳಿ, ನರಬಲಿ, ಬೆಳ್ಳಕ್ಕಿ ಸಾಲು, ಬೀದಿ ನಾಟಕಗಳು ಮುಂತಾದ ೧೪ ಕೃತಿಗಳು. ವಿಚಾರ ಸಾಹಿತ್ಯ-ವಿಚಾರ ಸಂಪದ, ಶಾಸನಗಳು, ಪ್ರಭುತ್ವ ಮತ್ತು ಜನತೆ, ಸಮುದಾಯ ಮತ್ತು ಸಂಸ್ಕೃತಿ. ಸಂಶೋಧನೆ-ಬಸವೇಶ್ವರ ಮತ್ತು ಪುರಂದರದಾಸರು, ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವಿಗಳು. ವಿಮರ್ಶೆ-ಹೊಸದಿಕ್ಕು, ವಚನ ಚಳವಳಿ, ಸಾಹಿತ್ಯ ಸಂಗಾತಿ, ಜಾನಪದ, ಅನಂತಮೂರ್ತಿ ಕೃತಿಗಳು, ನಿರಂಜನ ಕೃತಿಗಳು. ಸಂಪಾದಿತ-ದಲಿತ ಸೂರ‍್ಯ, ಕಲ್ಯಾಣನಾಡಿನ ಕೆಂಪು ಕವಿತೆಗಳು, ಆಯ್ದ ಕವನಗಳು, ಶರಣರ ಬಂಡಾಯ ವಚನಗಳು, ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು ಮುಂತಾದ ೬೦ಕ್ಕೂ ಹೆಚ್ಚು ಕೃತಿ ಪ್ರಕಟಿತ. ಸಂದ ಗೌರವ ಪ್ರಶಸ್ತಿಗಳು-ದೇವರಾಜ ಬಹದ್ದೂರ್ ಪ್ರಶಸ್ತಿ, ಗುಲಬರ್ಗಾ ವಿ.ವಿ.ದ ಪುರಸ್ಕಾರ, ಕುವೆಂಪು ಸಾಹಿತ್ಯ ಪುರಸ್ಕಾರ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡಮಿ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ ಪ್ರಮುಖವಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ರಮಜಾನ ದರ್ಗಾ – ೧೯೫೧ ಲೀಲಾ ಮಣ್ಣಾಲ – ೧೯೫೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top