ಡಾ. ಯು. ಮಹೇಶ್ವರಿ

Home/Birthday/ಡಾ. ಯು. ಮಹೇಶ್ವರಿ
Loading Events
This event has passed.

೧೮-೩-೧೯೫೮ ಕರ್ನಾಟಕ, ಕೇರಳ ಗಡಿ ಪ್ರದೇಶದ ಕಾಸರಗೋಡಿನಲ್ಲಿ ಕನ್ನಡಕ್ಕಾಗಿ ಸದಾ ಪರಿತಪಿಸುತ್ತಿರುವ ಡಾ. ಮಹೇಶ್ವರಿಯವರು ಹುಟ್ಟಿದ್ದು ಕಾಸರಗೋಡು ತಾಲ್ಲೂಕಿನ ಬೇಳಗ್ರಾಮಕ್ಕೆ ಸೇರಿದ ಉಳ್ಳೋಡಿ ಎಂಬ ಹಳ್ಳಿಯಲ್ಲಿ. ತಂದೆ ಗಂಗಾಧರಭಟ್ಟ, ತಾಯಿ ಸರಸ್ವತಿ ಅಮ್ಮ. ಎಂಟನೆಯ ಮಗುವಾಗಿ (ಅವಳಿ-ಜವಳಿ) ಹುಟ್ಟಿದ ಹೆಣ್ಣು ಮಗುವೇ ಮಹೇಶ್ವರಿಯವರು. ಪ್ರಾಥಮಿಕ ವಿದ್ಯಾಭ್ಯಾಸ ನಡೆದುದು ಮಾನ್ಯ ಜ್ಞಾನೋದಯ ಹಿರಿಯ ಬುನಾದಿ ಶಾಲೆಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ನವಜೀವನ ಪ್ರೌಢಶಾಲೆ ಪೆರಡಾಲದಲ್ಲಿ. ಓದಿನಲ್ಲಿ ಯಾವಾಗಲೂ ಮುಂದು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲಾ ವಿಷಯದಲ್ಲೂ ಪ್ರಥಮ ಸ್ಥಾನ. ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ), ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಸಂಸ್ಥೆಯಿಂದ ಎಂ.ಎ. (ಇಂಗ್ಲಿಷ್), ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ‘ಕನ್ನಡದ ಮೊದಲ ಕಾದಂಬರಿಗಳು-ಒಂದು ಸ್ತ್ರೀವಾದಿ ಅಧ್ಯಯನ’ದ ಮೇಲೆ ಪಡೆದ ಪಿಎಚ್.ಡಿ. ಪದವಿ. ಪದವಿಯ ನಂತರ ಉದ್ಯೋಗದ ಬೇಟೆ. ತಾತ್ಕಾಲಿಕವಾಗಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಕಾಲ. ಇದೀಗ ಹಿರಿಯ ಶ್ರೇಣಿಯ ಕನ್ನಡ ಉಪನ್ಯಾಸಕಿಯಾಗಿ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಸೇವೆ. ವಿದ್ಯಾರ್ಥಿ ದೆಸೆಯಲ್ಲಿಯೇ ಸಾಹಿತ್ಯ ಮತ್ತು ಸುಗಮ ಸಂಗೀತ ಸ್ಪರ್ಧೆಗಳಲ್ಲಿ ಅಂತರ ಕಾಲೇಜು ಮಟ್ಟದಲ್ಲಿ ಗಳಿಸಿದ ಹಲವಾರು ಬಹುಮಾನಗಳು. ಹಲವಾರು ಕೃತಿ ರಚನೆ-ಮುಗಿಲಹಕ್ಕಿ (ಕವನ ಸಂಕಲನ). ಇದು ಮಾನುಷಿಯ ಓದು (ವಿಮರ್ಶೆ, ಸಂಶೋಧನೆ). ಮಧುರವೇ ಕಾರಣ (ವೈಚಾರಿಕ ಲೇಖನಗಳ ಸಂಕಲನ). ಧರೆಯುಗರುವದಿ ಮೆರೆಯಲಿ (ಕವನಸಂಕಲನ) ಪ್ರಕಟಿತ. ಆಕಾಶವಾಣಿ ಕವಿಗೋಷ್ಠಿ, ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ, ಆಕಾಶವಾಣಿ ಯುಗಾದಿ ಕವಿಗೋಷ್ಠಿ, ಮೈಸೂರು ದಸರಾ ಕವಿಗೋಷ್ಠಿ, ಆಳ್ವಾಸ್ ನುಡಿಸಿರಿ ಕವಿ ಸಮಯ (ಗೋಷ್ಠಿ), ಕುವೆಂಪು ಶತಮಾನೋತ್ಸವದ ಉಡುಪಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಕವಿಗೋಷ್ಠಿ, ಪುತ್ತೂರಿನ ಸೇಡಿಯಾಪು ಶತಮಾನೋತ್ಸವ ಕಾರ‍್ಯಕ್ರಮ, ಕನಕಪುರ, ಮೂಡಿಬಿದಿರೆ ಕನ್ನಡ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ ಮುಂತಾದ ಕವಿಗೋಷ್ಠಿಗಳಲ್ಲಿ ಭಾಗಿ. ಸಂದ ಪ್ರಶಸ್ತಿಗಳು-ಮುಗಿಲ ಹಕ್ಕಿ ಕವನ ಸಂಕಲನಕ್ಕೆ ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ, ಇದು ಮಾನುಷಿಯ ಓದು ವಿಮರ್ಶಾಕೃತಿಗೆ ವಿ. ಎಂ. ಇನಾಂದಾರ್ ಪ್ರಶಸ್ತಿ, ಸುಶೀಲಾ ಶೆಟ್ಟಿ ಸ್ಮಾರಕ ಪ್ರಶಸ್ತಿ, ಅಣ್ಣಯ್ಯ ಮಾಸ್ತರ ಪ್ರಶಸ್ತಿ ಮುಂತಾದ ಪ್ರಮುಖ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿ : ಬಿ.ವೈ. ಲಲಿತಾಂಬ – ೧೯೪೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top