೦೭.೦೫.೧೯೪೯ ಸಂಗೀತಜ್ಞ, ಶಿಕ್ಷಣ ತಜ್ಞರಾದ ರಮಣಕುಮಾರ್ ರವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ. ತಂದೆ ಬಿ.ಎಲ್. ಸೂರಪ್ಪ, ತಾಯಿ ಕಮಲಮ್ಮ, ತಂದೆಯಿಂದಲೇ ಸಂಗೀತದ ಮೊದಲ ಪಾಠ. ನಂತರ ಮಂಜುಳಾ ಬಾಯಿ, ಎ. ಸುಬ್ಬರಾವ್, ಡಾ. ಎಂ. ಬಾಲಮುರಳಿಕೃಷ್ಣ ಮುಂತಾದವರಲ್ಲಿ ಸಂಗೀತದ ಮುಂದುವರೆದ ಶಿಕ್ಷಣ. ಓದಿದ್ದು ಕನ್ನಡ ಎಂ.ಎ. ಸಂಶೋಧನಾ ವಿದ್ಯಾರ್ಥಿಯಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ೨ ವರ್ಷ. ೧೯೬೭ ರಲ್ಲಿ ಮೊದಲ ರ್ಯಾಂಕ್ನಲ್ಲಿ ಪಡೆದ ಸಂಗೀತದ ವಿದ್ವತ್ ಪದವಿ. “ಕರ್ನಾಟಕ ಸಂಗೀತ ರಚನೆಗಳಲ್ಲಿ ಗೇಯತೆ’ ಮಹಾ ಪ್ರಬಂಧ ಮಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಹಲವಾರು ಕಾಲೇಜುಗಳಲ್ಲಿ ಸಂಗೀತ ಶಿಕ್ಷಣದ ಗೌರವ ಪ್ರಾಧ್ಯಾಪಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಿದ ಸಂಗೀತ ಶಿಕ್ಷಣ, ತಿರುಪತಿ, ಆಂಧ್ರ, ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಸಿದ್ಧಗೊಳಿಸುವಿಕೆ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಿ.ಎಚ್.ಡಿ. ಪದವಿಗಾಗಿ ಮಾರ್ಗದರ್ಶಿಯಾಗಿ ನಿರ್ವಹಿಸಿದ ಕಾರ್ಯ. ಕಳೆದ ೨೫ ವರ್ಷಗಳಿಂದಲೂ ಕರ್ನಾಟಕದಾದ್ಯಂತ ನೀಡಿದ ಗಾಯನ ಕಚೇರಿಗಳು. ಪಿಟೀಲುವಾದನದಲ್ಲೂ ನೀಡಿದ ಸೋಲೋ ಕಾರ್ಯಕ್ರಮ. ಬೆಂಗಳೂರು ಗಾಯನ ಸಮಾಜ, ಶ್ರೀ ರಾಜೇಶ್ವರಿ ಕಲಾನಿಕೇತನ, ಮಲ್ಲೇಶ್ವರಂ ಸಂಗೀತ ಸಭಾ, ಪಾರ್ಥಸಾರಥಿ ಸಂಗೀತ ಸಭಾ, ಚೆನ್ನೈ ಕನ್ನಡ ಸಂಘ ಮುಂತಾದ ಕಡೆಗಳಲ್ಲಿ ನೀಡಿದ ಸಂಗೀತ ಕಾರ್ಯಕ್ರಮಗಳು. ಹಲವಾರು ಕೃತಿಗಳ ರಚನೆ. ಮೇಳಕರ್ತಲಕ್ಷಣಕೃತಿಮೂಲ ಮತ್ತು ವರ್ಣಗಳು ಕೃತಿಗಳ ರಚನೆ. ಶ್ರೀಪುರಂದರದಾಸರ ಗಾನಾಮೃತ, ’ರಾಗಶ್ರೀ’ ಕರ್ನಾಟಕ ಶಾಸ್ತ್ರೀಯ ಸಂಗೀತದ ಧ್ವನಿ ಸುರುಳಿಗಳ ಬಿಡುಗಡೆ. ಬೆಂಗಳೂರು ಗಾಯನ ಸಮಾಜದ ಉತ್ತಮ ಗಾಯಕ ಪ್ರಶಸ್ತಿ, ಬೆಂಗಳೂರಿನ ಲಲಿತ ವಿದ್ಯಾಮಂದಿರ ಗುರುಕುಲ ಪೀಠದಿಂದ ಗಾಯನ ಗಂಧರ್ವ, ಅಹಮದಾಬಾದ್ ಸಂಗೀತ ಸಭಾದಿಂದ ಗಾನ ಪ್ರಭಾಕರ, ಭಾರತ-ಭಾರತಿ ಸಂಗೀತ ಸೇವಾ ಪ್ರತಿಷ್ಠಾನದಿಂದ ಪ್ರಶಸ್ತಿ, ಸಂಗೀತ ಮತ್ತು ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು ಶೆಲ್ವ ನಾರಾಯಣ – ೧೯೪೫ ರಮೇಶ್. ಟಿ.ನ್- ೧೯೫೫ ವಲ್ಲೀಶ್.ವಿ- ೧೯೫೬.

