Loading Events

« All Events

  • This event has passed.

ಡಾ. ಲತಾ ಗುತ್ತಿ

August 12

೧೨-೮-೧೯೫೩ ಸಾಹಿತಿ, ಪ್ರವಾಸಾಸಕ್ತೆ ಲತಾಗುತ್ತಿಯವರು ಹುಟ್ಟಿದ್ದು ಬೆಳಗಾವಿಯಲ್ಲಿ. ತಂದೆ ನಾಗನಗೌಡ, ತಾಯಿ ಶಾಂತಾದೇವಿ ಪಾಟೀಲ. ತಂದೆ ರಾಜ್ಯಸರಕಾರದ ಅಕಾರಿಯಾಗಿದ್ದುದರಿಂದ ಹಲವಾರು ಕಡೆಗೆ ವರ್ಗ. ಪ್ರಾರಂಭಿಕ ಶಿಕ್ಷಣ ಹಲವಾರು ಕಡೆಗಳಲ್ಲಿ ಬೆಳಗಾವಿಯಲ್ಲಿ ಬಿ.ಎ. ಪದವಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ ಮತ್ತು ಇಂಗ್ಲಿಷ್) ಪದವಿ. “ಪ್ರವಾಸ ಸಾಹಿತ್ಯ : ಅನ್ಯ ಸಂಸ್ಕೃತಿಗಳ ಅಧ್ಯಯನ” ಮಹಾಪ್ರಬಂಧಕ್ಕೆ ಪಿಎಚ್.ಡಿ. ಪದವಿ. ಉದ್ಯೋಗಿ ಪತಿಯೊಡನೆ ಹದಿನೈದು ವರ್ಷಗಳಷ್ಟು ದೀರ್ಘಕಾಲ ವಿದೇಶಿ ನೆಲದಲ್ಲಿ. ಇಟಲಿ, ಫ್ರಾನ್ಸ್, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಸೌದಿ ಅರೇಬಿಯಾಗಳಲ್ಲಿ ವಾಸ. ಇದೀಗ ಬೆಂಗಳೂರಿನಲ್ಲಿ ಪತಿಯೊಡನೆ ತಮ್ಮದೇ ಕಂಪ್ಯೂಟರ್ ತಂತ್ರಾಂಶ ಕಚೇರಿಯಲ್ಲಿ ಕಾರ‍್ಯ ನಿರ್ವಹಣೆ. ತಾಯಿ ನಾಡಿನಿಂದ ಹಲವಾರು ವರ್ಷ ದೂರವಿದ್ದರೂ ಕನ್ನಡ ಸಾಹಿತ್ಯದಲ್ಲಿ ವಿಶೇಷ ಒಲವು. ವಿದೇಶ ಪ್ರವಾಸದಲ್ಲಿ ಪಡೆದ ವಿಶೇಷ ಅನುಭವ. ಜಗತ್ತಿನ ಅನೇಕ ಸಂಸ್ಕೃತಿಗಳನ್ನು ಅತಿ ಹತ್ತಿರದಿಂದ ಕಂಡು ಪ್ರವಾಸ ಸಾಹಿತ್ಯದ ಬಗ್ಗೆ ಸಂಶೋಧನಾ ಕೃತಿ ರಚಿಸಿದ್ದಲ್ಲದೆ ಮೂರು ಪ್ರವಾಸ ಸಾಹಿತ್ಯ ಕೃತಿ ರಚನೆ. ಕಥೆ, ಕವನ, ಕಾದಂಬರಿಗಳ ರಚನೆ. ಕಾವ್ಯ-ವರ್ತಮಾನ, ಗಾಂಜಾಡಾಲಿ, ಬೆಳ್ಳಿಹೂವು, ಸೂಜಿಗಲ್ಲು. ಪ್ರವಾಸಸಾಹಿತ್ಯ-ಯುರೋನಾಡಿನಲ್ಲಿ, ನಾ ಕಂಡ ಅರೇಬಿಯಾ, ಪ್ರವಾಸ ಸಾಹಿತ್ಯದ ಒಳನೋಟಗಳು. ಸಂಪಾದಿತ-ರಾಷ್ಟ್ರೀಯ ಅಂತಾರಾಷ್ಟ್ರೀಯ ದಿನಾಚರಣೆಗಳು. ಕಥಾ ಸಂಕಲನ- ಕಡಲಾಚೆಯ ಕಥೆಗಳು. ಕಾದಂಬರಿ-ಹೆಜ್ಜೆ. ವ್ಯಕ್ತಿಚಿತ್ರ-ಡಾ. ಲೀಲಾವತಿ ತೊರಣಗಟ್ಟಿ ಮುಂತಾದ ೧೨ ಕೃತಿ ಪ್ರಕಟಿತ. ಸಂದ ಪ್ರಶಸ್ತಿಗಳು. ವರ್ತಮಾನ ಕೃತಿಗೆ-ರಾಜ್ಯ ಸರಕಾರದ ಬಹುಮಾನ, ಗಾಂಜಾಡಾಲಿ ಕೃತಿಗೆ-ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ ಮುದ್ದಣ ಕಾವ್ಯಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಬೆಳ್ಳಿ ಹೂವು ಕೃತಿಗೆ-ಚುಟಕು ಭೂಷಣ ಪ್ರಶಸ್ತಿ, ಸೂಜಿಗಲ್ಲು ಕೃತಿಗೆ-ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿ ಪ್ರಶಸ್ತಿ, ಯುರೋನಾಡಿನಲ್ಲಿ ಕೃತಿಗೆ-ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಮಹಿಳಾ ವರ್ಷ ಪ್ರಶಸ್ತಿ, ನಾ ಕಂಡ ಅರೇಬಿಯಾ ಕೃತಿಗೆ-ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಜೊತೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ತರಗತಿಗೆ ಪಠ್ಯವಾಗಿ ಆಯ್ಕೆ. ಕಡಲಾಚೆಯ ಕಥೆಗಳು ಕೃತಿಗೆ-ಗೊರೂರು ಪ್ರಶಸ್ತಿ ಮತ್ತು ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎನ್. ವಸಂತಕುಮಾರ್ – ೧೯೪೦ ಕ್ಯಾತನ ಹಳ್ಳಿ ರಾಮಣ್ಣ – ೧೯೪೨ ಪಿ.ಆರ್. ತಿಪ್ಪೇಸ್ವಾಮಿ – ೧೯೨೨

Details

Date:
August 12
Event Category: