Loading Events

« All Events

  • This event has passed.

ಡಾ. ವರದರಾಜ ಹುಯಿಲಗೋಳ

August 13, 2023

೧೩-೮-೧೯೧೭ ೧೦-೧೦-೧೯೯೩ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಗಣ್ಯ ಕೊಡುಗ ನೀಡಿರುವ ವರದರಾಜರು ಹುಟ್ಟಿದ್ದು ವಿಜಾಪುರ ಜಿಲ್ಲೆಯ ಮುದ್ದೇ ಬಿಹಾಳದಲ್ಲಿ. ತಂದೆ ರಾಜೇರಾಯರು, ತಾಯಿ ಗೋದಾವರಿಬಾಯಿ. ರಂ.ಶ್ರೀ. ಮುಗಳಿಯವರು ಇವರ ಸೋದರಮಾವನಾದರೆ ಆಲೂರು ವೆಂಕಟರಾಯರು ಮಾವನವರು. ಪ್ರಾರಂಭಿಕ ಶಿಕ್ಷಣ ಮುದ್ದೇ ಬಿಹಾಳ. ಹೈಸ್ಕೂಲು ಗದಗದಲ್ಲಿ. ಕಾಲೇಜಿಗೆ ಸೇರಿದ್ದು ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜು. ೧೯೪೩ರಲ್ಲಿ ಬಿ.ಎ. (ಆನರ್ಸ್) ಪದವಿ, ಎಂ.ಎ. ಪದವಿ, ೧೯೪೭ರಲ್ಲಿ ಬಿ.ಟಿ. ಪದವಿ. ೧೯೬೯ರಲ್ಲಿ ‘ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಬಿ.ಎ. (ಆನರ್ಸ್) ಪದವಿಯ ನಂತರ ಕೆಲಕಾಲ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಶಿಕ್ಷಣ ವೃತ್ತಿ. ಎಂ.ಎ. ಪದವಿ ನಂತರ ಹಾವೇರಿಯಲ್ಲಿ ಅಧ್ಯಾಪಕರ ಹುದ್ದೆ. ನಂತರ ಬಾಸೆಲ್ ಮಿಷನ್ ಜ್ಯೂ. ಕಾಲೇಜಿನಲ್ಲಿ ಅಧ್ಯಾಪಕರಾಗಿ, ಉಪಪ್ರಾಚಾರ‍್ಯರಾಗಿ ಸೇವೆ ಸಲ್ಲಿಸಿ ೧೯೬೭ರಲ್ಲಿ ನಿವೃತ್ತಿ. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯ ಚಟುವಟಿಕೆಯಲ್ಲಿ ಭಾಗಿ. ‘ವರುಣಕುಂಜ’ ಚಟುವಟಿಕೆಗಳ ಕೇಂದ್ರ. ಜ್ಯೂ. ಬಿ.ಎ.ನಲ್ಲಿದ್ದಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ ‘ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆಗಳ ಸ್ಥಾನ’ ಪ್ರಬಂಧಕ್ಕೆ ಬಂದ ಬಹುಮಾನ. ಸಣ್ಣಕಥೆಗಳು, ಪ್ರಬಂಧಗಳು ಜೀವನ ಮಾಸ ಪತ್ರಿಕೆಯಲ್ಲಿ ಪ್ರಕಟಿತ. ಹಲವಾರು ಕೃತಿರಚನೆ. ಕಥಾಸಂಗ್ರಹ-ಫಲ ಸಂಚಯ, ಚಂದ್ರ-ತಾರೆ, ಬಾಗಿಲು ತೆರೆದಿತ್ತು, ದಯಾಸಾಗರ, ದೀಪವೊಂದು, ನಿನಗೊಂದು ಮಾತು. ನಾಟಕ-ಬಾಡಿಗೆಯ ಮನೆ, ಅಮೃತಮತಿ, ದೀಪಾವಳಿ, ಇದ್ದು ಜಯಿಸಬೇಕು, ಕಂದನ ಕಾದುಕೊ. ಕಾದಂಬರಿ-ಇತಿ-ಶ್ರೀ, ಕ್ರೂರ ಹಂಬಲ, ಅಂದಿನ ವಸಂತ ತಲೆಕೆಳಕಾಗಿ ನಿಂತ. ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ-ಸಾಹಸ ಜೀವಿಗಳು, ಜನಪದ ಕಥೆಗಳು, ರಾಜೇಂದ್ರ ಪ್ರಸಾದ, ಲೋಕಮಾನ್ಯ ಟಿಳಕ, ಹೋರಾಟದ ವೀರರು, ಕಿಟಲ್, ಸಾಹಿತಿಗಳೊಡನೆ ಸರಸ. ಸಂಪಾದಿತ-ಮ.ಗು. ಹಂದ್ರಾಳ, ಇತಿಹಾಸಮತ್ತು ಸಂಸ್ಕೃತಿ, ದೇಶ ಮತ್ತು ಜನರು, ಆಲೂರು ವೆಂಕಟರಾಯರ ಅಪ್ರಕಟಿತ ಲೇಖನಗಳ ಸಂಕಲನ ಸೇರಿ ಸುಮಾರು ೫೪ ಕೃತಿ ಪ್ರಕಟಿತ. ಮಕ್ಕಳ ವಿಶ್ವಕೋಶ ಜ್ಞಾನಗಂಗೋತ್ರಿ ಸಹಾಯಕ ಸಂಪಾದಕರಾಗಿ, ಧಾರವಾಡ ಜಿಲ್ಲಾ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ‍್ಯಕಾರಿ ಸಮಿತಿಯ ಸದಸ್ಯರಾಗಿ, ಇಂಡಿಯಾ ಗೆಜೆಟಿಯರ್ ಭಾಷಾಂತರದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಸಲ್ಲಿಸಿದ ಸೇವೆ. ಧಾರವಾಡದಲ್ಲಿ ಕಥೆಗಾರರ ಸಮ್ಮೇಳನ, ಬೆಳಗಾವಿ ಜಾನಪದ ಸಮ್ಮೇಳನ, ಆಲೂರು ವೆಂಕಟರಾಯರ ಶತಮಾನೋತ್ಸವಗಳ ಯಶಸ್ಸಿನ ರೂವಾರಿ. ೧೯೬೫ರಲ್ಲಿ ಕಾರವಾರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಕಥಾಗೋಷ್ಠಿ ಅಧ್ಯಕ್ಷತೆ. ಧಾರವಾಡದಲ್ಲಿ ನಡೆದ ಮಕ್ಕಳ ಸಾಹಿತ್ಯ ಅಕಾಡಮಿಯ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ-ಸಂದ ಗೌರವಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಎನ್. ಸುಮಿತ್ರಾ -೧೯೩೪ ಸ. ರಘುನಾಥ – ೧೯೫೪

Details

Date:
August 13, 2023
Event Category: