ಡಾ. ವಿ.ಕೃ. ಗೋಕಾಕ್

Home/Birthday/ಡಾ. ವಿ.ಕೃ. ಗೋಕಾಕ್
Loading Events
This event has passed.

೧೦-೮-೧೯೦೯ ೨೮-೪-೧೯೯೨ ಕನ್ನಡ ಸಾಹಿತ್ಯದಲ್ಲಿ ನವ್ಯ ಕಾವ್ಯ ಪ್ರವರ್ತಕರೆಂದೇ ಪ್ರಸಿದ್ಧರಾಗಿದ್ದ ವಿನಾಯಕ ಕೃಷ್ಣ ಗೋಕಾಕರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಸವಣೂರಿನಲ್ಲಿ. ತಂದೆ ಕೃಷ್ಣಗೋಕಾಕ, ತಾಯಿ ಸುಂದರಮ್ಮ. ಪ್ರಾರಂಭಿಕ ಶಿಕ್ಷಣ ಸವಣೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಎ. ಪದವಿ. ೧೯೩೬ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್‌ಗೆ ಪಯಣ. ಭಾರತಕ್ಕೆ ಹಿಂದಿರುಗಿದ ನಂತರ ೧೯೪೦ರಲ್ಲಿ ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜಿನಲ್ಲಿ, ೧೯೪೬ರಲ್ಲಿ ಗುಜರಾತಿನ ವೀಸನಗರ, ೧೯೪೯ರಲ್ಲಿ ಕೊಲ್ಹಾಪುರದ ರಾಜಾರಾಮ್ ಕಾಲೇಜಿನಲ್ಲಿ ಪ್ರಾಚಾರ‍್ಯರಾಗಿ, ೧೯೫೨ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪ್ರಾಚಾರ‍್ಯರ ಹುದ್ದೆ ವಹಿಸಿಕೊಂಡರು. ನಂತರ ೧೯೫೯ರಲ್ಲಿ ಹೈದರಾಬಾದಿನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಸಂಸ್ಥೆಯ ನಿರ್ದೇಶಕರಾಗಿ ೧೯೬೬ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿ ೧೯೭೮ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರಾಗಿ, ೧೯೮೩ರಲ್ಲಿ ಅಧ್ಯಕ್ಷರಾಗಿ, ೧೯೮೫ರಲ್ಲಿ ಪುಟಪರ್ತಿ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಸಲ್ಲಿಸಿದ ಸೇವೆ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಪ್ರಾರಂಭ. ಮೊದಲ ಕವನ ಸಂಕಲನ THE SKY LINE ೧೯೨೫ರಲ್ಲಿ ಸಿದ್ಧ. ‘ಕಲೋಪಾಸಕ’ ಕನ್ನಡದ ಮೊದಲ ಕವನ ಸಂಕಲನ ೧೯೩೪ರಲ್ಲಿ ಪ್ರಕಟಿತ. ನಂತರ ಪಯಣ, ಸಮುದ್ರ ಗೀತೆಗಳು, ತ್ರಿವಿಕ್ರಮರ ಆಕಾಶಗಂಗೆ, ಬಾಳದೇಗುಲದಲ್ಲಿ, ದ್ಯಾವಾಪೃಥಿವಿ, ಕಾಶ್ಮೀರ, ಭಾವರಾಗ, ಪಾರಿಜಾತದಡಿಯಲ್ಲಿ ಮುಂತಾದುವು. ನಾಟಕಗಳು- ಜನನಾಯಕ, ಯುಗಾಂತರ. ಪ್ರಬಂಧ ಸಂಕಲನ-ಜೀವನಪಾಠ, ಚೆಲುವಿನ ನಿಲವು. ಪ್ರವಾಸ ಸಾಹಿತ್ಯ-ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ. ವಿಮರ್ಶೆ-ಕವಿಕಾವ್ಯ ಮಹೋನ್ನತಿ, ನವ್ಯತೆ ಹಾಗೂ ಕಾವ್ಯ ಜೀವನ, ಕಾವ್ಯಮೀಮಾಂಸೆ, ನವ್ಯತೆ. ಇಂಗ್ಲಿಷ್‌ನಲ್ಲಿ-ದಿ ಸಾಂಗ್ ಆಫ್ ಲೈಫ್ ಅಂಡ್ ಪೊಯಮ್, ದಿ ಪೊಯೆಟಿಕ್ ಅಪ್ರೋಚ್ ಟು ಲ್ಯಾಂಗ್ವೇಜ್, ಇಂಗ್ಲಿಷ್ ಇನ್ ಇಂಡಿಯಾ : ಇಟ್ಸ್ ಪ್ರೆಸೆಂಟ್ ಅಂಡ್ ಫ್ಯೂಚರ್, ಇನ್ ಲೈಫ್ಸ್ ಟೆಂಪಲ್, ಎಸ್ಸೆಸ್ ಇನ್ ಇಂಡೋ ಆಂಗ್ಲಿಯನ್ ಲಿಟರೇಚರ್ ಮುಂತಾದುವು ಸೇರಿ ೭೫ ಕೃತಿಗಳ ರಚನೆ. ಭಾರತ ಸಿಂಧುರಶ್ಮಿ ಮಹಾಕಾವ್ಯ. ಸಮರಸವೇ ಜೀವನ ಬೃಹತ್ಕಾದಂಬರಿ. ಸಂದ ಗೌರವ ಪ್ರಶಸ್ತಿಗಳು ಹೇರಳ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಹಿಡಿದು ಹಲವಾರು ಸಮ್ಮೇಳನ, ಗೋಷ್ಠಿಗಳ ಅಧ್ಯಕ್ಷತೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜಾಜಿ ಪ್ರಶಸ್ತಿ, ಕೇಂದ್ರ ಸರಕಾರದ ಪದ್ಮಶ್ರೀ, ಜ್ಞಾನಪೀಠ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಪೆಸಿಫಿಕ್, ವಿ.ವಿ. ಗೌರವ ಡಾಕ್ಟರೇಟ್. INDIAN RESPONSE TO POETRY IN ENGLISH ಸೇರಿದಂತೆ ಹಿತೈಷಿಗಳು ಅರ್ಪಿಸಿದ್ದು ಇಂಗ್ಲಿಷ್‌ನಲ್ಲಿ ೩, ಕನ್ನಡದಲ್ಲಿ ೨೧ ಗೌರವ ಗ್ರಂಥಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಹ.ವೆಂ. ಸೀತಾರಾಮಯ್ಯ – ೧೯೩೨-೧೯೮೭ ಮಳಲಿ ವಸಂತಕುಮಾರ್ – ೧೯೪೫ ರಾಜಶೇಖರ ಶ್ರೀಧರ ಹೆಬ್ಬಾರ – ೧೯೫೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top