Loading Events

« All Events

  • This event has passed.

ಡಾ. ಶಂಕರ ಖಂಡೇರಿ

September 25

೨೫-೯-೧೯೪೦ ೧೧-೬-೨೦೦೮ ಅಧ್ಯಾಪಕ, ಸಾಹಿತಿ, ನ್ಯಾಯಾಶರಾದ ಶಂಕರ ಖಂಡೇರಿಯವರು ಹುಟ್ಟಿದ್ದು ಕಾಸರಗೋಡು ತಾಲ್ಲೂಕು ಕಾಟುಕಕ್ಕೆ ಗ್ರಾಮದ ಖಂಡೇರಿ. ತಂದೆ ಸುಬ್ಬಪ್ಪ, ತಾಯಿ ಗಂಗಮ್ಮ. ಪ್ರಾರಂಭಿಕ ಶಿಕ್ಷಣ ಹುಟ್ಟಿದ ಹಳ್ಳಿಯಲ್ಲಿ. ಪ್ರೌಢಶಾಲೆಗೆ ಸೇರಿದ್ದು ಪೆರ್ಲ ಸತ್ಯನಾರಾಯಣ ಹೈಸ್ಕೂಲು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಿಂದ ಬಿ.ಎ. ಕಲ್ಲಿಕೋಟೆ ಗುರುವಾಯುರಪ್ಪನ್ ಕಾಲೇಜಿನಿಂದ ಎಂ.ಎ. ಉಡುಪಿಯ ವೈಕುಂಠ ಬಾಳಿಗ ಕಾಲೇಜಿನಿಂದ ಬಿ.ಎಲ್. ಪದವಿ. ತಿರುವನಂತಪುರ ಕಾಲೇಜಿನಿಂದ ಸ್ನಾತಕೋತ್ತರ ಡಿಪ್ಲೊಮ ಮತ್ತು INDIAN CONSTITUTION : COMPARATIVE STUDY ನ್ಯಾಯಾಂಗದ ಬಗ್ಗೆ ಮಹಾಪ್ರಬಂಧ ಮಂಡಿಸಿ ಪಡೆದ ಡಾಕ್ಟರೇಟ್ ಪದವಿ. ಹೀಗೆ ಪಡೆದ ಕೆಲವೇ ಮಂದಿಯಲ್ಲಿ ಇವರೊಬ್ಬರು. ಉದ್ಯೋಗಕ್ಕಾಗಿ ಸೇರಿದ್ದು ಪೆರ್ಲ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ, ಎಂ.ಜಿ.ಎಂ. ಕಾಲೇಜಿನಲ್ಲಿ ಅಧ್ಯಾಪಕರಾಗಿ ನಂತರ ಮಂಗಳೂರಿನಲ್ಲಿ ವಕೀಲಿ ವೃತ್ತಿ ಆರಂಭ. ಕರ್ನಾಟಕ ನ್ಯಾಯಾಂಗ ಇಲಾಖೆಗೆ ಸೇರಿ ತುಮಕೂರು, ಕಾರವಾರ, ಗುಲಬರ್ಗಾ, ಬಿಜಾಪುರ, ಮಂಡ್ಯ, ಬಳ್ಳಾರಿ, ಬೀದರ್, ಬೆಳಗಾಂ, ಬೆಂಗಳೂರುಗಳಲ್ಲಿ ನ್ಯಾಯಾಶರಾಗಿ ಸಲ್ಲಿಸಿದ ಸೇವೆ. ಸಾಹಿತ್ಯ ಚಿಕ್ಕಂದಿನಿಂದಲೇ ಬೆಳೆದು ಬಂದ ಪ್ರವೃತ್ತಿ. ರಚಿಸಿದ್ದು ಸಾಹಿತ್ಯ ಹಾಗೂ ಹಲವಾರು ಕಾನೂನು ಕೃತಿಗಳು. ಕಾದಂಬರಿಗಳು-ಮದುವೆಯಾದ ಮೇಲೆ, ಚೈತನ್ಯ, ವಿವಿಲಾಸ, ಅನಾವರಣ, ವಿರೂಪ, ತುಮಲ, ಕೈದಿ, ವಿಕಲ್ಪ, ಕಳಂಕ, ಕನಸುಗಳ ಸುಳಿಯಲ್ಲಿ ಸೇರಿ ೧೬ ಕೃತಿಗಳು. ಪತ್ತೇದಾರಿ ಕಾದಂಬರಿ-ಪಂಚವ್ಯೂಹ, ನೀಲಿನಕ್ಷತ್ರ. ಕಾನೂನು ಕೃತಿಗಳು-ನಮ್ಮ ಸಮಾಜ ಮತ್ತು ಅಸ್ಪೃಶ್ಯತೆ, ಆಶಾದೀಪ, ಮಹಿಳೆಯ ಸ್ಥಾನಮಾನ, ಬಳಕೆದಾರರ ರಕ್ಷಣೆ, ಭಾರತೀಯ ವಿವಾಹ ಪದ್ಧತಿ, ಜೀವನಾಂಶ, ವರದಕ್ಷಿಣೆ ಪಿಡುಗು, ನಾಗರಿಕ ಹಕ್ಕುಗಳು, ಕಾನೂನಿನಲ್ಲಿ ಮಹಿಳೆಗೆ ತಾರತಮ್ಯ, ಭಾರತದ ನ್ಯಾಯಾಂಗ ಎತ್ತ ಸಾಗುತ್ತಿದೆ, ದತ್ತಕ ಮತ್ತು ಜೀವನಾಂಶ ಅನಿಯಮ, ನ್ಯಾಯಾಶರ ನೆನಪುಗಳು, ಉತ್ತರಾಕಾರ ನಿಯಮ ಸೇರಿ ೨೦ ಕೃತಿಗಳು. ಹಲವಾರು ಪತ್ರಿಕೆಗಳಿಗೆ ಅಂಕಣಕಾರರಾಗಿಯೂ ಪ್ರಸಿದ್ಧಿ. ಹೊಸದಿಗಂತ, ಕಾನೂನು ಪ್ರಪಂಚ, ಅಡಿಕೆ ಭಾರತ, ಜನವಾಹಿನಿ, ಉದಯವಾಣಿ ಪತ್ರಿಕೆಗಳಲ್ಲಿ ನೀಡಿದ ಕಾನೂನು ಸಲಹೆಗಳು. ತುಳು ಸಾಹಿತ್ಯ ಅಕಾಡಮಿ, ದಕ್ಷಿಣ ಕನ್ನಡ ಜಿಲ್ಲಾ ಗೆಜೆಟಿಯರ್ ಸಲಹೆಗಾರರಾಗಿ, ಹೀಗೆ ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಹಲವಾರು ಗೌರವ ಪ್ರಶಸ್ತಿಗಳು-ಕೇರಳ ಸರಕಾರದ ಜ್ಞಾನರತ್ನ ಪ್ರಶಸ್ತಿ, ಭಾರತೀಯ ಸಾಹಿತ್ಯ ಪರಿಷತ್ತಿನಿಂದ ‘ವಿಕಲ್ಪ’ ಕಾದಂಬರಿಗೆ ಪುರಸ್ಕಾರ, ಸರ್. ಎಂ. ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಜಿಲ್ಲಾ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಚ್.ವಿ. ನಾರಾಯಣ್ – ೧೯೩೦-೧೩-೮-೧೯೭೦ ಅರ್ಜುನ ಪುರಿ ಅಪ್ಪಾಜಿಗೌಡ – ೧೯೪೮

Details

Date:
September 25
Event Category: