೧೪-೨-೧೯೫೧ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲ್ಲೂಕಿನ ಕಿಲಾರದ ಕೃಷಿಕ ಕುಟುಂಬದಲ್ಲಿ ಜನನ. ತಂದೆ ರಾಮಚಂದ್ರ ಹೆಗಡೆ, ತಾಯಿ ವೇಣುಬಾಯಿ (ಕೆ.ವಿ. ಸುಬ್ಬಣ್ಣನವರ ಅಕ್ಕ). ಹೆಣ್ಣು ಮಕ್ಕಳ ವಿದ್ಯೆಗೆ ಪ್ರೋತ್ಸಾಹವಿಲ್ಲದಿದ್ದರೂ ಆಯಿಯ ಪ್ರೋತ್ಸಾಹದಿಂದ ವಿದ್ಯೆ ಕಲಿಕೆ. ಪ್ರಾಥಮಿಕ ವಿದ್ಯಾಭ್ಯಾಸ ಹಲವಾರು ಕಡೆ. ನ್ಯಾಷನಲ್ ಮೆರಿಟ್ ಸ್ಕಾಲರ್ಶಿಪ್ನಿಂದ ಸ್ನಾತಕ ಪದವಿ. ಧಾರವಾಡದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಎಂ.ಎ. ಚಿನ್ನದ ಪದಕ. ಭಾಷಾಂತರ, ಭಾಷಾವಿಜ್ಞಾನ, ಜಾನಪದ ವಿಷಯಗಳಲ್ಲಿ ಡಿಪ್ಲೊಮ. ಕ್ರೀಡೆಯಲ್ಲೂ ಮುಂದು. ಕರ್ನಾಟಕ ವಿಶ್ವವಿದ್ಯಾಲಯದ ಮಹಿಳಾ ಅಥ್ಲೀಟ್. ಹೈಜಂಪ್, ಹರ್ಡಲ್ಸ್ನಲ್ಲಿ ಅಂತರ ವಿಶ್ವವಿದ್ಯಾಲಯ ದಾಖಲೆ. ೧೯೭೩ರಿಂದ ಅಧ್ಯಾಪಕಿ ವೃತ್ತಿ ಜೀವನ ಆರಂಭ. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಸಂಸ್ಥೆಯಲ್ಲಿ ಅಧ್ಯಾಪಕಿ, ಪ್ರವಾಚಕಿ, ಕರ್ನಾಟಕ ವಿಶ್ವವಿದ್ಯಾಲಯ ಅಧ್ಯಯನಪೀಠ, ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರವಾಚಕಿ. ಇದೀಗ ಜಾನಪದ ವಿಭಾಗದ ಅಧ್ಯಕ್ಷೆ. ವಿದ್ಯೆಗಾಗಿ ಕಷ್ಟ ಪಟ್ಟಂತೆ ಹುದ್ದೆಗಾಗಿಯೂ ಹೋರಾಟ, ಬಿಡದ ಛಲ, ನ್ಯಾಯಾಲಯದಲ್ಲೂ ಜಯ. ೯ ಜನ ಎಂ.ಫಿಲ್ ವಿದ್ಯಾರ್ಥಿಗಳಿಗೆ, ೧೨ ಜನ ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಯಶಸ್ವಿ ಪದವಿ. ಜರ್ಮನಿಯ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಪಾತ್ರ. ಜಿಲ್ಲಾ ಜಾನಪದ ಸಮ್ಮೇಳನ, ಸಾಹಿತ್ಯ ಸಮ್ಮೇಳನ, ನಿಘಂಟು ಕಮ್ಮಟ, ಸಮಾಜೋದ್ಧಾರ ವಿಚಾರ ಸಂಕಿರಣ, ವಿಧವಾ ವಿವಾಹ ಚಳವಳಿ, ಸಂಕಿರಣ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ವಿಚಾರ ಸಂಕಿರಣ, ಭಾಷೆ ಮತ್ತು ಸಂಸ್ಕೃತಿ ಮೇಲಿನ ತರಬೇತಿ ಶಿಬಿರ, ನಾಟಕಗಳ ವಿಚಾರ ಸಂಕಿರಣ, ಅಖಿಲ ಭಾರತ ಜಾನಪದ ಸಮ್ಮೇಳನ ಮುಂತಾದ ನೂರಾರು ಕಡೆಗಳಲ್ಲಿ ಪ್ರಬಂಧ ಮಂಡನೆ. ಮೈಸೂರು ವಿಶ್ವವಿದ್ಯಾಲಯದ ‘ಕರ್ನಾಟಕ ವಿಷಯ ವಿಶ್ವಕೋಶ’ಕ್ಕೆ ತಮ್ಮಯ್ಯ ಕವಿ, ದೊಡ್ಡಬೆಲೆ ನಾರಾಯಣಶಾಸ್ತ್ರಿ, ಬೆಳ್ಳಾವೆ ನರಸಿಂಹಶಾಸ್ತ್ರಿ, ನಾಚಿರಾಜ ಮುಂತಾದವರ ಬಗ್ಗೆ ಲೇಖನಗಳು. ಜೀಶಂಪ, ದೇಜಗೌ, ಪ. ಸು. ಭಟ್ಟ, ಪ್ರೊ. ಮರಿಯಪ್ಪಭಟ್ಟ, ಶಿವಲಿಂಗಮ್ಮ ಕಟ್ಟಿ, ಬಿ.ವಿ.ಶಿರೂರ ಮುಂತಾದ ಹಲವಾರು ಅಭಿನಂದನ ಗ್ರಂಥಗಳಿಗೆ ಬರೆದ ಲೇಖನಗಳು. ಪ್ರಕಟಿತ ಕೃತಿಗಳು-ಮಹಿಳೆ ಮತ್ತು ಶಿಕ್ಷಣ, ಉಪಭಾಷಾ ಅಧ್ಯಯನ, ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಹಾಡುಗಳು, ಸೌರಭ, ಸಮನ್ವಿತ, ಅಭಿವ್ಯಕ್ತಿ ಮುಂತಾದ ೧೫ ಕ್ಕೂ ಮಿಕ್ಕು ಕೃತಿ ಪ್ರಕಟ. ಸಂದ ಪ್ರಶಸ್ತಿಗಳು-ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗಡೆ ಪ್ರಶಸ್ತಿ, ಲತಾಗುರು ಸಿದ್ಧಪ್ಪ ಪ್ರಶಸ್ತಿ, ತೀ.ನಂ.ಶ್ರೀ. ಸ್ಮಾರಕ ಪ್ರಶಸ್ತಿ, ಎನ್.ಎಂ.ಕೆ. ಆರ್.ವಿ. ಕಾಲೇಜಿನ ಶಾಶ್ವತಿ ಸಂಸ್ಥೆಯ ಸದೋದಿತ ಪ್ರಶಸ್ತಿ, ಕ.ಸಾ.ಪ. ಅಂತಾರಾಷ್ಟ್ರೀಯ ಮಹಿಳಾವರ್ಷ ಪ್ರಶಸ್ತಿ ಮುಂತಾದುವು. ಇದೇ ದಿನ ಹುಟ್ಟಿದ ಸಾಹಿತಿಗಳು : ಸೋಮಶೇಖರ ಇಮ್ರಾಪುರ – ೧೯೪೦ ಜಿ.ಬಿ. ಮನ್ವಾಚಾರ್ – ೧೯೩೫ ಲೀಲಾಮಿರ್ಲೆ – ೧೯೩೭ ಶಾಂತ. ಎ. ದಿವಾಕರ್ – ೧೯೩೮ ನಾಗೇಶ ಹೆಗಡೆ – ೧೯೪೮ ಸಿ. ಪ್ರಕಾಶ್ – ೧೯೬೦

