Loading Events

« All Events

  • This event has passed.

ಡಾ. ಸಿ.ಎಂ. ಮುನಿರಾಮಪ್ಪ

December 14, 2023

೧೪-೧೨-೧೯೩೧ ಪ್ರಸಿದ್ಧ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕರಾದ ಮುನಿರಾಮಪ್ಪನವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಬೇತಮಂಗಲ ತಾಲ್ಲೂಕಿನ ಅಂಕತಟ್ಟಿಹಳ್ಳಿ. ತಂದೆ ಚಿಕ್ಕ ಮೈಲಪ್ಪ, ತಾಯಿ ಪಾಪಮ್ಮ. ಪ್ರಾರಂಭಿಕ ಶಿಕ್ಷಣ ಕೆ.ಜಿ.ಎಫ್. ಬೆಂಗಳೂರಿನ ಆರ್.ಸಿ.  ಕಾಲೇಜಿನಿಂದ ಬಿ.ಕಾಂ. ಮತ್ತು ಆಂಧ್ರ ವಿಶ್ವ ವಿದ್ಯಾಲಯದಿಂದ ಎಂ.ಕಾಂ. ಪದವಿ. ಮೈಸೂರು ವಿಶ್ವ ವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ. ಬೋಧಕ ವೃತ್ತಿಯನ್ನಾರಿಸಿಕೊಂಡದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಪ್ರೊಫೆಸರ್ ಆಫ್ ಎಮಿರೆಟಸ್ ಆಗಿ ನಿವೃತ್ತಿ. ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ. ಮೈಸೂರು ವಿಶ್ವವಿದ್ಯಾಲಯದ ಹಲವಾರು ಸಮಿತಿಯ ಸದಸ್ಯ, ಅಧ್ಯಕ್ಷರಾಗಿ, ಅಖಿಲ ಭಾರತ ವಾಣಿಜ್ಯ ಸಂಘದ ಅಧ್ಯಕ್ಷರಾಗಿ, ಅಖಿಲ ಭಾರತದ ವ್ಯವಸ್ಥಾಪಕ ಮಂಡಲಿಯ ಸದಸ್ಯರಾಗಿ, ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾಗಿ, ಕೃಷ್ಣ ಸೇವಾ ಸಮಿತಿಯ ಟ್ರಸ್ಟ್‌ನ ಖಜಾಂಚಿಯಾಗಿ, ಹಿರಿಯ ನಾಗರಿಕ ಮಂಡಲಿ ಟ್ರಸ್ಟ್‌ನ ಕಾರ‍್ಯದರ್ಶಿಯಾಗಿ ಸಲ್ಲಿಸಿದ ಸೇವೆ. ಹಲವಾರು ಸಂಶೋಧನ ಲೇಖನಗಳು ರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಕಟಿತ. ೧೫ ವಿದ್ಯಾರ್ಥಿಗಳಿಗೆ ಪಿಎಚ್.ಡಿ.ಗಾಗಿ ಮಾರ್ಗದರ್ಶನ ಮತ್ತು ಯಶಸ್ವಿ ಪದವಿ. ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಕಾರ‍್ಯಾಗಾರಗಳಲ್ಲಿ ಪ್ರಮುಖ ಪಾತ್ರ. ಕಾಕತೀಯ ವಿಶ್ವವಿದ್ಯಾಲಯ-ಓರಂಗಲ್, ಬರ್ ಹ್ಯಾಮ್‌ಪುರ್ ವಿಶ್ವವಿದ್ಯಾಲಯ-ಒರಿಸ್ಸ, ಕುವೆಂಪು ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಮತ್ತು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಬಂಧಗಳ ಮೌಲ್ಯಮಾಪಕರಾಗಿ ಸಲ್ಲಿಸಿದ ಕಾರ‍್ಯಗೌರವಗಳು. ಹಲವಾರು ವಾಣಿಜ್ಯ ಕೃತಿಗಳ ರಚನೆ, ಲೆಕ್ಕಾಚಾರ ಶಾಸ್ತ್ರ, ವೆಚ್ಚ ನಿರ್ಣಯ ಶಾಸ್ತ್ರ, ಕೈಗಾರಿಕಾ ಕಾರ‍್ಯ ಸ್ಥಾಪನೆ-ಕೆಲ ವೆಚ್ಚ ನಿರ್ಣಯ ತಂತ್ರಗಳು, ವೈಜ್ಞಾನಿಕ ಸಾಮಗ್ರಿ ನಿರ್ವಹಣೆ, ಪ್ರೌಢಲೆಕ್ಕ ಶಾಸ್ತ್ರ, ಸುಲಲಿತ ರಸ್ತೆ ಸಾರಿಗೆ, ನಿರ್ಗತಿಕರಿಗೆ ನೆಲೆ, ವರಮಾನ ತೆರಿಗೆ ಮತ್ತು ಶ್ರೀಸಾಮಾನ್ಯ, CO-OPERATIVE MARKETING IN KARNATAKA, PERSONNEL MANAGEMENT AND INDUSTRIAL RELATIONS ಮುಂತಾದ ಕೃತಿಗಳು ಪ್ರಕಟಿತ. ಹಲವಾರು ಕೃತಿಗಳಿಗೆ ಮೈಸೂರು ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಂದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿ : ಸುವರ್ಣ ಚಂದ್ರಶೇಖರ್ – ೧೯೫೫

Details

Date:
December 14, 2023
Event Category: