ಡಾ. ಸಿ.ಎ. ಶ್ರೀಧರ

Home/Birthday/ಡಾ. ಸಿ.ಎ. ಶ್ರೀಧರ
Loading Events

೦೬.೧೦.೧೯೬೧ ಪ್ರಸಿದ್ಧ ಸಂಗೀತಗಾರರ ಮನೆತನಕ್ಕೆ ಸೇರಿದ ಶ್ರೀಧರರವರು ಹುಟ್ಟಿದ್ದು ಹುಣಸೂರು ತಾಲ್ಲೂಕಿನ ಚಿಲಕುಂದದಲ್ಲಿ. ತಂದೆ ವಿದ್ವಾನ್‌ ಸಿ.ಕೆ. ಅನಂತರಾಮಯ್ಯ, ತಾಯಿ ಸಿ.ಎಸ್‌. ಸತ್ಯಲಕ್ಷ್ಮಿ. ವೆಂಕಟನಾರಾಯಣ ಶಾಸ್ತ್ರಿ ಉಡುಪರಲ್ಲಿ ೪ನೇ ವಯಸ್ಸಿನಿಂದಲೇ ಸಂಗೀತ ಶಿಕ್ಷಣ, ವಿ. ದೇಶಿಕಾಚಾರ್ಯರ ಮಾರ್ಗದರ್ಶನ. ಗಾಯನ ಮತ್ತು ವೇಣುವಾದನದಲ್ಲಿ ವಿದ್ವತ್‌ ಪದವಿ. ಮೈಸೂರು ವಿಶ್ವವಿದ್ಯಾಲಯದ ಬಿ.ಎಸ್ಸಿ, ಬಿ.ಎಫ್.ಎ, ಎಂ.ಎ ಮತ್ತು ಲಲಿತಕಲೆ – ಸಂಗೀತದಲ್ಲಿ ಪಡೆದ ಪಿಎಚ್‌.ಡಿ. ಪದವಿ. ಲಲಿತ ಕಲಾ ಕಾಲೇಜಿನಲ್ಲಿ ಸಂಗೀತ ವಿಭಾಗದಲ್ಲಿ ಪ್ರಾಧ್ಯಾಪಕ ಹುದ್ದೆ. ೧೪ನೇ ವಯಸ್ಸಿನಿಂದಲೇ ನಡೆಸಿಕೊಟ್ಟ ಕರ್ನಾಟಕ ಶಾಸ್ತ್ರೀಯ ಸಂಗೀತದ ವೇಣುವಾದನ ಕಚೇರಿಗಳು. ಆಕಾಶವಾಣಿ, ದೂರದರ್ಶನದ ’ಎ’ ಶ್ರೇಣಿಯ ಕಲಾವಿದರು. ಹಲವಾರು ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನದಿಂದ ಪ್ರಸಾರ. ರಾಷ್ಟ್ರೀಯ, ಅಂತಾರಾಷ್ಟ್ರಿಯ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗಿ. ಹಲವಾರು ವಿಚಾರ ಸಂಕಿರಣಗಳಲ್ಲಿ ವಿದ್ವತ್‌ಪೂರ್ಣ, ಸಂಶೋಧನಾ ಪ್ರಬಂಧಗಳ ಮಂಡನೆ. ಪ್ರಾತ್ಯಕ್ಷಿಕೆ ಮತ್ತು ಸಂಗೀತ ಕಚೇರಿ. ಸಂಗೀತ ಕಲಾವರ್ಧಿನಿ, ಕಲಾಭಾರತಿ, ಕರ್ನಾಟಕ ಗಾನಕಲಾ ಪರಿಷತ್‌, ದೆಹಲಿಯ ಇಂಟರ್‌ನ್ಯಾಷನಲ್‌ ಕಲ್ಚರಲ್‌ ರೂರಲ್‌ ಸೆಂಟರಿನ ಯುವಜನೋತ್ಸವ, ಉಡುಪಿ, ಧರ್ಮಸ್ಥಳ ಮುಂತಾದೆಡೆ ನೀಡಿದ ಕಾರ್ಯಕ್ರಮಗಳು. ಲೋಹವಂಶಿ ಎಂಬ ವಿಶಿಷ್ಟಕೊಳಲಿನ ಆವಿಷ್ಕಾರ. ೧೭೧ ಮೇಳಕರ್ತ ಪದ್ಧತಿಗಳನ್ನು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ, ೧೦೦ಕ್ಕೂ ಹೆಚ್ಚು ಕೃತಿಗಳ ರಚನೆ. ಹಲವಾರು ಸಂಗೀತ ಸಂಬಂಧಿ ಗ್ರಂಥಗಳು, ನಿಯತಕಾಲಿಕಗಳಲ್ಲಿ ಲೇಖನಗಳು ಪ್ರಕಟಿತ. ೧೯೮೦ರಲ್ಲಿ ಅಖಿಲ ಭಾರತ ರಾಷ್ಟ್ರೀಯ ಪುರಸ್ಕಾರ, ೨೦೦೬ರ ಸುವರ್ಣಕರ್ನಾಟಕ ಹೊಯ್ಸಳ ಪ್ರಶಸ್ತಿ ಸೇರಿದಂತೆ ಅನೇಕ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಕಲಾವಿದರು ಟಿ.ಎಸ್‌. ಭಟ್‌- ೧೯೩೭ ರೂಪಾ ವಿಜಯ್‌- ೧೯೬೪

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top