ಡಾ. ಸುನೀತಿ ಉದ್ಯಾವರ

Home/Birthday/ಡಾ. ಸುನೀತಿ ಉದ್ಯಾವರ
Loading Events

೧೧-೭-೧೯೩೭ ಕಥೆಗಾರ್ತಿ, ಕಾದಂಬರಿಗಾರ್ತಿ, ಸಂಘಟಕಿ ಸುನೀತಿ ಉದ್ಯಾವರರವರು ಹುಟ್ಟಿದ್ದು ಮಂಗಳೂರಿನ ಸ್ವಾತಂತ್ರ್ಯ ಹೋರಾಟಗಾರ ಮನೆತನದಲ್ಲಿ. ತಂದೆ ಶಾಂತಾರಾಮರಾವ್, ತಾಯಿ ಸೀತಾಬಾಯಿ. ಪ್ರೌಢಶಾಲೆಯವರೆವಿಗೂ ಮಂಗಳೂರಿನಲ್ಲಿ. ಮುಂಬಯಿಯ ಖಾಲ್ಸಾ ಕಾಲೇಜಿನಲ್ಲಿ ಬಿ.ಎ. ಪದವಿ. ಊರ್ವದ ಕೆನರಾ ಹೈಸ್ಕೂಲಿನಲ್ಲಿ ಶಿಕ್ಷಕಿ ತರಬೇತಿ ಪಡೆದ ನಂತರ ಗಣಪತಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭ. ನಂತರ ಮುಂಬಯಿಯ ರಾಷ್ಟ್ರೀಯ ಕನ್ನಡ ಶಿಕ್ಷಣ ಸಮಿತಿ ಪ್ರೌಢಶಾಲೆ-ವಡಾಲಾದಲ್ಲಿ ಶಿಕ್ಷಕಿಯಾಗಿ ೩೪ ವರ್ಷಗಳ ಸೇವೆಯ ನಂತರ ನಿವೃತ್ತಿ. ಅಧ್ಯಾಪನದೊಂದಿಗೆ ಓದುವ ಹುಚ್ಚು. ಮುಂಬಯಿಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಎಂ.ಎ. ಪ್ರಥಮ ದರ್ಜೆ, ವರದರಾಜ ಆದ್ಯ ಸ್ವರ್ಣಪದಕ ವಿಜೇತೆ. ಮುಂಬಯಿ ವಿಶ್ವವಿದ್ಯಾಲಯಕ್ಕೆ “ಕಡೆಂಗೋಡ್ಲು ಶಂಕರಭಟ್ಟರ ಸೃಜನಶೀಲ ಪ್ರಕಟಿತ ಕೃತಿಗಳು” ಮಹಾಪ್ರಬಂಧ ಮಂಡಿಸಿ ಪಡೆದ ಪಿಎಚ್.ಡಿ. ಪದವಿ. ಕನ್ನಡ ವಿಭಾಗದಿಂದ ಡಾಕ್ಟರೇಟ್ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ. ಎಳೆವೆಯಿಂದಲೇ ಕವನ ಬರೆಯುವ ಹವ್ಯಾಸ. ೧೫ರ ವಯಸ್ಸಿನಲ್ಲಿಯೇ ಸಾಹಿತ್ಯ ಎಲ್ಲಾ ಪ್ರಕಾರಗಳನ್ನು ಸೇರಿಸಿ, ಛಾಯ, ಪುಷ್ಪಾಂಜಲಿ, ನವೋದಯ ಕೃತಿ ರಚನೆ. ೧೯ರ ವಯಸ್ಸಿನಲ್ಲಿಯೇ ಕಾದಂಬರಿ ರಚನೆ. ಕಾದಂಬರಿಗಳು-ಸ್ನೇಹ ಸ್ಮಾರಕ, ತಂಗಿಯ ಕಾಣಿಕೆ, ಕ್ಷಮಾಶೀಲೆ, ಋಣೋನ್ಮುಕ್ತಿ, ಆಶ್ವಾಸನೆ ಪ್ರಕಟಿತ. ಕವನ ಸಂಕಲನ-ಮೊಗ್ಗು, ಗೊಂಚಲು. ಶಿಶುಗೀತೆಗಳ ಸಂಕಲನ-ಕಿಂಕಿಣಿ. ಮುಂಬಯಿ ಕರ್ನಾಟಕ ಸಂಘದ ಕಲಿಕಾವರ್ಗಕ್ಕೆ ಪಠ್ಯಪುಸ್ತಕ. ನಾಲ್ಕು ಗೀತರೂಪಕಗಳ ಸಂಕಲನ-ರೂಪಕ ವಲ್ಲರಿ. ಮಹಾಪ್ರಬಂಧ-ವಾಙ್ಞಯ ಆರಾಧಕ ಕಡೆಂಗೋಡ್ಲು, ಶ್ರೇಷ್ಠ ಸಂಶೋಧನಾ ಕೃತಿಯಾಗಿ ಆಯ್ಕೆ. ಕನ್ನಡ, ಮರಾಠಿ, ತುಳು, ಕೊಂಕಣಿ, ಇಂಗ್ಲಿಷ್, ಹಿಂದಿಯಲ್ಲಿ ಕವನ, ನಾಟಕ, ಬೀದಿನಾಟಕಗಳ ರಚನೆ. ಅಂಕಣ ಬರಹಗಾರ್ತಿಯಾಗಿ ‘ಶ್ರೀಸತ್ಯ’ ಪತ್ರಿಕೆಗಾಗಿ ‘ನಾರಿ ನಡೆದು ಬಂದ ದಾರಿ’ ಅಂಕಣಬರಹ. ಧ್ವನಿಸುರಳಿ-ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ‘ಸಾಯಿದರ್ಶನ’ ಭಜನೆಗಳು. ಹಲವಾರು ಸಮಿತಿ, ಸಂಘ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರ. ಮಹಾರಾಷ್ಟ್ರ ರಾಜ್ಯಪುಸ್ತಕ ಮಂಡಳಿಯ ಕನ್ನಡ ಭಾಷಾ ಸಮಿತಿಯ ಸದಸ್ಯೆಯಾಗಿ, ಪುಣೆಯ ಪಠ್ಯಪುಸ್ತಕ ಸಮಿತಿ ಮಂಡಲ ಕನ್ನಡ ಭಾಷಾ ಸಮಿತಿಯಲ್ಲಿ ಸದಸ್ಯೆಯಾಗಿ, ಗೋರೆ ಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ಸ್ಥಾಪಕರಲ್ಲೊಬ್ಬರಾಗಿ, ಕಾರ‍್ಯದರ್ಶಿ, ಉಪಾಧ್ಯಕ್ಷೆ, ಅಧ್ಯಕ್ಷೆಯಾಗಿ ಸೇವೆ. ಹಲವಾರು ಸಂಕಿರಣ, ಕವಿಗಷ್ಠಿಗಳಲ್ಲಿ ಭಾಷಣಕಾರ್ತಿಯಾಗಿ, ಸಿಂಗಾಪುರ, ಹಾಂಗ್‌ಕಾಂಗ್, ಪಟ್ಟಾಯ, ಬ್ಯಾಂಕಾಕ್, ನೇಪಾಳಗಳಲ್ಲಿ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣಕಾರ್ತಿಯಾಗಿ ಭಾಗಿ. ಮುಂಬಯಿ ವಿ.ವಿ.ದ ವರದರಾಜ ಆದ್ಯ ಸ್ವರ್ಣಪದಕ, ಮುಂಬಯಿ ಕರ್ನಾಟಕ ಸಂಘದ ಕವಿತಾ ಕೈಲಾಜೆ ಪ್ರಶಸ್ತಿ, ‘ವಾಙ್ಞಯ ಆರಾಧಕ ಕಡೆಂಗೋಡ್ಲು’ ಕೃತಿಗೆ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಚ್.ಎ. ರಾಮಕೃಷ್ಣ – ೧೯೩೨ ಮಿತ್ರಾ ವೆಂಕಟ್ರಾಜ್ – ೧೯೪೮

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top