Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಡಾ. ಸುಮತೀಂದ್ರನಾಡಿಗ್ – ಕಣಜ

ಡಾ. ಸುಮತೀಂದ್ರನಾಡಿಗ್

Home/Birthday/ಡಾ. ಸುಮತೀಂದ್ರನಾಡಿಗ್
Loading Events

೪-೫-೧೯೩೫ ಕಾವ್ಯ, ಕಥೆ, ಕಾದಂಬರಿ, ನಾಟಕ, ವಿಮರ್ಶೆ ಹೀಗೆ ಸಾಹಿತ್ಯದ ಹಲವಾರು ಕ್ಷೇತ್ರಗಳಲ್ಲಿ ದುಡಿದ ನಾಡಿಗರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ. ತಂದೆ ರಾಘವೇಂದ್ರರಾವ್, ತಾಯಿ ಸುಬ್ಬಮ್ಮ. ತಂದೆ ಪೊಲೀಸ್ ವೃತ್ತಿಯಲ್ಲಿದ್ದುದರಿಂದ ನಾಡಿಗರ ಬಾಲ್ಯ ಕಳಸ, ಸೊರಬ, ಶಿರಾಳ ಕೊಪ್ಪ ಆನವಟ್ಟಿ, ಸಾಗರ ಹೀಗೆ ಮಲೆನಾಡು, ಬಯಲು ಸೀಮೆಯಲ್ಲಿ ವಿದ್ಯಾಭ್ಯಾಸ. ಇಂಟರ್ ಮೀಡಿಯೆಟ್ ಓದಿದ್ದು ಶಿವಮೊಗ್ಗ ಕಾಲೇಜು. ಕುವೆಂಪುರವರನ್ನು ಮೊದಲ ಬಾರಿಗೆ ಕಂಡು ರಾಮಾಯಣ ದರ್ಶನಂ ಓದಿ ಪುಳಕಿತರಾದರು. ಹೈಸ್ಕೂಲಿನಲ್ಲಿ ಓದುತ್ತಿದ್ದಾಗಲೇ ಕೈಬರಹದ ಪತ್ರಿಕೆಯಲ್ಲಿ ಕವನ ಪ್ರಕಟ. ಇವರ ಕವನ ಓದಿದ ಜಿ.ಎಸ್.ಎಸ್.ರವರಿಂದ ಅಪ್ಪಟ ಕವಿ ಎಂಬ ಪ್ರಶಂಸೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸೇರಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್‌ಗಾಗಿ, ಆಗ ಜಿ.ಪಿ. ರಾಜರತ್ನಂ, ಕೆ. ನರಸಿಂಹಮೂರ್ತಿಯವರಂತಹ ಗುರುಗಳಿಂದ ಸಾಹಿತ್ಯಕ್ಕೆ ಸಿಕ್ಕ ಪ್ರೋತ್ಸಾಹ. ‘ಬೇಂದ್ರೆ ಕಾವ್ಯದಲ್ಲಿ ವಿಭಿನ್ನ ನೆಲೆಗಳು’ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ. ಅಡಿಗರು ಸಾಕ್ಷಿ ಪತ್ರಿಕೆ ಹೊರತರುವಲ್ಲಿ ನಾಡಿಗರ ಪ್ರಮುಖ ಪಾತ್ರ. ಅಮೆರಿಕದ ಫಿಲಿಡೆಲಿಯ ವಿ.ವಿ.ದಿಂದ ಬಂದ ನಂತರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಸೇರಿ ೧೯೯೫ರಲ್ಲಿ ನಿವೃತ್ತಿ. ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ ಕೆಲಕಾಲ. ದಾಂಪತ್ಯ ಗೀತೆ ನಾಡಿಗರಿಗೆ ಹೆಸರು ತಂದುಕೊಟ್ಟ  ಕೃತಿ. ನಿಮ್ಮ ಪ್ರೇಮ ಕುಮಾರಿಯ ಜಾತಕ, ಕಪ್ಪು ದೇವತೆ, ಉದ್ಘಾಟನೆ, ಭಾವಲೋಕ, ತಮಾಷೆ ಪದ್ಯಗಳು, ಕುಹುಗೀತೆ, ನಟರಾಜ ಕಂಡ ಕಾಮನಬಿಲ್ಲು, ಪಂಚಭೂತ, ಜಡ ಮತ್ತು ಚೇತನ ಕವನ ಸಂಕಲನಗಳು. ಕಾರ್ಕೋಟಕ, ಗಿಳಿ ಮತ್ತು ದುಂಬಿ, ಸ್ಥಿತಪ್ರಜ್ಞ, ಕಥಾಸಂಕಲನ. ಸಾಹಸ, ಇಲಿ ಮದುವೆ, ಗೂಬೆಯ ಕಥೆ, ಹನ್ನೊಂದು ಹಂಸಗಳು-ಮಕ್ಕಳ ಸಾಹಿತ್ಯ. ಬಕ್ಕತಲೆಯ ನರ್ತಕಿ-ಅನುವಾದಿತ ಅಸಂಗತ ನಾಟಕ. ವ್ಯಕ್ತಿ ಚಿತ್ರಣದ ನಾಲ್ಕು ಸಂಪುಟಗಳ ಸಾಹಿತ್ಯ ಚರಿತ್ರೆ. ಎಂ. ಗೋಪಾಲ ಕೃಷ್ಣ ಅಡಿಗ ಒಂದು ಕಾವ್ಯಾಭ್ಯಾಸ, ವಿಮರ್ಶೆಯ ದಾರಿಯಲ್ಲಿ, ಕಾವ್ಯ ಎಂದರೇನು ವಿಮರ್ಶಾ ಕೃತಿಗಳು. ಹಲವಾರು ಕೃತಿಗಳು ಇತರ ಭಾಷೆಗೆ ಅನುವಾದ. ದೊರೆತ ಪ್ರಶಸ್ತಿ ಗೌರವ-ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಹರಿದ್ವಾರದ ಕಾಂಗ್ರಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ, ವಿ.ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ರಾ.ಮೊ. ವಿಶ್ವಾಮಿತ್ರ – ೧೯೨೭ ಬಳ್ಳೇಕೆರೆ ಹನುಮಂತಪ್ಪ – ೧೯೩೭ ಜಿ. ಶಂಕರಯ್ಯ – ೧೯೩೬ ರತ್ನಾ ಕಾಳೇಗೌಡ – ೧೯೫೬

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top