ಡಾ. ಸೂರ್ಯನಾಥ ಕಾಮತ್

Home/Birthday/ಡಾ. ಸೂರ್ಯನಾಥ ಕಾಮತ್
Loading Events
This event has passed.

೨೬-೪-೧೯೩೭ ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ, ಇತಿಹಾಸ ತಜ್ಞರಾದ ಸೂರ‍್ಯನಾಥ ಕಾಮತರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ತಂದೆ ಉಪೇಂದ್ರಕಾಮತ್, ತಾಯಿ ಪದ್ಮಾವತಮ್ಮ. ಪ್ರಾಥಮಿಕ ಶಿಕ್ಷಣ ಬೆಳ್ತಂಗಡಿಯಲ್ಲಿ ಪ್ರೌಢಶಾಲೆ ಬಂಟ್ವಾಳದಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಎಂ.ಎ. ಪದವಿ. ಮುಂಬಯಿ ವಿಶ್ವವಿದ್ಯಾಲಯದಿಂದ TULUVA IN VIJAYANAGAR TIMES ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ. ಪತ್ರಿಕೋದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡು ಪಿಎಚ್.ಡಿಗಾಗಿ ಓದುತ್ತಿರುವಾಗಲೇ ಫ್ರೀ ಪ್ರೆಸ್ ಜರ್ನಲ್ ಬಾಂಬೆ, ಪತ್ರಿಕೆಯಲ್ಲಿ ಸಹ ಸಂಪಾದಕರ ಜವಾಬ್ದಾರಿ. ನಂತರ ಬೆಂಗಳೂರಿಗೆ ಬಂದು ಉತ್ಥಾನ ಸಹ ಸಂಪಾದಕರಾಗಿ, ಪ್ರಜಾವಾಣಿ ಸಹ ಸಂಪಾದಕರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ತ್ರೈಮಾಸಿಕ ‘ಸಾಧನೆ’ ಕನ್ನಡ ಇತಿಹಾಸ ಅಕಾಡಮಿ ವಾರ್ಷಿಕ ಸಂಚಿಕೆ ಮತ್ತು ಮಿಥಿಕ್ ಸೊಸೈಟಿ ವಿದ್ವತ್ ಪತ್ರಿಕೆಯಲ್ಲಿ ೧೯೭೭ರಿಂದಲೂ ಸಂಪಾದಕರ ಹೊಣೆ. ೧೯೮೧ರಲ್ಲಿ ಕರ್ನಾಟಕ ಸರ್ಕಾರದ ಗೆಜೆಟಿಯರ್ ಮುಖ್ಯ ಸಂಪಾದಕರಾಗಿ, ಕರ್ನಾಟಕ ಪತ್ರಾಗಾರದ ನಿರ್ದೇಶಕರಾಗಿಯೂ ಸೇವೆ. ಗೆಜೆಟಿಯರ್‌ನಲ್ಲಿದ್ದಾಗ, ಉತ್ತರ ಕನ್ನಡ, ಬೆಳಗಾಂ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಕೊಡಗು ಧಾರವಾಡ ಜಿಲ್ಲೆಗಳ ಗೆಜೆಟಿಯರ್ ಪ್ರಕಟಣೆ. ೧೯೫೮ರಲ್ಲಿ ಎಂ.ಎ. ತರಗತಿಯಲ್ಲಿದ್ದಾಗಲೇ ಇತಿಹಾಸ ಸಂಕಲನ ‘ಬೆಳಗಿದ ತಾರೆಗಳು’ ಪ್ರಕಟಿತ. ನಂತರ ಐತಿಹಾಸಿಕ ಸಂಕಲನಗಳು-ಕರ್ನಾಟಕದ ಇತಿಹಾಸ ಮಂಜರಿ, ಕರ್ನಾಟಕದ ವೀರರಾಣಿಯರು, ವಿಜಯನಗರ ಕಥೆಗಳು, ಕೆಳದಿಯ ಚೆನ್ನಮ್ಮಾಜಿ, ವೀರರಾಣಿ ಅಬ್ಬಕ್ಕ, ಕಾದಂಬರಿಗಳು-ಥೇಮ್ಸ್‌ನಿಂದ ಗಂಗೆಗೆ, ಈಸಿಜೈಸಿದರು (ಸಾಮಾಜಿಕ) ; ಕೃಷ್ಣದೇವರಾಯ, ಮುಳ್ಳಿನಹಾದಿ (ಐತಿಹಾಸಿಕ). ಕರ್ನಾಟಕ ಸಂಕ್ಷಿಪ್ತ ಇತಿಹಾಸ ಒಂದು ಅತ್ಯುತ್ತಮ ಆಕರ ಗ್ರಂಥ. ಮೇರುಕೃತಿ-ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು. ಸಮಗ್ರ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯ ವಿವರ. ೮೫೦ ಯೋಧರ ಸಂಗ್ರಾಮದ ಪ್ರತ್ಯಕ್ಷ ದರ್ಶಿಗಳ ಸ್ಮೃತಿ ದಾಖಲಾತಿ. ಜೊತೆಗೆ QUIT INDIA MOVEMENT IN KARNATAKA ಇಂಗ್ಲಿಷ್ ಹಾಗೂ ಕನ್ನಡದಲ್ಲಿ. ಇತರ-ಕರ್ನಾಟಕದ ಗಾಂ ತಿಮ್ಮಪ್ಪನಾಯಕ, ವಿಜಯನಗರ ಸಾಮ್ರಾಜ್ಯ, ತುಳುನಾಡಿನ ಧಾರ್ಮಿಕ ಪರಂಪರೆ, ಗೊಮ್ಮಟ, ಶಿರೂರ ವೀರಭದ್ರಪ್ಪನವರು, ಕರ್ನಾಟಕತ್ವದ ಜಾಗೃತಿ. ವೈಚಾರಿಕ ಪ್ರಬಂಧ-ಸ್ವಾತಂತ್ರ್ಯ ಹೋರಾಟದ ಹಲವು ಮುಖಗಳು. ಹರಟೆ ಪಚಡಿ. ಸೇರಿ ೭೦ಕ್ಕೂ ಮಿಕ್ಕು ಕೃತಿ ಪ್ರಕಟಿತ. ಸಂದ ಪ್ರಶಸ್ತಿಗಳು-ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನ ಪ್ರಶಸ್ತಿ, ತುಳು ಅಕಾಡಮಿ ಪ್ರಶಸ್ತಿ, ಚುಂಚಶ್ರೀ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಇವು ಮುಖ್ಯವಾದುವುಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಪುಂಡಲೀಕ ಪಾಟೀಲ – ೧೯೩೬ ಇ.ಪಿ. ರೈಸ್ – ೧೮೪೯ ಸುಶೀಲ ನೆಲ್ಲಿಸರ – ೧೯೫೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top