ಡಿ.ಎನ್. ಗುರುದತ್

Home/Birthday/ಡಿ.ಎನ್. ಗುರುದತ್
Loading Events
This event has passed.

೧೯.೦೬.೧೯೪೦ ಸಂಗೀತಗಾರರ ಮನೆತನದಲ್ಲಿ ಬೆಳೆದ ಗುರುದತ್ ರವರು ಹುಟ್ಟಿದ್ದು ಬೆಂಗಳೂರು. ತಂದೆ ಡಿ.ಕೆ.ನಾಗಣ್ಣ, ತಾಯಿ ಅಶ್ವತ್ಥ ಲಕ್ಷ್ಮಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಬಿ.ಎಸ್ಸಿ. ಪದವಿ. ಎಚ್.ಎ.ಎಲ್.ನಲ್ಲಿ ಉದ್ಯೋಗಕ್ಕೆ ಸೇರಿ ಮ್ಯಾನೇಜರ್‌ ಹುದ್ದೆಗೇರಿ ನಿವೃತ್ತಿ. ನಿವೃತ್ತಿಯ ನಂತರವೂ ಒಂದಿಲ್ಲೊಂದು ಸಂಗೀತ ಚಟುವಟಿಕೆಗಳಲ್ಲಿ ವಹಿಸುತ್ತಿರುವ ಪ್ರಮುಖ ಪಾತ್ರ. ಚಿಕ್ಕಂದಿನಿಂದಲೂ ತಾಯಿ ಹೇಳಿಕೊಳ್ಳುತ್ತಿದ್ದ ಸಂಪ್ರದಾಯದ ಹಾಡುಗಳ ಪ್ರಭಾವ. ತಾಯಿಯೊಡನೆ ಹಾಡಿಗೆ ಕೂಡಿಸಿದ ತಮ್ಮ ದನಿ, ಬಿಡುವಿನ ವೇಳೆಯಲ್ಲಿ ತಾಯಿಯಿಂದಲೇ ಸಂಗೀತದ ಮೊದಲ ಪಾಠ. ನಂತರ ಸೋದರಮಾವಂದಿರಾದ ಎಚ್.ರಾಮಚಂದ್ರರಾವ್ ಮತ್ತು ಎಚ್.ಎನ್.ಕೃಷ್ಣ ರವರಲ್ಲಿ ಸಂಗೀತ ಶಿಕ್ಷಣ. ಉನ್ನತ ಶಿಕ್ಷಣ ಪಡೆದದ್ದು ಗಾನಕಲಾ ಭೂಷಣ ವಿದ್ವಾನ್ ಆನೂರು ಎಸ್.ರಾಮಕೃಷ್ಣವರಲ್ಲಿ. ಇದೀಗಲೂ ವಿದ್ವಾನ್ ಎಸ್.ಶಂಕರ್‌ ಬಳಿ ಸಂಗೀತ ಶಿಕ್ಷಣ ಪಡೆಯುತ್ತಾ, ತಾವೂ ಹಲವಾರು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಂಗೀತ ಶಿಕ್ಷಣ, ಅಯ್ಯನಾರ್‌ ಸಂಗೀತ ಕಲಾಶಾಲೆಯಲ್ಲಿ ಕೆಲಕಾಲ ಅಧ್ಯಾಪಕರಾಗಿ ಸಲ್ಲಿಸಿದ ಸೇವೆ. ಆಕಾಶವಾಣಿ ಬಿ ‘ಹೈ’ ಕಲಾವಿದರಾಗಿ ನೇಮಕ. ಆಕಾಶವಾಣಿಯ ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ, ಸಂಗೀತೋತ್ಸವಗಳಲ್ಲಿ ಭಾಗಿ, ದೂರದರ್ಶನದ ಹಲವಾರು ವಾಹಿನಿಗಳಲ್ಲಿ ಸಂಗೀತ ಕಚೇರಿಯ ಪ್ರಸಾರ. ಬೆಂಗಳೂರು ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್, ತಾಳ ವಾದ್ಯ ಕಲಾಕೇಂದ್ರ, ಕೃಷ್ಣ ಸಂಗೀತ ಸಭಾ, ತ್ಯಾಗರಾಜ ಗಾನಸಭಾ, ಬಿ.ಟಿ.ಎಂ. ಸಾಂಸ್ಕೃತಿಕ ಕೇಂದ್ರವಲ್ಲದೆ ಪ್ರತಿಷ್ಠಿತ  ದಕ್ಷಿಣ ಭಾರತ ಸಂಗೀತೋತ್ಸವಗಳಾದ ತಿರುವನಂತಪುರ ಮತ್ತು ಚೆನ್ನೈ ಮುಂತಾದೆಡೆ ಸಂಗೀತೋತ್ಸವಗಳಲ್ಲಿ ನಡೆಸಿಕೊಟ್ಟ ಕಚೇರಿಗಳು. ಸಂಗೀತ ಸೇವೆಗೆ ಸಂದ ಪ್ರಶಸ್ತಿ, ಸನ್ಮಾನಗಳು ಹಲವಾರು. ಅಯ್ಯನಾರ್‌ ಸಂಗೀತ ಕಲಾಶಾಲೆಯಿಂದ ಸನ್ಮಾನ, ಶ್ರೀಪುರಂದರ, ತ್ಯಾಗರಾಜಸ್ವಾಮಿ ದೇವಾಲಯದಿಂದ ಸಂದ ಗೌರವ, ಮುಂತಾದುವುಗಳು.   ಇದೇ ದಿನ ಹುಟ್ಟಿದ ಕಲಾವಿದರು ಅಶೋಕ್ ಅಕ್ಕಿ. ಟಿ. – ೧೯೫೩ ಬಸವರಾಜ್ ಜಾನ್. ಎಲ್ – ೧೯೫೬ ರೂಪ. ಡಿ. ಬಿಜೂರ್‌ – ೧೯೭೪.

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top