Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಡಿ.ಎನ್.ಶ್ರೀನಾಥ್‌ – ಕಣಜ

ಡಿ.ಎನ್.ಶ್ರೀನಾಥ್‌

Home/Birthday/ಡಿ.ಎನ್.ಶ್ರೀನಾಥ್‌
Loading Events

.೧೨.೧೯೫೦ ಭಾರತೀಯ ಭಾಷೆಗಳ ನಡುವಣ ಸ್ನೇಹ ಸೇತುವಾಗಿ. ಅನುವಾದ ಕ್ರಿಯೆಯನ್ನು ಒಂದು ವ್ರತದಂತೆ ಸ್ವೀಕರಿಸಿ ಇತರ ಭಾಷೆಗಳ ಸಾಹಿತ್ಯಕೃತಿಗಳ ಸೊಗಡನ್ನು ಕನ್ನಡಿಗರಿಗೆ ಪರಿಚಯಿಸುತ್ತಿರುವ ಶ್ರೀನಾಥ್‌ರವರು ಹುಟ್ಟಿದ್ದು ಮಲೆನಾಡ ಸಿರಿ ಶಿವಮೊಗ್ಗದಲ್ಲಿ ೧೯೫೦ ಡಿಸೆಂಬರ್ ೩ ರಂದು. ತಂದೆ ಡಿ. ನಾರಾಯಣರಾವ್, ತಾಯಿ ಗುಂಡಮ್ಮ. ಪ್ರಾರಂಭಿಕ ಶಿಕ್ಷಣ ಶಿವಮೊಗ್ಗದಲ್ಲಿ. ಧಾರವಾಡದ ಮುಕ್ತ ವಿ.ವಿ.ದಿಂದ ಬಿ.ಎ., ಮೈಸೂರು ಮತ್ತು ವಿ.ವಿ.ದಿಂದ ಎಂ.ಎ. (ಕನ್ನಡ) ಮತ್ತು ಎಂ.ಎ. (ಹಿಂದಿ), ಬಿ.ಇಡಿ ಪದವೀಧರರು. ಉದ್ಯೋಗಕ್ಕಾಗಿ ಆಯ್ದುಕೊಂಡದ್ದು ಬೋಧಕವೃತ್ತ. ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಮಿತಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿ, ಶಾರದಾದೇವಿ ಬಾಲಿಕಾ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸಲ್ಲಿಸಿದ ಸೇವೆ. ಸಾಹಿತ್ಯದತ್ತ ಒಲವು ಬೆಳೆದದ್ದು, ಹಿಂದಿ ಕಲಿತದ್ದರಿಂದ ಇತರ ಭಾಷೆಗಳಲ್ಲಿನ ವಿಭಿನ್ನ ದೃಷ್ಟಿಕೋನವನ್ನು ಪರಿಚಯಿಸಲು ೧೮ ನೆಯ ವಯಸ್ಸಿನಿಂದಲೇ ಕೈಗೊಂಡ ಅನುವಾದ ಕಾರ್ಯ. ಹಿಂದಿಯ ರಂಗೆ ರಾಘವ ಅವರ ‘ಶಿಶಿರ’ ಕೃತಿಯು ಪ್ರಥಮ ಅನುವಾದಿತ ಕೃತಿ. ಅನುವಾದದ ಬಗ್ಗೆ ಇದ್ದ ಸಂಕೋಕ ಪ್ರವೃತ್ತಿ ಮಾಯವಾಗಿ ತಮ್ಮಲ್ಲೇ ಬೆಳೆದ ಆತ್ಮವಿಶ್ವಾಸದಿಂದ ಹಲವಾರು ಕೃತಿಗಳನ್ನು ಹಿಂದಿ, ಬಂಗಾಲಿ ಭಾಷೆಗಳಿಂದ ಕನ್ನಡಕ್ಕೆ ತಂದರು. ಇದರಲ್ಲಿ ಕಾದಂಬರಿ, ನಾಟಕ, ಸಣ್ಣಕಥೆಗಳು, ಮಕ್ಕಳ ಸಾಹಿತ್ಯ, ಆಧ್ಯಾತ್ಮಿಕ ಎಲ್ಲವೂ ಒಳಗೊಂಡಿವೆ. ಬಂಗಾಳಿಯಿಂದ ಗುರುತು ಸಿಗಲ್ಲಿಲ್ಲ, ಸೂತ್ರದ ಗೊಂಬೆ, ಮಂತ್ರವಾದಿಯೂ ಅವನ ಮಂತ್ರವೂ, ಸ್ವಪ್ನಭಂಗ, ಬಟ್ಟಲಿನಲ್ಲಿ ಬಿರುಗಾಳಿ, ಹೆಬ್ಬಾವು ಮತ್ತು ಸೂತ್ರದ ಬೊಂಬೆ, ಒಂದು ಮನೆಯ ಕಥೆ, ಎರಡು ಹೆಣ್ಣು ಮತ್ತು ಒಂದು ಗಂಡು, ಹಳದಿ ಹೂ ಮತ್ತು ಮೂರನೆಯ ಸಾಕ್ಷಿದಾರ ಮುಂತಾದ ಕಾದಂಬರಿಗಳು ಅನುವಾದಗೊಂಡಿವೆ. ಹಿಂದಿಯಿಂದ ಶಿಶಿರ, ರೋಗ ಗ್ರಸ್ತ ನಗರಿ, ಅಭಿಜ್ಞಾನ, ಅಂತಿಮ ಪಣ, ಹಿಂದಿಯ ಮೂರು ನೀಳ್ಗತೆಗಳು, ಲಬಂಗಿ, ಅದೆಷ್ಟು ಪಾಕೀಸ್ತಾನ, ಸ್ವರ್ಗದಲ್ಲಿ ಮಂತ್ರಿ (ಹಿಂದಿಯ ವ್ಯಂಗ್ಯ ಪ್ರಧಾನ ಕಾದಂಬರಿ) ಓಟ ಮುಂತಾದವು. ಮಕ್ಕಳ ಕಾದಂಬರಿಗಳಾದ ರಾಜಕುಮಾರ ಮತ್ತು ಕಿರೀಟ, ಮೂಗಿನ ವೈದ್ಯ, ರಸಿಕ ನವಾಬ ಮುಂತಾದವುಗಳಾದರೆ. ಇಪ್ಪತ್ತ ಭಾರತೀಯ ಕಥೆಗಳು. ನ್ಯಾಯ ಮತ್ತು ಇತರ ಕಥೆಗಳು, ಅವನ ಆತ್ಮಹತ್ಯೆ ಮತ್ತು ಇತರ ಹಿಂದಿ ಕಥೆಗಳು ಮೊದಲಾದ ೩ ಕಥಾಸಂಕಲನಗಳು, ಕುರುಡ ಮತ್ತು ಗೂನ, ನೀಲಿ ತಲೆಯ ಬಾಲಕರು, ಜಂಬದ ರಾಜ, ಬಂಗಾರದ ಚಿತ್ತ, ವಿಚಿತ್ರನ್ಯಾಯ, ಮಕ್ಕಳ ಮಾಯಾಲೋಕ, ಮುರಿದ ರೆಕ್ಕೆ ಮತ್ತು ಏಶಿಯಾದ ಇತರ ಕಥೆಗಳು ಮುಂತಾದ ಮಕ್ಕಳ ಜಾನಪದ ಕಥಾಸಂಕಲನಗಳು, ಆಧ್ಯಾತ್ಮಿಕ ಕೃತಿಗಳು, ವೈಜ್ಞಾನಿಕ ಕೃತಿಗಳು ಸೇರಿ ಒಬ್ಬ ೫೦ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವುಗಳ ಜೊತೆಗೆ ‘ಅಟಲ್ ಬಿಹಾರಿ ವಾಜಪೇಯಿ’. ಸಮೂಹ ಮಾಧ್ಯಮ, ಕನ್ನಡ್‌ಕೀ ಪ್ರತಿನಿಧಿ ಕಹಾನಿಯಾಂ, ವಾರಿಸ್ ತಥಾ ಅನ್ಯ ಕಹಾನಿಯಾಂ ಮತ್ತು ಧರತೀ ಸೇ (ಕವನ ಸಂಕಲನ) ಮೊದಲಾದ ಕೃತಿಗಳ ಮೂಲಕ ಜಿ.ಎಸ್.ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ೧೫ಕ್ಕೂ ಹೆಚ್ಚು ಲೇಖಕರನ್ನು ಹಿಂದಿಗೆ ಪರಿಚಯಿಸಿದ್ದಾರೆ. ‘ಜಗತ್ತಿನ ಅದ್ಭುತಗಳು’ ಕೃತಿಗೆ ೧೯೮೩ ರಲ್ಲಿ ಕರ್ನಾಟಕ ಸರಕಾರದ ಅಹಿಂದಿ ಭಾಷಾ ಲೇಖಕರ ಪುರಸ್ಕಾರ, ‘ಇಪ್ಪತ್ತು ಭಾರತೀಯ ಕಥೆಗಳು’ ಕೃತಿಗೆ ೧೯೮೮ ರಲ್ಲಿ ಗೊರೂರು ಸಾಹಿತ್ಯ ಪ್ರಶಸ್ತಿ, ೨೦೦೧ ರಲ್ಲಿ ಮಧ್ಯಪ್ರದೇಶ್ ರಾಷ್ಟ್ರಭಾಷಾ ಸಮಿತಿ, ಭೂಪಾಲ್ ಇವರ ಲೇಟ್ ಹಜಾರಿಲಾಲ್ ಜೈನ್ ಸ್ಮೃತಿ ಸಮ್ಮಾನ್, ‘ಕನ್ನಡ್ ಕೀ ಕಹಾನಿಯಾಂ’ ಕೃತಿಗೆ ೨೦೦೧ ರಲ್ಲಿ ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಕೇಂದ್ರೀಯ ಹಿಂದಿ ನಿರ್ದೇಶನಾಲಯದ ಅನುವಾದ ಪ್ರಶಸ್ತಿ, ‘ಹಳದಿ ಹೂ’ ಕೃತಿಗೆ ೨೦೦೭ ರಲ್ಲಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಭೀಷ್ಮ ಸಾಹನಿಯವರ ಪ್ರಾತಿನಿಧಿಕ ಕಥೆಗಳು’ ಕೃತಿಗೆ ೨೦೦೫ ರಲ್ಲಿ ವಿಶ್ವೇಶ್ವರಯ್ಯ ಪ್ರಶಸ್ತಿ, ೨೦೦೯ ರಲ್ಲಿ ಕಮಲ ಗೋಯರಿಕಾ ಪ್ರಶಸ್ತಿ ಮತ್ತು ೨೦೦೯ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿಯಿಂದ ಅನುವಾದ ಪ್ರಶಸ್ತಿಯೂ ದೊರೆತಿದೆ. ಸದ್ದಿಲ್ಲದೆ ಸಾಧನೆಗೈಯ್ಯುತ್ತಿರುವ ಶ್ರೀನಾಥ್‌ರವರ ಹಲವಾರು ಕೃತಿಗಳು ಸದ್ಯದಲ್ಲೇ ಬೆಳಕು ಕಾಣಲಿವೆ.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top