Loading Events

« All Events

  • This event has passed.

ಡಿ.ಎಲ್. ನರಸಿಂಹಾಚಾರ್

October 27, 2023

೨೭-೧೦-೧೯೦೬ ೮-೫-೧೯೭೧ ಗ್ರಂಥ ಸಂಪಾದನೆ, ಭಾಷಾಶಾಸ್ತ್ರದಲ್ಲಿ ಪಾಂಡಿತ್ಯ ಪಡೆದಿದ್ದ ದೊಡ್ಡಬೆಲೆ ಲಕ್ಷ್ಮೀ ನರಸಿಂಹಾಚಾರ್ಯರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ. ತಂದೆ ಶಾಮಯ್ಯಂಗಾರ್. ಸರಕಾರಿ ಗುಮಾಸ್ತರಾಗಿದ್ದ ತಂದೆ ವರ್ಗಾವಣೆಯಿಂದ ಪ್ರಾರಂಭಿಕ ಶಿಕ್ಷಣ ಪಾವಗಡ, ಮಧುಗಿರಿ, ಶಿರಾ ಮತ್ತು ತುಮಕೂರು. ಉನ್ನತ ವ್ಯಾಸಂಗ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಪದವಿ. ಬಹುಮಾನ ಮತ್ತು ಚಿನ್ನದ ಪದಕದೊಡನೆ. ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ.ಎ. ಪದವಿ (೧೯೨೯). ಉದ್ಯೋಗಕ್ಕೆ ಸೇರಿದ್ದು ಮೈಸೂರಿನ ಪ್ರಾಚ್ಯ ವಿದ್ಯಾ ಸಂಶೋಧನಾ ಸಂಸ್ಥೆಯಲ್ಲಿ ರೆಸಿಡೆಂಟ್ ಕನ್ನಡ ಪಂಡಿತರಾಗಿ ನೇಮಕ. ಮಹಾರಾಜ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಆಯ್ಕೆ. ನಂತರ ಮೈಸೂರಿನ ಇಂಟರ್ ಮೀಡಿಯೆಟ್ ಕಾಲೇಜು, ಉಪಪ್ರಾಧ್ಯಾಪಕರಾಗಿ ಬೆಂಗಳೂರು ಸೆಂಟ್ರಲ್ ಕಾಲೇಜು, ಮತ್ತೆ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಬಡ್ತಿ ಪಡೆದು ೧೯೬೨ ನಿವೃತ್ತಿ. ನೀವೃತ್ತಿಯ ನಂತರ ಅಧ್ಯಯನ, ಸಂಶೋಧನೆಗೆ ಮೀಸಲಾದ ವೇಳೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ- ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ವಹಿಸಿಕೊಂಡ ಜವಾಬ್ದಾರಿ. ಮನೆಯಲ್ಲಿ ಸುಸಂಸ್ಕೃತ, ಸಾಹಿತ್ಯ ವಾತಾವರಣ. ಅಜ್ಜನ ಸೊಗಸಾದ ಭಾರತ ವಾಚನ ಮೊಮ್ಮಗನ ಸಾಹಿತ್ಯಾಭಿರುಚಿಗೆ ಮಾಡಿದ ಅಂಕುರಾರ್ಪಣ. ವಿಶ್ವವಿದ್ಯಾಲಯದ ಧನ ಸಹಾಯ ಆಯೋಗದ ಸಂಶೋಧನಾ ವಿದ್ವಾಂಸರಾಗಿ ಮಾಡಿದ ಉತ್ಕೃಷ್ಟ ಕೃತಿ ರಚನೆಗಳು. ಕನ್ನಡವನ್ನು ಕಟ್ಟಿ ಬೆಳೆಸಿದವರಲ್ಲಿ ಅಗ್ರಗಣ್ಯರು. ಪ್ರಾಚೀನ ಸಾಹಿತ್ಯ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ ಇವು ಮೆಚ್ಚಿನ ವಿಷಯಗಳು. ಸಂಪಾದಿತ ಕೃತಿಗಳು-ಸಕಲ ವೈದ್ಯ ಸಂಹಿತಾಸಾರಾರ್ಣವ, ಭೀಷ್ಮಪರ್ವ, ಪಂಪ ರಾಮಾಯಣ ಸಂಗ್ರಹ, ವಡ್ಡಾರಾಧನೆ, ಸಿದ್ಧರಾಮಚರಿತೆಯ ಸಂಗ್ರಹ, ಶಬ್ದಮಣಿದರ್ಪಣ, ಗೋವಿನ ಹಾಡು, ಸುಕುಮಾರ ಚರಿತಂ, ಶಬ್ದವಿಹಾರ, ಪಂಪ ಭಾರತ ದೀಪಿಕೆ, ಕನ್ನಡ ಗ್ರಂಥ ಸಂಪಾದನೆ ಮುಂತಾದ ವಿದ್ವತ್ ಪೂರ್ಣ ಕೃತಿಗಳು. ನಿಘಂಟಿನ ಪ್ರಧಾನ ಸಂಪಾದಕರಾಗಿ ಕ.ಸಾ.ಪ.ದ ಕನ್ನಡ- ಕನ್ನಡ ನಿಘಂಟಿನ ಏಳು ಸಂಪುಟಗಳು. ಪ್ರಬುದ್ಧ ಕರ್ನಾಟಕ ಸಂಪಾದಕರಾಗಿ, ಮೈಸೂರು ವಿಶ್ವವಿದ್ಯಾಲಯ, ವಿದ್ಯಾ ಇಲಾಖೆಗಳಲ್ಲಿ, ಉಸ್ಮಾನಿಯಾ ಮೊದಲಾದ ಬೇರೆಬೇರೆ ವಿಶ್ವವಿದ್ಯಾಲಯ, ವಿದ್ಯಾ ಸಮಿತಿಗಳಲ್ಲಿಯೂ ಸಲ್ಲಿಸಿದ ಸೇವೆ. ಆಚಾರ‍್ಯರ ಸೇವೆಗಾಗಿ ಕನ್ನಡ ನಾಡು ಬೀದರ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ (೧೯೬೦). ಆ ಸಂದರ್ಭದಲ್ಲಿ ‘ಜ್ಞಾನೋಪಾಸಕ’ ಎಂಬ ಅಭಿನಂದನ ಗ್ರಂಥ, ೧೯೬೭ರಲ್ಲಿ ಉಪಾಯನ ಅರ್ಪಣೆ, ೧೯೬೭ರಲ್ಲಿ ಮೈಸೂರು ಸರಕಾರದಿಂದ ರಾಜ್ಯಪ್ರಶಸ್ತಿ, ೧೯೬೯ರಲ್ಲಿ ಮೈಸೂರು ವಿ.ವಿ.ದ ಗೌರವ ಡಿಲಿಟ್. ಪದವಿ ಮುಂತಾದ ಗೌರವಗಳು.

Details

Date:
October 27, 2023
Event Category: