Loading Events

« All Events

  • This event has passed.

ಡಿ. ಬಾಲಕೃಷ್ಣ

August 26

೨೬.೦೮.೧೯೫೫ ಭಾವಮಾಧುರ್ಯ, ರಾಗ ಶುದ್ಧತೆಯ ವೀಣೆಯ ಝೇಂಕಾರಕ್ಕೆ ಹೆಸರಾದ ಬಾಲಕೃಷ್ಣರವರು ಹುಟ್ಟಿದ್ದು ಮೈಸೂರು. ತಂದೆ ವಿದ್ವಾಂಸರಾದ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರು, ತಾಯಿ ಶಾರದಮ್ಮ. ಓದಿದ್ದು ಎಂ.ಎಸ್‌..ಸಿ ಪದವಿ. ಉದ್ಯೋಗ ಭಾರತೀಯ ರಿಸರ್ವ ಬ್ಯಾಂಕಿನಲ್ಲಿ. ವಂಶಪಾರಂಪರ್ಯವಾಗಿ ಬಂದ ವೀಣಾವಾದನಕ್ಕೆ ಆಕರ್ಷಿತರಾಗಿ ತಂದೆಯಿಂದಲೇ ವೀಣಾವಾದನ ಶಿಕ್ಷಣ. ತಂದೆಯೊಡನೆ ಅನೇಕ ವೀಣಾವಾದನ ಕಚೇರಿಗಳಲ್ಲಿ ಭಾಗಿ. ಮೈಸೂರಿನ ವೀಣಾಪರಂಪರೆಯನ್ನು ಸಂಪ್ರದಾಯ ಬದ್ಧವಾಗಿ ಕಾಪಾಡಿಕೊಂಡು ಬರುವ ಹೆಬ್ಬಯಕೆ. ಹಲವಾರು ಶಿಷ್ಯರಿಗೆ ವೀಣಾವಾದನ ಶಿಕ್ಷಣ. ಆಕಾಶವಾಣಿಯ ಸಂಗೀತ ಸ್ಪರ್ಧೆಯಲ್ಲಿ ಪಡೆದ ಬಹುಮಾನ. ಹಲವಾರು ಕಾರ್ಯಕ್ರಮಗಳ ಬಿತ್ತರ. ‘ಎ’ ದರ್ಜೆಕಲಾವಿದರಾಗಿ ನೇಮಕ. ರಾಷ್ಟ್ರೀಯ ಜಾಲದಲ್ಲಿ ಹಲವಾರು ಬಾರಿ, ದೂರದರ್ಶನ ವಾಹಿನಿಗಳಲ್ಲೂ ಕಾರ್ಯಕ್ರಮ ಪ್ರಸಾರ. ಚಾಮರಾಜಪೇಟೆ ರಾಮಸೇವಾ ಮಂಡಲಿ, ಮದರಾಸಿನ ಮ್ಯೂಸಿಕ್‌ ಅಕಾಡಮಿ, ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನಕಲಾ ಪರಿಷತ್‌, ಮೈಸೂರಿ ಬಿಡಾರಂ ಕೃಷ್ಣಪ್ಪನವರ ರಾಮಮಂದಿರ ಮುಂತಾದೆಡೆಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ದೇಶಾದ್ಯಂತ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಗಳು. ೧೯೮೭ ರ ರಷ್ಯಾ ಪ್ರವಾಸದಲ್ಲಿ, ೧೯೯೧ ರ ಜರ್ಮನಿಯ ಫೆಸ್ಟಿವಲ್‌ ಆಫ್‌ ಇಂಡಿಯಾದಲ್ಲೂ ವೀಣೆ ದೊರೆಸ್ವಾಮಿ ಅಯ್ಯಂಗಾರ್ಯರೊಡನೆ, ಪಂಚವೀಣಾ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ನೀಡಿದ ಸಂಗೀತ ಸುಧೆ. ೨೦೦೨ ರಲ್ಲಿ ಅಮೆರಿಕಾ ಪ್ರವಾಸದಲ್ಲಿ ಯಶಸ್ವಿ ಕಾರ್ಯಕ್ರಮ. ಚೆನ್ನೈನ ಮ್ಯೂಸಿಕ್‌ ಅಕಾಡಮಿಯಿಂದ ನಾಲ್ಕು ಬಾರಿ ಸಂದ ಪ್ರಶಸ್ತಿ, ೧೯೯೭ ರಲ್ಲಿ ಬೆಂಗಳೂರಿನ ಗಾನ ಕಲಾ ಪರಿಷತ್‌ ನಿಂದ ಗಾನ ಕಲಾಶ್ರೀ, ತಾಳವಾದ ಕಲಾಕೇಂದ್ರದಿಂದ ಪುಟ್ಟಾಚಾರ್ ಸ್ಮಾರಕ ಪ್ರಶಸ್ತಿ, ೨೦೦೨, ೨೦೦೩ ರ ಗಾನಕಲಾ ಪರಿಷತ್ತಿನ ಸಂಗೀತ ಸಮ್ಮೇಳನದ ಅತ್ಯುತ್ತಮ ವೀಣಾವಾದಕ, ಅತ್ಯುತ್ತಮ ಪಲ್ಲವಿ ಪ್ರಾತ್ಯಕ್ಷಿಕೆಗಾಗಿ ದೊರೆತ ಪ್ರಶಸ್ತಿಗಳು.

* * *

Details

Date:
August 26
Event Category: