Loading Events

« All Events

  • This event has passed.

ತಿಟ್ಟೆ ಕೃಷ್ಣಯ್ಯಂಗಾರ್

November 24, 2023

೨೪೧೧೧೯೦೨ ೧೬೧೯೯೭ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರ ಮನೆತನದ ಕೃಷ್ಣಯ್ಯಂಗಾರ್ ಹುಟ್ಟಿದ್ದು ತಂಜಾವೂರಿನ ಬಳಿಯ ತಿಟ್ಟೆ ಗ್ರಾಮದಲ್ಲಿ. ತಂದೆ ನಾರಾಯಣ ಅಯ್ಯಂಗಾರ್. ಒಂಬತ್ತನೆಯ ವಯಸ್ಸಿನಲ್ಲಿಯೇ ಅಪಾರ ಸ್ವರಜ್ಞಾನಪಡೆದ ಬಾಲಕನಿಗೆ ತಂದೆಯಿಂದಲೇ ಸಂಗೀತರ ಪ್ರಥಮಪಾಠ. ವೀಣೆಶೇಷಣ್ಣ, ಸುಬ್ಬಣ್ಣ, ಕೃಷ್ಣಪ್ಪನವರ ಮಾರ್ಗದರ್ಶನ. ಹದಿನೇಳನೆಯ ವಯಸ್ಸಿಗೇ ದೊರೆತ ಆಸ್ಥಾನ ವಿದ್ವಾಂಸ ಪದವಿ, ತಂದೆ, ತಾತ, ಇವರು ಮೂರು ತಲೆಮಾರು ಆಸ್ಥಾನ ಪದವಿ ಪಡೆದ ಹೆಗ್ಗಳಿಕೆ. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿ, ಕರ್ನಾಟಕ ರಾಜ್ಯ ಪರೀಕ್ಷಾಮಂಡಲಿಯ ಪರೀಕ್ಷಕರಾಗಿ ಶ್ರೀ ತ್ಯಾಗರಾಜ ಸಂಗೀತ ವಿದ್ವತ್ ಸಭೆಯ ಅಧ್ಯಕ್ಷರೂ, ವ್ಯವಸ್ಥಾಪಕರೂ ಆಗಿ ಸಂಸ್ಥೆಯನ್ನು ೨೫ ವರ್ಷ ನಡೆಸಿದ ಕೀರ್ತಿ. ಸಂಗೀತದ ಬಗ್ಗೆ ಕರ್ನಾಟಕ ಸಂಗೀತ ಲಕ್ಷ್ಯ-ಲಕ್ಷಣ ಪಠ್ಯಪುಸ್ತಕ ರಚನೆ. ತ್ಯಾಗರಾಜ ಹೃದಯದರ್ಪಣ, ವೀಣೆ ಸುಬ್ಬಣ್ಣನವರ ಅಪರೂಪದ ಕೃತಿಗಳು, ಸಂಗೀತ ಪ್ರಪಂಚದ ಅನನ್ಯ ಕೃತಿಗಳ ರಚನೆ, ಹಾಡುಗಾರಿಕೆಯ ಜೊತೆಗೆ ವೀಣೆ, ಜಲತರಂಗ್, ಹಾರ್ಮೋನಿಯಂನಲ್ಲಿ ಪಡೆದ ಪರಿಣತಿ. ಕೃಷ್ಣರಾಜ ಒಡೆಯರ ಕಾಲದಲ್ಲಿ ವಿದೇಶಿ ವಾದ್ಯಗಳ ಪರಿಚಯ. ಸರೋದ್ ರೀತಿಯ ದಲ್‌ಜಿತ್‌ ವಾದ್ಯ ನಿಪುಣರು. ಹರಿಕಥಾ ಕ್ಷೇತ್ರದಲ್ಲೂ ಗಳಿಸಿದ ಹೆಸರು. ಗಾನಕಥಾ ಸುಧಾಕರ, ಕೀರ್ತನ ಭೂಷಣ, ಹರಿಕಥಾ ವಿಶಾರದ, ಹರಿಕಥಾ ವಿದ್ವಾನ್ ಬಿರುದುಗಳು. ಚಾಮರಾಜ ಒಡೆಯರಿಂದ ಗಾನವಿಶಾರದ, ಮೈಸೂರು ಸಂಗೀತ, ನಾಟಕ ಅಕಾಡಮಿ ಪ್ರಶಸ್ತಿ, ಬಿಡಾರಂ ಕೃಷ್ಣಪ್ಪನವರ ಸೀತಾರಾಮ ಮಂದಿರದ ೮ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆ-ಗಾನ ಕಲಾಸಿಂಧು ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಸಂಗೀತ ಕಲಾರತ್ನ, ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ ಪುರಸ್ಕೃತರು.   ಇದೇ ದಿನ ಹುಟ್ಟಿದ ಕಲಾವಿದರು ವಿಟ್ಲ ಗೋಪಾಲಕೃಷ್ಣ ಜೋಶಿ – ೧೯೧೬ ವಾಮನರಾವ್ ಎನ್.ಎಸ್. – ೧೯೧೯ ಫ್ಲೊರ ಅಚ್ಯುತ – ೧೯೫೭ ರಾಮಕೃಷ್ಣ ಎಸ್.ಎನ್. – ೧೯೬೩

Details

Date:
November 24, 2023
Event Category: