ದೇವಂಗಿ ಚಂದ್ರಶೇಖರ್

Home/Birthday/ದೇವಂಗಿ ಚಂದ್ರಶೇಖರ್
Loading Events
This event has passed.

೭-೬-೧೯೨೧ ೬-೬-೧೯೯೯ ಇಂದು ಸುಗಮ ಸಂಗೀತವೆಂದು, ಸಂಗೀತದ ಪ್ರತ್ಯೇಕ ಭಾಗವೇ ಆಗಿಹೋಗಿರುವ, ಈ ಲಘು ಸಂಗೀತ, ಭಾವಗೀತೆ ಎಂಬ ಪ್ರಕಾರಗಳಾಗಿ ಕರೆಯಲ್ಪಡುತ್ತಿದ್ದ ಹಾಡುಗಾರಿಕೆಯನ್ನು ಪ್ರಖ್ಯಾತಿಗೆ ತಂದವರಲ್ಲಿ ದೇವಂಗಿ ಚಂದ್ರಶೇಖರ್‌ರವರ ಕೊಡುಗೆ ಬಹುದೊಡ್ಡದು. ಕಾಳಿಂಗರಾಯರ ಸಮಕಾಲೀನರಾಗಿದ್ದ ಚಂದ್ರಶೇಖರ್‌ರವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೇವಂಗಿಯಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸ ದೇವಂಗಿ ಮತ್ತು ತೀರ್ಥಹಳ್ಳಿಯಲ್ಲಿ. ಪ್ರೌಢಶಾಲೆ ಮಹಾರಾಜ ಹೈಸ್ಕೂಲು. ಇಂಟರ್ ಮೀಡಿಯೆಟ್ ಕಾಲೇಜಿಗೆ ಸೇರಿದ್ದು. ಯುವರಾಜ ಕಾಲೇಜು. ಉಜ್ವಲರಾಷ್ಟ್ರಪ್ರೇಮಿ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ಕುವೆಂಪುರವರ ಬಂಧು. ಅತಿಭಾವುಕರು, ಸಾಹಿತ್ಯ, ಸಂಗೀತ ಪ್ರಿಯರಾಗಿ ಸದಾ ಕಲ್ಪನಾಲೋಕದಲ್ಲಿ ವಿಹಾರ. ಹುಡುಗರಾಗಿದ್ದಾಗಲೇ ಹಾಡುಗಳನ್ನು ಗುನುಗುತ್ತಿದ್ದು, ಸಭೆ ಸಮಾರಂಭಗಳಲ್ಲಿ ಯಾವಾಗಲೂ ಹಾಡುತ್ತಿದ್ದುದು ಸೈಗಾಲ್, ಕಾನನ್ ದೇವಿ, ಪಂಕಜ್ ಮಲ್ಲಿಕ್, ಕೆ.ಸಿ.ಡೇ. ಮುಂತಾದವರ ಹಾಡುಗಳ ಅನುಕರಣೆ. ಸಮಾರಂಭವೊಂದರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ನಂ. ಶಿವರಾಮ ಶಾಸ್ತ್ರಿಗಳು ಕೆ.ಎಸ್.ನ.ರವರ “ನಮ್ಮೂರು ಚೆಂದವೊ…” ಹಾಡಿದ್ದೇ ಇವರು ಆ ಹಾಡಿನ ಮೋಡಿಗೆ ಒಳಗಾಗಿ ಕೆ.ಎಸ್.ನ. ಭೇಟಿ. ಆಗಾಗ್ಗೆ ಚರ್ಚೆ, ಕನ್ನಡ ಕವಿಗಳ ಕಾವ್ಯಾಭ್ಯಾಸ. ಬೇಂದ್ರೆ, ಪು.ತಿ.ನ. ಆದಿಯಾಗಿ ಹಿರಿಕಿರಿಕವಿಗಳ ಕವನಗಳಿಗೆ ರಾಗ ಸಂಯೋಜಿಸಿ ಮುಂದೆ ಹಾಡತೊಡಗಿದ್ದು ಕನ್ನಡ ಗೀತೆಗಳನ್ನು. ಇವರ ಕಂಠಸಿರಿಗೆ ಮಾರುಹೋಗಿದ್ದ ರಾಳ್ಲಪಲ್ಲಿ ಅನಂತಕೃಷ್ಣ ಶರ್ಮರು. “ಸಂಗೀತ ಕಲಿಸ್ತೇನೆ ಬಾರಯ್ಯಾ, ಎಂದು ಕೈ ಹಿಡಿದು ಎಳೆದಿದ್ದರಂತೆ.” ಇವರು ಹೋಗಲಿಲ್ಲ. ಮುಂದೆ ಪಶ್ಚಾತ್ತಾಪ ಪಟ್ಟರು,. ಕೆ.ಎಸ್.ನ.ರವರ “ರಾಯರು ಬಂದರು, ಬಳೆಗಾರ ಚೆನ್ನಯ್ಯ, ನವಿಲೂರಿನೊಳಗೆಲ್ಲ, ಶ್ಯಾನುಭೋಗರ ಮಗಳು” ಮುಂತಾದುವುಗಳನ್ನು ಹಾಡಿ ಕೆ.ಎಸ್.ನ.ರವರ ಗೀತೆಗಳಿಗೆ ಜೀವತುಂಬಿದರು. ಚಂದ್ರಶೇಖರ್‌ರವರ ಹಾಡುಗಳು ಆಕಾಶವಾಣಿಯಿಂದಲೂ ಬಿತ್ತರಗೊಂಡಿವೆ. ಶಾಸ್ತ್ರೀಯ ಸಂಗೀತ ಕಲಿಯದೆ ಸಾಸಿದ್ದು ಅಪಾರ. ಸಾಹಿತ್ಯದ ಗೀಳು. ಬರೆದದ್ದು ಕಡಿಮೆ. ಅಮೂಲ್ಯ ಕೃತಿಗಳ ರಚನೆ. ಹೊಸಗನ್ನಡ ಭಾವಗೀತೆಗಳಲ್ಲಿ ಜೀವನವಿಕಾಸ, ಬಣ್ಣವಾಡು, ಜಾನಪದ ಗೀತೆಗಳಲ್ಲಿ ಸಂಸಾರ ಚಿತ್ರಗಳು, ತೀರ್ಥಹಳ್ಳಿ ತಾಲ್ಲೂಕು ದರ್ಶನ, ಗೋಪಾಲಗೌಡರ ಬಗ್ಗೆ ಒಂದು ಕೃತಿ ರಚನೆ. ಬಣ್ಣವಾಡು ಪುಸ್ತಕಕ್ಕೆ ಕುವೆಂಪುರವರ ಆಶೀರ‍್ವಾದ. ಭಾವಗೀತೆಗಳ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ೧೯೮೨ರಲ್ಲಿ ಕರ್ನಾಟಕ ಸಂಗೀತ ಅಕಾಡಮಿಯಿಂದ ಅಭೂತಪೂರ್ವ ಸನ್ಮಾನ. ಮೃದು ಹೃದಯಿ, ಸಜ್ಜನ, ಕಲಾಪ್ರೇಮಿ ಮೌಲಿಕ ಗ್ರಂಥಗಳ ಸಂಗ್ರಹ ಹವ್ಯಾಸ, ಮಲೆನಾಡ ಕೋಗಿಲೆಯ ಸ್ವರ ಸ್ತಬ್ಧವಾಗಿ ಹೋದದ್ದು. ೧೯೯೯ರ ಜೂನ್ ಆರರಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕುಕ್ಕಿಲ ಕೃಷ್ಣಭಟ್ಟ – ೧೯೧೧-೨೧.೭.೮೮ ಕುಲಕರ್ಣಿ ಬಿಂಧುಮಾದವ – ೧೯೨೮ ಬೋಳುವಾರು. ಐ.ಕೆ. – ೧೯೫೬ ಪ್ರೇಮಾತಾಶೀಲದಾರ – ೧೯೫೧ ಕೆ.ಆರ್. ದುರ್ಗಾದಾಸ್ – ೧೯೫೫ ಹನುಮಾಕ್ಷಿ ಗೋಗಿ – ೧೯೫೫

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top