Loading Events

« All Events

  • This event has passed.

ದೇಶಾಂಶ ಹುಡಗಿ

November 6

೬-೧೧-೧೯೩೬ ದೇಶಾಂಶ ಹುಡಗಿ ಕಾವ್ಯನಾಮದ ಶಾಂತಪ್ಪ ದೇವರಾಯರು ಹುಟ್ಟಿದ್ದು ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ. ತಂದೆ ಶರಣಪ್ಪ ದೇವರಾಯ, ತಾಯಿ ಭೀಮಾಭಾಯಿ. ಪ್ರಾರಂಭಿಕ ಶಿಕ್ಷಣ ಚಿಟಗುಪ್ಪದಲ್ಲಿ. ಮಧ್ಯಪ್ರದೇಶದ ಇಂದೂರಿನಿಂದ ಇಂಟರ್ ಮೀಡಿಯೆಟ್. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಗುಲಬರ್ಗಾ ಕಾಲೇಜಿನಿಂದ ಬಿ.ಎಡ್ ಪದವಿ ಮತ್ತು ಹಿಂದಿಯಲ್ಲಿ ಸಾಹಿತ್ಯ ವಿಶಾರದ. ಈಜುಗಾರಿಕೆ, ಹಾಡುಗಾರಿಕೆ, ನಾಟಕ ನಿರ್ದೇಶನ – ಅಭಿನಯ, ಕೊಳಲುವಾದನ ಮುಂತಾದ ಹಲವಾರು ಹವ್ಯಾಸಗಳು. ಉದ್ಯೋಗಕ್ಕಾಗಿ ಸೇರಿದ್ದು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ೧೯೫೪ರಲ್ಲಿ. ೧೯೬೫ರಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ, ವಯಸ್ಕರ ಶಿಕ್ಷಣ ಯೋಜನಾಕಾರಿಯಾಗಿ, ಶಾಲಾ ತನಿಖಾಕಾರಿಯಾಗಿ ಕಾರ್ಯ ನಿರ್ವಹಿಸಿ ೧೯೯೪ರಲ್ಲಿ ನಿವೃತ್ತಿ. ಹಲವಾರು ರಾಜ್ಯಮಟ್ಟದ ಕಾರ್ಯಗಾರಗಳಲ್ಲಿ ಭಾಗಿ. ಹೆಗ್ಗೋಡು, ಶಿವಾರಗುಡ್ಡ, ಮಂಡ್ಯ, ಮೈಸೂರು, ಬೆಂಗಳೂರು, ಬಸವಕಲ್ಯಾಣ, ಬೀದರ ಮುಂತಾದೆಡೆ ಸಾಕ್ಷರತಾ ಕಾರ್ಯಾಗಾರಗಳು. ಮಧ್ಯಪ್ರದೇಶದ ಖಾಂಡ್ವಾ, ಆಂಧ್ರ, ತಮಿಳುನಾಡು, ಪಾಂಡಿಚೆರಿ ಮುಂತಾದೆಡೆ ರಾಷ್ಟ್ರಮಟ್ಟದ ಸಾಕ್ಷರತಾ ಕಾರ್ಯಕ್ರಮಗಳು. ಹಲವಾರು ಪತ್ರಿಕೆಗಳ ಸಂಪಾದಕರಾಗಿ ಪತ್ರಿಕಾ ರಂಗದಲ್ಲಿ ಸಲ್ಲಿಸಿದ ಸೇವೆ. ಆಕಾಶವಾಣಿ, ದೂರದರ್ಶನ ಕವಿಗೋಷ್ಠಿಗಳಲ್ಲಿ ಭಾಗಿ. ಹಲವಾರು ಸಂಸ್ಥೆಗಳಲ್ಲಿ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಬೀದರ ಧರಿನಾಡು ಕನ್ನಡ ಸಂಘದ ಮೂಲಕ ಹಲವಾರು ಉದಯೋನ್ಮುಖ ಲೇಖಕರ ಕೃತಿಗಳನ್ನು ಪ್ರಕಟಿಸಿದ ಹೆಮ್ಮೆ. ಪ್ರಕಟಿತ ಕೃತಿಗಳು, ವ್ಯಕ್ತಿಚಿತ್ರಗಳು-ಗ್ರಾಮಶಿಲ್ಪಿಗಳು, ಮಹಾತ್ಮ ಬಸವೇಶ್ವರ, ಭಗವಾನ್‌ದಾಸ, ನಾ ಕಂಡ ನನ್ನವರು, ಬೀದರ ಜಿಲ್ಲಾಬರಹಗಾರರು, ಬೀದರ ಜಿಲ್ಲಾ ತತ್ತ್ವಪದಕಾರರು. ಸಂಪಾದಿತ- ಸಿದ್ಧರಾಮೇಶ್ವರ ವಚನಗಳು, ಧರಿನಾಡಿನ ಕಾವ್ಯ, ಬಸವಶಿಶು, ಗುರುಪುತ್ರ, ಕಾವ್ಯಕಾರಂಜಿ, ಕನ್ನಡದ ದೀಪ. ಇತರ-ದಿಗಂಬರ ವಚನಗಳು, ಧರಿನಾಡಿನ ಜಾನಪದ ಗಾದೆಗಳು, ಸಾಕ್ಷರತಾ ಗೀತೆಗಳು. ಕವನ ಸಂಕಲನ-ಬದುಕಿನ ಸುತ್ತ ಮುಂತಾದುವು ಸೇರಿ ಇಪ್ಪತ್ತು ಕೃತಿ ಪ್ರಕಟಿತ. ಹಲವಾರು ಧ್ವನಿ ಸುರಳಿಗಳ ಬಿಡುಗಡೆ. ಸಂದ ಪ್ರಶಸ್ತಿ, ಗೌರವಗಳು. ಉತ್ತಮ ಹೈಸ್ಕೂಲು ಶಿಕ್ಷಕರಾಗಿ, ಜಾನಪದ ಸೇವೆಗಾಗಿ, ಕನ್ನಡ ಸೇವೆಗಾಗಿ, ಉತ್ತಮ ಸಾಹಿತಿಯಾಗಿ, ಭಾವಗೀತಕಾರನಾಗಿ ಕಾಯಕ ಸಮ್ಮಾನ ಪ್ರಶಸ್ತಿ, ‘ಅನುಭಾವಶ್ರೀ’ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ಟೇಕಲ್ ಗೋಪಾಲಕೃಷ್ಣ – ೧೯೩೧ ಶ್ರೀನಿವಾಸ ಉಡುಪ – ೧೯೪೫ ಮಧುವೆಂಕಾರೆಡ್ಡಿ – ೧೯೫೧ ವೆಂಕಟಸ್ವಾಮಿ ಎಂ. – ೧೯೫೫

Details

Date:
November 6
Event Category: