Loading Events

« All Events

  • This event has passed.

ದೊಡ್ಡೇರಿ ವೆಂಕಟಗಿರಿರಾವ್

December 28, 2023

೨೮-೧೨-೧೯೧೩ ೨೬-೫-೨೦೦೪ ಪ್ರಖ್ಯಾತ ವೈದ್ಯ, ಸಾಹಿತಿ, ಛಾಯಾಚಿತ್ರಗ್ರಾಹಕರಾದ ವೆಂಕಟಗಿರಿ ರಾವ್‌ರವರು ಹುಟ್ಟಿದ್ದು ಸೊರಬ ತಾಲ್ಲೂಕಿನ ದೊಡ್ಡೇರಿ ಹಳ್ಳಿಯಲ್ಲಿ. ಪ್ರಾರಂಭಿಕ ಶಿಕ್ಷಣ ಸೊರಬ. ಪಂಡಿತ ತಾರಾನಾಥರ ಆಯುರ್ವೇದ ವಿದ್ಯಾಲಯದಲ್ಲಿ ಪಡೆದ ಎಲ್.ಐ.ಎಂ. ಡಿಪ್ಲೊಮ. ವೈದ್ಯರಾಗಿ ವೃತ್ತಿ ಪ್ರಾರಂಭಿಸಿದ್ದು ಸಾಗರದಲ್ಲಿ. ನಂತರ ಸ್ಥಳಾಂತರಿಸಿದ್ದು ದೊಡ್ಡಬಳ್ಳಾಪುರಕ್ಕೆ. ದೀರ್ಘಕಾಲ ವೈದ್ಯಕೀಯ  ಸೇವೆ. ಬಂದ ರೋಗಿಗಳಿಗೆ ಉಚಿತ ವೈದ್ಯಕೀಯ ಸಲಹೆ ಮುಖಾಂತರ ಕೈಗೊಂಡ ಸಮಾಜ ಸೇವೆ. ಫೋಟೋಗ್ರಫಿ ಮೆಚ್ಚಿನ ಹವ್ಯಾಸ. ೧೯೩೨ರ ಸುಮಾರಿನಲ್ಲೇ ಕವಿತೆಯ ಮುಖಾಂತರ ಸಾಹಿತ್ಯ ಕ್ಷೇತ್ರ ಪ್ರವೇಶ. ಕಾದಂಬರಿ, ಶಿಶುಸಾಹಿತ್ಯ, ಸಣ್ಣಕಥೆ, ಲೈಂಗಿಕ ಸಾಹಿತ್ಯ, ಪ್ರವಾಸಕಥನ ಎಲ್ಲ ಪ್ರಕಾರಗಳಲ್ಲೂ ೩೦ಕ್ಕೂ ಹೆಚ್ಚು ಕೃತಿ ರಚನೆ. ಆರೋಗ್ಯ, ಲೈಂಗಿಕ ವಿಜ್ಞಾನ ಮುಂತಾದ ವಿಷಯಗಳ ಬಗ್ಗೆ ಕನ್ನಡದಲ್ಲಿ ಬರೆದರೆ ಮೂಗು ಮುರಿಯುತ್ತಿದ್ದ ಕಾಲದಲ್ಲಿ ‘ದಾಂಪತ್ಯ ಜೀವನ’ ಮಾಸಪತ್ರಿಕೆ ಪ್ರಾರಂಭ. ಐದು ವರ್ಷ ಕಾಲ ಸಂಪಾದಕರಾಗಿ ಹೊಣೆ ಹೊತ್ತು ನಡೆಸಿದ ಪತ್ರಿಕೆ. ಆರೋಗ್ಯ ವಿಷಯಕ್ಕೆ ಸಂಬಂಸಿದಂತೆ ರಚಿಸಿದ ಕೃತಿಗಳು-ಪ್ರಸವ ವಿಜ್ಞಾನ, ಸಂತಾನ ಸಂಯಮ, ವಿಕೃತ ಕಾಮ, ಕಾಮ ಶಿಕ್ಷಣ ಮುಂತಾದ ಕೃತಿಗಳು. ಕಥಾ ಸಂಕಲನ-ರೋಹಿಣಿ, ದಾಳಿಂಬೆ, ಚೆಲುವೆ, ಕರಿಗಡಬು. ಕಾದಂಬರಿಗಳು-ಸಂಪ್ರದಾನ, ಅವಧಾನ, ದೃಷ್ಟಿದಾನ, ಅತ್ತಿಯ ಹೂವು ಜನಪ್ರಿಯ ಕಾದಂಬರಿಗಳು. ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡವು. ಪುಟ್ಟಣ್ಣ ಕಣಗಾಲರು ಅವಧಾನ ಕಾದಂಬರಿ ಆಧರಿಸಿ ನಿರ್ಮಿಸಿದ್ದು ‘ಅಮೃತ ಘಳಿಗೆ’ ಚಲನಚಿತ್ರ. ಹವ್ಯಾಸಿ ಛಾಯಾಚಿತ್ರಕಾರರಾಗಿ ಗಳಿಸಿದ್ದು ಅಂತಾರಾಷ್ಟ್ರೀಯ ಪ್ರಖ್ಯಾತಿ. ಪಿಕ್ಟೋರಿಯಲ್ ಫೋಟೋಗ್ರಫಿ ವಿಭಾಗದಲ್ಲಿ ಪಡೆದ ಪರಿಣತಿ. ಅಂತಾರಾಷ್ಟ್ರೀಯ ಮಾನ್ಯತೆಗಳು. ಇಂಡಿಯನ್ ಫೋಟೋಗ್ರಫಿ ಸೊಸೈಟಿಯ ಅಧ್ಯಕ್ಷರಾಗಿ ಕೆಲಕಾಲ. ಫೋಟೋಗ್ರಫಿಯ ಬಗ್ಗೆ ಬರೆದ ಪುಸ್ತಕ ‘ಭಾವಾಭಿವ್ಯಂಜಕ ಛಾಯಾಚಿತ್ರಕಲೆ’ ಛಾಯಾಚಿತ್ರ ಆಕರ ಗ್ರಂಥ. ಛಾಯಾಚಿತ್ರ, ಸಾಹಿತ್ಯಕ್ಕೆ ಸಂಬಂಸಿದಂತೆ ಅಂತಾರಾಷ್ಟ್ರೀಯ ಮಟ್ಟದ ಎಫ್.ಐ.ಎ.ಪಿ. ಪ್ರಶಸ್ತಿ, ಅಮೆರಿಕ ಫೋಟೋಗ್ರಫಿ ಸೊಸೈಟಿ ತ್ರಿ ಸ್ಟಾರ್ ಸರ್ಟಿಫಿಕೇಟ್, ಸಾಹಿತ್ಯ ಅಕಾಡಮಿ, ಲಲಿತಕಲಾ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಸಾಹಿತಿಗಳು : ರೊದ್ದ ಲಕ್ಷ್ಮೀನರಸಿಂಹಯ್ಯ – ೧೯೦೨ ಕೆ.ಎಸ್. ಉಮಾಪತಿ – ೧೯೨೮ ಎಚ್.ಎಲ್. ಕೇಶವಮೂರ್ತಿ – ೧೯೩೯ ಕಾಕೋಳು ಸರೋಜರಾವ್ – ೧೯೪೪ ಮಾತಂಗಿ – ೧೯೪೭

Details

Date:
December 28, 2023
Event Category: