
ನರಸಿಂಹಮೂರ್ತಿ
July 2, 2024
೦೨.೦೭.೧೯೭೧ ತಮ್ಮ ಅಭಿವ್ಯಕ್ತಿಗಾಗಿ ಚಿತ್ರಕಲೆಯನ್ನು ಸಮರ್ಥವಾಗಿ ದುಡಿಸಿಕೊಳ್ಳುತ್ತಿರುವ ನರಸಿಂಹಮೂರ್ತಿಯವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಕೆಂಪನದೊಡ್ಡಗ್ರಾಮ. ತಂದೆ ಆನಂದಮೂರ್ತಿ, ತಾಯಿ ಸರೋಜಮ್ಮ. ಚಿತ್ರಕಲೆಯಿಂದ ಆಸಕ್ತರಾಗಿ ರವೀಂದ್ರಕಲಾ ನಿಕೇತನದಿಂದ ಪಡೆದ ಡಿಪ್ಲೊಮ. ಪೂರ್ಣಪ್ರಮಾಣದ ಕಲಾವಿದರಾಗಿ ಉದ್ಯೋಗ. ರಾಜ್ಯಮಟ್ಟದ ಕಲಾವಿದರ ಶಿಬಿರ – ವಿಜಾಪುರ, ಜಗಳೂರು, ದಕ್ಷಿಣವಲಯದ ಸಾಂಸ್ಕೃತಿಕ ಕೇಂದ್ರದ ಕಲಾ ಶಿಬಿರ, ತಂಜಾವೂರು ಮತ್ತು ಲಲಿತ ಕಲಾ ಅಕಾಡೆಮಿ ಸಹಯೋಗದ ಕಲಾ ಶಿಬಿರಗಳಲ್ಲಿ ಭಾಗಿ. ರಾಷ್ಟ್ರೀಯ ಮಟ್ಟದ ಕಲಾ ಶಿಬಿರಗಳಾದ ಹತ್ತನೆಯ ರಾಷ್ಟ್ರೀಯ ಕಲಾಮೇಳ-ನವದೆಹಲಿ, ಏಳನೆಯ ಕರ್ನಾಟಕ ಕಲಾಮೇಳ-ಬೆಂಗಳೂರು ಮತ್ತು ನವದೆಹಲಿ, ಕಲ್ಪಕುಂಚ ಆರ್ಟ್‌ಗ್ಯಾಲರಿ – ತುಮಕೂರು, ವೆಂಕಟಪ್ಪ ಆರ್ಟ್ ಗ್ಯಾಲರಿ-ಬೆಂಗಳೂರು, ಟು ಡೇಸ್ ಆರ್ಟ್ ಎಕ್ಸಿಬಿಷನ್, ತುಮಕೂರು, ಶಾಂತಿನಿಕೇತನ ಚಿತ್ರಕಲಾಶಾಲೆ-ಚಿಕ್ಕಮಗಳೂರು, ದಕ್ಷಿಣ ವಲಯ ಸಾಂಸ್ಕೃತಿಕ ಕಲಾಪ್ರದರ್ಶನ-ನಾಗಪುರ, ಭರಣ ಆರ್ಟ್‌ಗ್ಯಾಲರಿ-ಮೈಸೂರು, ಮೈಸೂರು ದಸರಾ ಚಿತ್ರಕಲಾ ಪ್ರದರ್ಶನ, ಸುವರ್ಣ ಸ್ವಾತಂತ್ರೋತ್ಸವ ಕಲಾ ಪ್ರದರ್ಶನ ಮುಂತಾದವುಗಳಲ್ಲಿ ಪ್ರದರ್ಶನಗಳು. ದೆಹಲಿಯ ಆರ್ಟ್ ಟುಡೇ ಗ್ಯಾಲರಿ, ಮೈಸೂರಿನ ಭರಣ ಆರ್ಟ್ ಗ್ಯಾಲರಿ, ದಾವಣಗೆರೆಯ ಕುವೆಂಪು ವಿಶ್ವವಿದ್ಯಾಲಯ, ರವೀಂದ್ರಕಾಲೇಜ್ ಆಫ್‌ಫೈನ್‌ಆರ್ಟ್ಸ್- ತುಮಕೂರು, ವಿಜಾಪುರದ ಬಿ.ಎಲ್.ಡಿ.ಇ ಎಜುಕೇಷನ್ ಸೊಸೈಟಿ ಮುಂತಾದೆಡೆಯ ಸಂಗ್ರಹಗಳಲ್ಲಿ ಚಿತ್ರಕಲೆಗಳು ಸಂಗ್ರಹೀತ. ಸಂದ ಪ್ರಶಸ್ತಿ ಗೌರವಗಳು – ಬಿಜಾಪುರದಲ್ಲಿ ನಡೆದ ಕಲಾ ಮಹೋತ್ಸವದಲ್ಲಿ ರಾಜ್ಯಪ್ರಶಸ್ತಿ, ದಕ್ಷಿಣ ವಲಯ ಕ್ಯಾಮ್ಲಿನ್‌ಆರ್ಟ್ ಫೌಂಡೇಷನ್ನಿನಿಂದ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಪಡೆದ ಪ್ರಶಸ್ತಿ ಪ್ರಮುಖವಾದುವುಗಳು. ಇದೇ ದಿನ ಹುಟ್ಟಿದ ಕಲಾವಿದೆ: ಪ್ರಮೀಳ. ಎ.ಎಸ್- ೧೯೭೦
* * *