Loading Events

« All Events

  • This event has passed.

ನರ್ಮದ

September 22, 2023

೨೨.೦.೧೯೪೨ ೩೦.೦.೨೦೦೭ ಕರ್ನಾಟಕದ ಪ್ರತಿಭಾನ್ವಿತ ನೃತ್ಯ ಕಲಾವಿದೆ ನರ್ಮದರವರು ಹುಟ್ಟಿದ್ದು ಬೆಂಗಳೂರು. ತಂದೆ ಪ್ರಸಿದ್ಧ ವೈದ್ಯರಾಗಿದ್ದ ಡಾ. ಕೆ. ರಾಮರಾವ್‌, ತಾಯಿ ವೀಣಾ ವಿದುಷಿ ಶಕುಂತಲಾಬಾಯಿ. ಓದಿದ್ದು ಬಿ.ಎಸ್ಸಿ, ಬಾಲೆಯ ಲಯಬದ್ದ ನಡಿಗೆಯನ್ನು ನೋಡಿದ ತಾಯಿ ನೃತ್ಯ ಕಲಿಯಲು ಪ್ರೇರೇಪಿಸಿ ಸನಾತನ ಕಲಾಕ್ಷೇತ್ರದ ವಿ.ಎಸ್‌.ಕೌಶಿಕ್‌ರಿಂದ ಆರನೇ ವಯಸ್ಸಿನಿಂದಲೇ ನೃತ್ಯ ಶಿಕ್ಷಣ. ನಂತರ ಕಿಟ್ಟಪ್ಪ ಪಿಳ್ಳೆಯ ಬಳಿ ಪಂದನಲ್ಲೂರು ಮತ್ತು ತಂಜಾವೂರು ಶೈಲಿ ನೃತ್ಯಾಭ್ಯಾಸ. ಹನ್ನೊಂದನೆ ವಯಸ್ಸಿಗೆ ರಂಗಪ್ರವೇಶ. ವಿಶೇಷವೆಂದರೆ ಸಂಬಂಧಿಗಳಿಗೆ ಒಂದುದಿನ, ವೈದ್ಯಮಿತ್ರರಿಗೆ ಒಂದು ದಿನ ಎರಡು ದಿವಸ ನೃತ್ಯರಂಗ ಪ್ರವೇಶ. ವೈದ್ಯಕೀಯ ಸಮ್ಮೇಳನಗಳಲ್ಲಿ ಹಲವಾರು ಬಾರಿ ನೃತ್ಯ ಪ್ರದರ್ಶನ. ಜಯಚಾಮರಾಜ ಒಡೆಯರ್‌ ಮುಂದೆ ನೃತ್ಯ ಪ್ರದರ್ಶಿಸಿ ಪಡೆದ ಬಂಗಾರದ ಪದಕ. ದೇವಾಲಯ ನೃತ್ಯ  ಪದ್ಧತಿಯ ನವ ಸಂಧಿ ನೃತ್ಯದಲ್ಲಿ ಪಡೆದ ಪ್ರಾವೀಣ್ಯತೆ. ಮದರಾಸಿನ ಇಸೈ ಸಂಘದಲ್ಲಿ ಪ್ರದರ್ಶಿಸಿ ಪಡೆದ ಜನ ಮೆಚ್ಚುಗೆ. ಸಾಂಸಾರಿಕ ಕಷ್ಟಗಳಿಂದ ಜರ್ಝರಿತರಾದರೂ ತಾಯಿಯ ಹೆಸರಿನಲ್ಲಿ ‘ಶಕುಂತಲಾ ನೃತ್ಯಾಲಯ’ ಪ್ರಾರಂಭ. ಮಂಜುಭಾರ್ಗವಿ, ಲಲಿತಾ ಶ್ರೀನಿವಾಸನ್‌, ಲಕ್ಷ್ಮೀ ಗೋಪಾಲಸ್ವಾಮಿ ಮುಂತಾದ ದೊಡ್ಡ ಶಿಷ್ಯೆಯರ ವರ್ಗ. ನೃತ್ಯ ಶಿಕ್ಷಕಿಯಾಗಿ ಅಮೆರಿಕಾ ಯಾತ್ರೆ. ಮಗಳಿಗೆ ನೃತ್ಯಕಲಿಸಲು ಹೋಗಿ ತಾಯಿ ಮಾಲತಿ ಅಯ್ಯಂಗಾರ್ಯರಿಗೂ ಕಲಿಸಿದ ನೃತ್ಯ. ಹಲವಾರುಬಾರಿ ವಿದೇಶ ಪ್ರವಾಸ. ನೃತ್ಯ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ. ಕರ್ನಾಟಕ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರಕಾರದ ಪ್ರತಿಷ್ಠಿತ ಶಾಂತಲಾ ಪ್ರಶಸ್ತಿ, ಮದರಾಸಿನ ಮ್ಯೂಸಿಕ್‌ಅಕಾಡಮಿಯ ವರ್ಷದ ಅತ್ಯುತ್ತಮ ನೃತ್ಯಗುರು ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಮುಂತಾದ ಹಲವಾರು  ಪ್ರಶಸ್ತಿಗೌರವಗಳು   ಇದೇ ದಿನ ಹುಟ್ಟಿದ ಕಲಾವಿದರು ಬಸವರಾಜ ಭೆಂಡಿಗೇರಿ – ೧೯೨೮ ಶಾಂತಾ ನರಸಿಂಹನ್‌ – ೧೯೩೮ ಉದಯಶಂಕರ್‌. ಎನ್‌.ಎ. – ೧೯೪೭ ನಾಗೇಶ್‌. ವಿ.ಎಂ. – ೧೯೫೦ ಶ್ರೀಧರ್‌. ಎಸ್‌.. – ೧೯೬೦

* * *

Details

Date:
September 22, 2023
Event Category: