ನವರತ್ನರಾಂ

Home/Birthday/ನವರತ್ನರಾಂ
Loading Events

೩-೧೨-೧೯೩೨ ೧೭-೧೦-೧೯೯೧ ನಟ, ನಾಟಕಕಾರ, ಕಾದಂಬರಿಕಾರರಾದ ನವರತ್ನರಾಂ ಹುಟ್ಟಿದ್ದು ಬೆಂಗಳೂರು. ತಂದೆ ನವರತ್ನರಾಮರಾವ್, ತಾಯಿ ಪುಟ್ಟಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರಿನ ಆಚಾರ‍್ಯ ಪಾಠಶಾಲೆಯಲ್ಲಿ. ಬಾಲ್ಯದಿಂದಲೇ ಓದಿನ ಜೊತೆಗೆ ಅಂಟಿ ಬಂದ ಸಂಗೀತ, ನಾಟಕ, ಸಾಹಿತ್ಯ, ಚಿತ್ರಕಲೆಗಳ ಹುಚ್ಚು. ಕಲಾಮಂದಿರದ ಅ.ನ.ಸುಬ್ಬರಾಯರು ಇವೆಲ್ಲಕ್ಕೂ ಪ್ರೇರಕರು. ಸರಕಾರಿ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಮುಗಿಸಿದ ನಂತರ ಸೇರಿದ್ದು ಕೃಷಿ ಕಾಲೇಜು. ಕಾಲೇಜಿನಲ್ಲಿದ್ದಾಗಲೇ ರಚಿಸಿದ ಆರ್ಕೆಸ್ಟ್ರಾ ತಂಡ. ಕಲಾ ಮಂದಿರದ ಮಿತ್ರರೊಡನೆ ಕಟ್ಟಿದ್ದು ‘ಚಿತ್ರ ಕಲಾವಿದರು.’ ನಟನೆ ಜೊತೆಗೆ ನಾಟಕಗಳ ರಚನೆ. ಅಕ್ಕಪಕ್ಕ, ಕೆಂಬೂತ, ಕನಸು-ನನಸು ಮೊದಲ್ಗೊಂಡು ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳ ರಚನೆ. ಬಿಎಸ್ಸಿ ಪದವಿ ಗಳಿಸಿದ ನಂತರ ಸೇರಿದ್ದು ವ್ಯವಸಾಯ ಇಲಾಖೆ. ಉನ್ನತ ವ್ಯಾಸಂಗಕ್ಕೆ ಫ್ರಾನ್ಸ್‌ಗೆ ಹೊರಡಬೇಕೆಂದಾಗ ಫ್ರೆಂಚ್ ಕಲಿತದ್ದು ಉಷಾರವರಿಂದ. ಮುಂದೆ ಗುರುವೇ ಬಾಳಸಂಗಾತಿ. ಪ್ಯಾರಿಸ್ಸಿನಲ್ಲಿ ಸ್ನಾತಕೋತ್ತರ ಅಧ್ಯಯನದಲ್ಲಿದ್ದಾಗಲೇ ಬಾಳಸಂಗಾತಿ ಉಷಾರವರಿಗೆ ಬರೆದ ಪತ್ರಗಳ ಕೃತಿಯೇ ‘ಪ್ಯಾರಿಸ್ಸಿನಿಂದ ಪ್ರೇಯಸಿಗೆ’ ಪ್ರವಾಸದ ವಿಶಿಷ್ಟ ಕೃತಿ. ವಿದೇಶದಿಂದ ಮರಳಿದ ಮೇಲೆ ವಹಿಸಿಕೊಂಡ ಹುದ್ದೆಗಳು ವಿವಿಧೆಡೆ. ಕೆಲಕಾಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಹೊಣೆಗಾರಿಕೆ. ಹಲವಾರು ಕೃತಿಗಳ ರಚನೆ. ನವರತ್ನ ರಾಮಾಯಣ, ಹೂವೊಂದು ದುಂಬಿ ನೂರೊಂದು, ೬೭ ಹ್ಯಾರಿಸ್ ರಸ್ತೆ, ಜಗವೆಲ್ಲ ಒಂದೇ ಸಿವ, ನೆರೆಹೊರೆಯವರ ಹೊರೆ, ಹಾಲು-ಹಾಲಾಹಲ, ಕಲ್ಲರಳಿ ಹೂವಾಯಿತು ಮುಂತಾದ ಕೃತಿಗಳ ಜೊತೆಗೆ ಎರಡು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ನಾಟಕ ‘ಜೀವ ಯಾವ ಕುಲ ಆತ್ಮ ಯಾವ ಕುಲ.’ ಸಾಹಿತ್ಯ ನಾಟಕರಂಗದ ಜೊತೆಗೆ ಸಿನಿಮಾ ರಂಗದ ನಂಟು. ಪುಟ್ಟಣ್ಣ ಕಣಗಾಲರ ನಿರ್ದೇಶನದ ಗೆಜ್ಜೆಪೂಜೆ, ಉಪಾಸನೆ ಚಿತ್ರಗಳಿಗೆ ಬರೆದ ಚಿತ್ರಕಥೆ ಸಂಭಾಷಣೆ, ರಾಜ್ಯಪ್ರಶಸ್ತಿ ಪಡೆದ ಚಲನಚಿತ್ರಗಳು. ವಾರಪತ್ರಿಕೆಯ ನೀವು ಕೇಳಿದಿರಿ. ವಿಭಾಗಕ್ಕೆ ‘ಚಿತ್ರ’ ಕಾವ್ಯನಾಮದಿಂದ ವಿಡಂಬನಾತ್ಮಕವಾಗಿ ಉತ್ತರಿಸುತ್ತಿದ್ದು ಇವರು ಹೆಣ್ಣೋ ಗಂಡೋ ಅರಿಯಲು “ನೀವು ಯಾವಾಗ ನಿಧನರಾಗುವಿರಿ, ಆಗಲಾದರೂ ನಿಜನಾಮಧೇಯ ಪ್ರಕಟವಾಗುವುದು, ಏನಂತೀರಿ ?” ಎಂದದ್ದೆ ‘ಕಾಲ’ ಇದರಿಂದ ಉತ್ತೇಜಿತವಾಗಿಬಿಡಬೇಕೇ ?   ಇದೇ ದಿನ ಹುಟ್ಟಿದ ಸಾಹಿತಿಗಳು : ವಿ.ಜಿ. ಭಟ್ಟ – ೧೯೨೩ ಲೀಲಾವತಿ ತೋರಣಗಟ್ಟಿ – ೧೯೩೬ ಸೋಮಶೇಖರರಾವ್. ಎಚ್.ಜಿ. – ೧೯೩೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top