ನವರತ್ನರಾಮರಾವ್

Home/Birthday/ನವರತ್ನರಾಮರಾವ್
Loading Events
This event has passed.

೨೯-೫-೧೮೭೭ ೨೭-೧೧-೧೯೬೦ ಉತ್ತರ ಕರ್ನಾಟಕದ ದೇಶಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ರಾಮರಾಯರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಜನನ. ತಂದೆ ನವರತ್ನ ಬಾಲಕೃಷ್ಣರಾಯರು, ಅಭಿಯಂತರ ಇಲಾಖೆಯಲ್ಲಿ ದೀರ್ಘಸೇವೆ. ರಾಮರಾಯರು ಬಾಲ್ಯದಲ್ಲಿಯೇ ತಾಯಿಯ ಪ್ರೀತಿಯಿಂದ ವಂಚಿತರು. ಇವರ ವಂಶಸ್ಥರು ಉತ್ತರಾಮಠದ ಪೀಠದ ಗುರುಪೀಠವನ್ನಲಂಕರಿಸಿದವರು. ಒಂದು ತಲೆಮಾರಿನಲ್ಲಿ ಒಂಬತ್ತು ಜನ ವಿದ್ವಾಂಸರಿದ್ದುದರಿಂದ ‘ನವರತ್ನ’ ಇವರ ವಂಶಕ್ಕೆ ಸೇರಿ ಬಂದ ಹೆಸರು. ಓದಿದ್ದು ಬೆಂಗಳೂರಿನಲ್ಲಿ. ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಅಧ್ಯಾಪಕರಾಗಿದ್ದ ಟೇಟ್ ಸಾಹೇಬರ ಮತ್ತು ಸಹಪಾಠಿಯಾಗಿದ್ದ ರಾಜಾಜಿಯವರ ಸ್ನೇಹ. ಇಂಗ್ಲಿಷ್‌ನಲ್ಲಿ ಅಸಾಧಾರಣ ಪಾಂಡಿತ್ಯ. ಈಜು, ಕ್ರಿಕೆಟ್, ಗರಡಿ ಸಾಧನೆ ಇವರ ಹವ್ಯಾಸ, ಅಭ್ಯಾಸ ಮಾಡಿದ್ದು ಸಂಸ್ಕೃತ ಹಾಗೂ ಫ್ರೆಂಚ ಭಾಷೆ. ಕಾನೂನು ವ್ಯಾಸಂಗಕ್ಕಾಗಿ ಮದರಾಸಿಗೆ ಹೊರಟಾಗ ಮೈಸೂರು ಸರಕಾರ ಪ್ರೊಬೆಷನರಿ ಅಕಾರಿಯಾಗಿ ಆಯ್ಕೆ ಮಾಡಿ ಅಮಲ್ದಾರರಾಗಿ ನೇಮಕ. ಉದ್ಯಮ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ ಪಡೆದರು. ಮಾತಿನಲ್ಲಿ ಚತುರರು. ಪ್ರಜಾಪ್ರತಿನಿ ಸಭೆಯಲ್ಲಿ, ಲೆಜೆಸ್ಲೆಟಿವ್ ಕೌನ್ಸಿಲ್‌ನಲ್ಲಿ ಸ್ವಾರಸ್ಯವಾಗಿ ಭಾಷಣ ಮಾಡಿ ಹೆಸರು ಗಳಿಸಿದರು. ೧೯೩೨ರಲ್ಲಿ ಲಂಡನ್ನಿನಲ್ಲಿ ನಡೆದ ರೌಂಡ್‌ಟೇಬಲ್ ಕಾನ್‌ರೆನ್ಸ್‌ನಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್‌ರ ತಜ್ಞ ಸಲಹೆಗಾರರಾಗಿ ಪಾಲ್ಗೊಂಡಿದ್ದರು. ಅಮಲ್ದಾರರ ವೃತ್ತಿ ಜೀವನದ ನೆನಪುಗಳನ್ನು ಮಾಸ್ತಿಯವರ ಅಪೇಕ್ಷೆ ಮೇರೆಗೆ ‘ಜೀವನ’ ಪತ್ರಿಕೆಯಲ್ಲಿ ಬರೆದರು. ‘ಕೆಲವು ನೆನಪುಗಳು’ ಎಂಬ ಹೆಸರಿನಿಂದ ಮನೋಹರ ಗ್ರಂಥಮಾಲೆಯಿಂದ ಪುಸ್ತಕರೂಪದಲ್ಲಿ ಪ್ರಕಟ. ನಂತರ ೧೯೮೫ರಲ್ಲಿ ಕನ್ನಡ ವಿಶ್ವ ಸಮ್ಮೇಳನದ ಸಂದರ್ಭದಲ್ಲೂ ಆಯ್ಕೆಗೊಂಡು ಪ್ರಕಟಗೊಂಡ ಕೃತಿ. ಮಾಸ್ತಿಯವರ ಚೆನ್ನಬಸವನಾಯಕ ಕಾದಂಬರಿಯನ್ನು ಇಂಗ್ಲಿಷ್‌ಗೆ ಅನುವಾದ. ರಾಜಾಜಿಯವರು ರಾಮಾಯಣ, ಮಹಾಭಾರತಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಿದ ಸಂದರ್ಭದಲ್ಲೂ ಇವರದು ಮಹತ್ವದ ಪಾತ್ರ. ಇವರ ದಕ್ಷ ಸೇವೆ, ಕನ್ನಡಕ್ಕಾಗಿ ನೀಡಿದ ಕೊಡುಗೆಯನ್ನು ಗುರುತಿಸಿ ಮಹಾರಾಜರು ನೀಡಿದ್ದು  ‘ರಾಜಸೇವಾಸಕ್ತ’ ಬಿರುದು. ನವರತ್ನ ರಾಮರಾಯರು ನಿಧನರಾದದ್ದು ೨೭.೧೧.೧೯೬೦ರಲ್ಲಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಟಿ.ಎನ್. ನಾಗರತ್ನ – ೧೯೪೫ ಕೃಷ್ಣ ಚೆನ್ನಂಗೋಡು – ೧೯೪೫ ಮುರಳೀಧರ ಉಪಾಧ್ಯ ಹಿರಿಯಡ್ಕ – ೧೯೫೦

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top