ನಾಗೇಂದ್ರ ಸ್ಥಪತಿ

Home/Birthday/ನಾಗೇಂದ್ರ ಸ್ಥಪತಿ
Loading Events
This event has passed.

೨೮-೦೨-೧೯೧೩ ೦೪-೦೭-೧೯೭೨ ಲೋಹ, ಶಿಲಾಕೆತ್ತನೆ, ಜ್ಯೋತಿಷ್ಯ, ಸಂಗೀತ, ಸಂಸ್ಕೃತ ಪಾಂಡಿತ್ಯ ಇವೆಲ್ಲದರ ಸಂಗಮವಾಗಿದ್ದ ನಾಗೇಂದ್ರ ಸ್ಥಪತಿಯವರು ಹುಟ್ಟಿದ್ದು ಮೈಸೂರು. ತಂದೆ ಪ್ರಸಿದ್ಧ ಶಿಲ್ಪ ಸಿದ್ಧಾಂತಿ ಶ್ರೀ ಸಿದ್ಧಲಿಂಗ ಸ್ವಾಮಿಗಳು. ಬಾಲ್ಯದಿಂದಲೂ ಶಿಲ್ಪಕಲೆಯಲ್ಲಿ ಬೆಳೆದ ಆಸಕ್ತಿ. ತಂದೆಯವರು ಕಡೆಯುತ್ತಿದ್ದ ವಿಗ್ರಹಗಳನ್ನು ನೋಡುತ್ತಲೇ ಕಲಿತ ಕೆತ್ತನೆ ಪಾಠ. ಶ್ರೀ ಜಯಚಾಮರಾಜೇಂದ್ರ ಕಲಾಶಾಲೆಯ ವಿದ್ಯಾರ್ಥಿಯಾಗಿ, ಕೇಶವಯ್ಯನವರ ಶಿಷ್ಯವೃತ್ತಿಯಲ್ಲಿ ಐದು ವರ್ಷಗಳ ಸತತ ಅಭ್ಯಾಸ. ಜ್ಯೋತಿಷ ಶಾಸ್ತ್ರದ ಜೊತೆಗೆ ಕಲಿತದ್ದು ಆಂಗ್ಲಭಾಷೆ, ಸಂಸ್ಕೃತ, ಹಿಂದಿ, ತಮಿಳು. ಸಂಗೀತದಲ್ಲಿ ಮೂಡಿದ ಆಸಕ್ತಿಯಿಂದ ಕಲಿತದ್ದು ಮೃದಂಗ, ನುಡಿಸುವುದರಲ್ಲಿ ಪಡೆದ ನೈಪುಣ್ಯತೆ. ಆಸ್ಥಾನ್ ವಿದ್ವಾನ್ ವಾಸುದೇವಾಚಾರ್ಯರ ಸಂಗೀತ ಕಚೇರಿಗಳಲ್ಲಿ ಮೃದಂಗ ವಾದನದ ಸಾಥಿ. ತಂದೆಯವರೊಡನೆ ಅರಮನೆಗೆ ಹೋಗಿ ಬರುತ್ತಿದ್ದು ರಚಿಸಿದ ಹಲವಾರು ಭಿತ್ತಿ ಚಿತ್ರಗಳು. ಜಯಚಾಮರಾಜೇಂದ್ರ ಒಡೆಯರ ಕಾಲದಲ್ಲಿ ರಚಿಸಿಕೊಟ್ಟ ಅನೇಕ ಕಲಾಕೃತಿಗಳು. ಇವರು ರಚಿಸಿದವುಗಳಲ್ಲಿ ಪ್ರಮುಖವಾದುವುಗಳೆಂದರೆ ಬಸವ ಕಲ್ಯಾಣದ ಅಕ್ಕಮಹಾದೇವಿ, ಅರಮನೆಯ ದೇಗುಲಕ್ಕಾಗಿ ಭುವನೇಶ್ವರಿ, ಕಾಮಕಾಮೇಶ್ವರಿ ದೇವಾಲಯದ ಭಿತ್ತಿಗಳಿಗೆ ವಿವಿಧ ಮೂರ್ತಿಗಳು. ಇದೇ ದೇವಸ್ಥಾನಕ್ಕಾಗಿ ಬಹುದೊಡ್ಡ ನಂದಿ ವಿಗ್ರಹ. ಬೆಂಗಳೂರಿನ ಸುಬ್ರಹ್ಮಣ್ಯಪುರ ದೇವಸ್ಥಾನದ ಸುಬ್ರಹ್ಮಣ್ಯ, ಗುಲಬರ್ಗಕ್ಕೆ ಮಹಾಕಾಳಿ ವಿಗ್ರಹ, ದಾವಣಗೆರೆಯ ಪಾರ್ಶ್ವನಾಥ, ಭವಾನಿ ಪ್ರಾಜೆಕ್ಟಿಗಾಗಿ ಭವಾನಿ ವಿಗ್ರಹ, ಮುಂಬಯಿಯ ರುಮಿಯಾ ಕಂಪನಿಗಾಗಿ ರಾಮದೇವ, ಗಣಪತಿ, ಬುದ್ಧ, ಆಂಧ್ರಕ್ಕೆ ಪಾಮಡಿ ಸತ್ಯನಾರಾಯಣಸ್ವಾಮಿ, ಅಜ್ಮೀರದ ಪುಷ್ಕರದಲ್ಲಿ ಸ್ಥಾಪಿಸಿರುವ ಮಹಾ ಸುದರ್ಶನ ಚಕ್ರ ಮುಂತಾದುವುಗಳು. ಅರಮನೆಯ ಅಂತಸ್ತು, ಮಹಾರಾಜರ ಸಾನಿಧ್ಯ, ಮುಖ್ಯ ಮಂತ್ರಿಗಳ ಸ್ನೇಹ, ಮಹಾಜನತೆಯಿಂದ ಸಲ್ಲುತ್ತಿದ್ದ ಗೌರವಗಳಿಗಿಂತ ಬೇರೆ ಪ್ರಶಸ್ತಿ ಏಕೆನ್ನುತ್ತಿದ್ದರೂ ಮೈಸೂರು ಲಲಿತಕಲಾ ಅಕಾಡಮಿ ೧೯೬೫-೬೬ರ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿತು.   ಇದೇ ದಿನ ಹುಟ್ಟಿದ ಕಲಾವಿದರು : ಯು.ಎಸ್. ವೆಂಕಟರಾವ್ – ೧೯೩೧ ಅಚ್ಯುತ – ೧೯೫೪ ಅನಸೂಯಾ ಪಾಟೀಲ್ – ೧೯೬೧ ಕು. ಶಿವರತ್ನ – ೧೯೬೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top