Loading Events

« All Events

  • This event has passed.

ನಾ. ಕಸ್ತೂರಿ

December 25, 2023

೨೫-೧೨-೧೮೯೭ ೧೪-೮-೧೯೮೭ ಹಾಸ್ಯವನ್ನೇ ಮುಖ್ಯವಾಗಿಟ್ಟುಕೊಂಡು, ಆಧುನಿಕ ಸಾಹಿತ್ಯದಲ್ಲಿ ಹಾಸ್ಯಕ್ಕೊಂದು ವಿಶೇಷ ಸ್ಥಾನವನ್ನು ನಿರ್ಮಿಸಿದ, ಕನ್ನಡಿಗರಿಗೆ ನಗುವುದನ್ನು ಕಲಿಸಿದ ನಾ. ಕಸ್ತೂರಿಯವರು ಹುಟ್ಟಿದ್ದು ಕೇರಳದ ‘ತಿರುಪುಣಿತ್ತುರ’ ಎಂಬ ಹಳ್ಳಿಯಲ್ಲಿ. ತಂದೆ ನಾರಾಯಣ. ಪ್ರಾರಂಭಿಕ ಶಿಕ್ಷಣ ಕೊಚ್ಚಿನ್ ಅರಸರು ನಡೆಸುತ್ತಿದ್ದ ಅನ್ನಸತ್ರದಲ್ಲಿ ಊಟ-ಪಾಠ. ಕಾಲೇಜು ವಿದ್ಯಾಭ್ಯಾಸ ತಿರುವನಂತಪುರ. ಶಾಲೆಯೊಂದರಲ್ಲಿ ಶಿಕ್ಷಕ ವೃತ್ತಿ ಮಾಡುತ್ತ ಪಡೆದ ಬಿ.ಎಲ್. ಪದವಿ. ಕೆಲಕಾಲ ವಕೀಲಿ ವೃತ್ತಿ. ಅದು ಹಿಡಿಸದೆ ಮತ್ತೆ ಮರಳಿದ್ದು ಮಾಸ್ತರಿಕೆಗೆ. ಉದ್ಯೋಗವನ್ನು ಹುಡುಕಿಕೊಂಡು ಕೇರಳದಿಂದ ಬಂದುದು ಮೈಸೂರಿಗೆ. ಬನುಮಯ್ಯ ಪ್ರೌಢಶಾಲೆಯಲ್ಲಿ ದೊರೆತ ಅಧ್ಯಾಪಕರ ಹುದ್ದೆ. ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಮೂರು ದಶಕಕ್ಕೂ ಹಚ್ಚು ಕಾಲ ರಾಜ್ಯದ ವಿವಿಧೆಡೆ ಸಲ್ಲಿಸಿದ ಸೇವೆ. ಕನ್ನಡ ಕಲಿತು ಕನ್ನಡದಲ್ಲೇ ಬರೆದ ಮೊದಲ ಮಕ್ಕಳ ಪುಸ್ತಕ ‘ಪಾತಾಳದಲ್ಲಿ ಪಾಪಚ್ಚಿ’ ೧೯೪೩ರಲ್ಲಿ ಪ್ರಕಟಿತ. ಇದಕ್ಕಿಂತ ಮೊದಲೇ ಮಲೆಯಾಳಂನಲ್ಲಿ ಬರೆದ ನಾಟಕ ಷಹಜಹಾನ್. ಉತ್ತಮ ನಾಟಕಕಾರರು, ನಟರು. ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಅಭಿನಯಿಸಲು ನಾಟಕಗಳ ರಚನೆ. ಹಾಸ್ಯನಾಟಕಕ್ಕೆ ಕೊಟ್ಟ ಹೆಚ್ಚಿನ ಪ್ರಾಶಸ್ತ್ಯ. ರಚಿಸಿದ ನಾಟಕಗಳು-ಗಗ್ಗಯ್ಯನ ಗಡಿಬಿಡಿ, ಕಾಡಾನೆ, ವರಪರೀಕ್ಷೆ, ರಾಮಕೃಷ್ಣಯ್ಯನ ದರ್ಬಾರು, ಹೋಳು-ಬಾಳು, ಬ್ಯಾಂಕಿನ ದಿವಾಳಿ ಮುಂತಾದುವು. ಹಾಸ್ಯ ಸಂಕಲನಗಳು-ಗಾಳಿಗೋಪುರ, ಶಂಖವಾದ್ಯ, ರಂಗನಾಯಕಿ, ಅಲ್ಲೋಲ, ಕಲ್ಲೋಲ, ಉಪಾಯ ವೇದಾಂತ. ಹಾಸ್ಯ ಕಾದಂಬರಿಗಳು-ಚೆಂಗೂಲಿ ಚೆಲುವ, ಡೊಂಕುಬಾಲ, ಚಕ್ರದೃಷ್ಟಿ. ಅನುವಾದಿತ-ನೊಂದಜೀವಿ. ಇಂಗ್ಲಿಷ್‌ನಲ್ಲಿ ಪ್ರಕಟವಾಗಿದ್ದ ಅಂಬ್ರೂಸಿ ಬಿಯರ್ಸ್ನ ಡೆವಿಲ್ಸ್ ಡಿಕ್ಷ್‌ನರಿಯಂತೆ ಕಾಮಿಕ್ ಡಿಕ್ಷ್‌ನರಿ-ಅನರ್ಥಕೋಶ. ದಿಲ್ಲೀಶ್ವರನ ದಿನಚರಿ, ಮಲ್ಲಿ ಮದುವೆ, ಗೃಹದಾರಣ್ಯಕ ಇತರ ಕೃತಿಗಳು. ಮೈಸೂರು ರೇಡಿಯೋ ಕೇಂದ್ರಕ್ಕೆ ‘ಆಕಾಶವಾಣಿ’ ಹೆಸರು ಸೂಚಿಸಿದವರು. ರಾಶಿಯವರ ಸಂಪಾದಕತ್ವದ ಕೊರವಂಜಿ, ಶಂಕರ್ಸ್‌ ವೀಕ್ಲಿಗಾಗಿ ಬರೆದ ಹಾಸ್ಯ ಲೇಖನಗಳು. ಹೊಸಗಾದೆಗಳ ರಚನೆ. ವಕ್ರಾರ್ಥ, ವ್ಯಂಗ್ಯಾರ್ಥ ಸೃಷ್ಟಿಸಿ ಹುಟ್ಟಾ ಕನ್ನಡಿಗರನ್ನು ಮೀರಿಸಿದವರು ನಾ. ಕಸ್ತೂರಿ.   ಇದೇ ದಿನ ಹುಟ್ಟಿದ ಸಾಹಿತಿಗಳು : ಅನಸೂಯಾ ರಾಮರೆಡ್ಡಿ – ೧೯೨೯ ಸದಾನಂದ ಸುವರ್ಣ – ೧೯೩೧ ನೀ. ಗಿರಿಗೌಡ – ೧೯೪೪ ಪ್ರತಿಭಾ ನಂದಕುಮಾರ್ – ೧೯೫೫

Details

Date:
December 25, 2023
Event Category: