Loading Events

« All Events

  • This event has passed.

ನಿಟ್ಟೂರು ಶ್ರೀನಿವಾಸರಾವ್

August 24

೨೪-೮-೧೯೦೩ ೧೨-೮-೨೦೦೪ ಕಾನೂನು ಕ್ಷೇತ್ರದಲ್ಲಿ ಅಗ್ರಗಣ್ಯರಾಗಿದ್ದ ನಿಟ್ಟೂರು ಶ್ರೀನಿವಾಸರಾಯರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ನಿಟ್ಟೂರು ಶಾಮಣ್ಣ, ತಾಯಿ ಸೀತಮ್ಮ. ತಂದೆಯವರು ಮುಖ್ಯೋಪಾಧ್ಯಾಯರಾಗಿ ಸರ್ಕಾರಿ ಸೇವೆಯಲ್ಲಿದ್ದುದರಿಂದ ಪ್ರಾರಂಭಿಕ ಶಿಕ್ಷಣ ಚಳ್ಳೇಕೆರೆ, ಹೊಸದುರ್ಗ, ಚಿತ್ರದುರ್ಗ. ಪ್ರೌಢಶಾಲೆಗೆ ಸೇರಿದ್ದು ಶಿವಮೊಗ್ಗದ ಕೊಲಿಜಿಯೇಟ್ ಹೈಸ್ಕೂಲು. ಹೈಸ್ಕೂಲಿನಲ್ಲಿ ಪ್ರಭಾವ ಬೀರಿದ ಉಪಾಧ್ಯಾಯರುಗಳು ಎಂ.ಆರ್. ಶ್ರೀ ಮತ್ತು ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು. ಬಾಲಕರನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ, ಕನ್ನಡ ಭಾಷೆಯ ಬಗ್ಗೆ ಅಭಿಮಾನ ಹುಟ್ಟಿಸುವ ಕೆಲಸ ಮಾಡಿದವರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ. ಪದವಿ. ಸೆಂಟ್ರಲ್ ಕಾಲೇಜು ಕನ್ನಡ ಸಂಘದ ಕಾರ‍್ಯದರ್ಶಿ. ವಿಜ್ಞಾನದಲ್ಲಿ ಆಸಕ್ತಿ ಇದ್ದರೂ ಸೇರಿದ್ದು ಮದರಾಸಿನ ಕಾನೂನು ಕಾಲೇಜು. ಕಾನೂನು ಪದವಿ ಗಳಿಸಿದ ನಂತರ ಬೆಂಗಳೂರಿನಲ್ಲಿ ವಕೀಲಿ ವೃತ್ತಿ ಪ್ರಾರಂಭ. ನಂತರ ಬಾರ್ ಅಸೋಸಿಯೇಷನ್ ಮುಖ್ಯಸ್ಥರಾಗಿ, ಉಚ್ಚ ನ್ಯಾಯಾಲಯದ ನ್ಯಾಯಾಶರಾಗಿ, ಮುಖ್ಯನ್ಯಾಯಾಶರಾಗಿ ೧೯೬೩ರಲ್ಲಿ ನಿವೃತ್ತಿ. ನಿವೃತ್ತಿಯನಂತರ ೧೯೬೩ರಲ್ಲಿ ಹಂಗಾಮಿ ರಾಜ್ಯಪಾಲರಾಗಿ, ಭಾರತ ಸರಕಾರದ ಪ್ರಥಮ ವಿಜಿಲೆನ್ಸ್ ಕಮೀಷನರಾಗಿ, ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂತಾನಂ ಸಮಿತಿ ರಚಿಸಲು ಕಾರಣರಾಗಿ, ಕೇಂದ್ರ ವಿಜಿಲೆನ್ಸ್ ಕಮೀಷನರಾಗಿ ೧೯೬೮ರಲ್ಲಿ ನಿವೃತ್ತಿ. ಹಲವಾರು ವಕೀಲರ ಸಂಘ ಸಂಸ್ಥೆಗಳಲ್ಲಿ ಸೇವೆ. ಅಖಿಲ ಕರ್ನಾಟಕ ವಕೀಲರ ಸಂಘದ ಅಧ್ಯಕ್ಷರಾಗಿ, ಕಾನೂನು ಸಲಹೆಗಾರರಾಗಿ, ಮೈಸೂರು ವಕೀಲರ ಸಮ್ಮೇಳನದಲ್ಲಿ ಪ್ರಥಮ ಅಧ್ಯಕ್ಷರಾಗಿ, ಮದರಾಸು ರಾಜ್ಯ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ, ಭಾರತೀಯ ಕಾನೂನು ಸಂಸ್ಥೆ, ಕೇಂದ್ರ ಸಂವಿಧಾನ ಮತ್ತು ಶಾಸಕಾಂಗ ವ್ಯವಹಾರ ಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು ಸಂಸ್ಥೆ ಸದಸ್ಯರಾಗಿ ಸೇವೆ. ಕನ್ನಡ ಸಾಹಿತ್ಯಾರಾಧಕರಾಗಿ, ಕರ್ನಾಟಕ ಏಕೀಕರಣದ ಬಗ್ಗೆ ದುಡಿದವರಲ್ಲಿ ಪ್ರಮುಖರು. ಕನ್ನಡ ಭಾಷೆಯ ಪುನರುಜ್ಜೀವನಕ್ಕೆ ಚೇತನ ನೀಡಿದರು. ಸತ್ಯಶೋಧನ ಪ್ರಕಟಣಾ ಮಂದಿರ ಸ್ಥಾಪಿಸಿ ಹಲವಾರು ಗ್ರಂಥ ಪ್ರಕಟಣೆ. ಗಾಂಜಿಯವರ ‘ಸತ್ಯಶೋಧನೆ’ ಗ್ರಂಥವನ್ನು ಪತ್ನಿ ಪದ್ಮರೊಡನೆ ‘ಇಬ್ಬರು ಕನ್ನಡಿಗರು’ ಎಂಬ ಹೆಸರಿಂದ ಅನುವಾದ. ಸಿ.ಕೆ. ವೆಂಕಟರಾಮಯ್ಯ, ಶಿವರಾಮಕಾರಂತ, ರಾಜರತ್ನಂ, ಎಂ.ಆರ್.ಶ್ರೀ. ಕೃತಿಗಳು, ಗೊರೂರರ ಹಳ್ಳಿ ಚಿತ್ರಗಳು ಪ್ರಕಟಣೆ. ಕಾರಂತರ ಬಾಲಪ್ರಪಂಚಕ್ಕೆ (ವಿಶ್ವಕೋಶ) ಪಡಿಯಚ್ಚನ್ನು ಜರ್ಮನಿಯಿಂದ ತರಿಸಿ ಅಂದಿನ ದಿನದಲ್ಲಿ ಮುದ್ರಣಕ್ಕೆ ಒಂದು ಲಕ್ಷ ರೂ. ಖರ್ಚು ಮಾಡಿದ್ದರು. ಬಿ.ಎಂ.ಶ್ರೀ ಪ್ರತಿಷ್ಠಾನ, ಡಿ.ವಿ.ಜಿ. ಗೋಖಲೆ ವಿಚಾರ ಸಂಸ್ಥೆ, ಅರಬಿಂದೋ ಸೊಸೈಟಿ, ಕರ್ನಾಟಕ ಪ್ರಕೃತಿ ಚಿಕಿತ್ಸಾ ಪರಿಷತ್ ಮುಂತಾದುವುಗಳ ಅಧ್ಯಕ್ಷರ ಜವಾಬ್ದಾರಿ. ದಕ್ಷಿಣ ಭಾರತ ಹಿಂದಿ ಪ್ರಚಾರ ಪರಿಷತ್, ಮಹಿಳಾ ಹಿಂದಿ ಪರಿಷತ್‌ನಿಂದ ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ.ಎಚ್. ಶ್ರೀನಿವಾಸ್ – ೧೯೨೪ ಕಮಲ ಪುರಂದರೆ – ೧೯೪೦

Details

Date:
August 24
Event Category: