Loading Events

« All Events

ನೀಲಮ್ಮ ಕಡಾಂಬಿ

July 11, 2024

೧೧..೧೯೧೧ ೧೪.೧೨. ೧೯೯೮ ವೀಣೆ ಹಾಗೂ ಹಾಡುಗಾರಿಕೆಯಲ್ಲಿ ಪ್ರಸಿದ್ಧರಾಗಿದ್ದ ನೀಲಮ್ಮ ಕಡಾಂಬಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮೇಲುಕೋಟೆ. ತಂದೆ ವೀಣೆ ವಿದ್ವಾಂಸರಾಗಿದ್ದ ವೆಂಕಟಾಚಾರ್ಯರು, ಪ್ರಾರಂಭಿಕ ಸಂಗೀತ ಪಾಠ ಅಣ್ಣನವರಾದ ಎಂ.ವಿ. ಶ್ರೀನಿವಾಸ ಅಯ್ಯಂಗಾರ್ಯರಿಂದ. ನಂತರ ವೀಣೆ ವೆಂಕಟಗಿರಿಯಪ್ಪನವರಲ್ಲಿ ವೀಣೆ ಪಾಠ, ಹಾಡುಗಾರಿಕೆಯ ಶಿಕ್ಷಣ ಮೈಸೂರು ವಾಸುದೇವಾಚಾರ್ಯರು, ಟಿ. ಚೌಡಯ್ಯ, ವಿ. ರಾಮರತ್ನಂ ರವರಲ್ಲಿ. ೧೯೫೪ ರಲ್ಲಿ ದೆಹಲಿಯಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಉತ್ಸವದಲ್ಲಿ ಜವಹರಲಾಲ್‌ ನೆಹರು ಮತ್ತು ಎಸ್‌. ರಾಧಾಕೃಷ್ಣನ್‌ ರವರ ಸಮ್ಮುಖದಲ್ಲಿ ನಡೆಸಿಕೊಟ್ಟ ವೀಣಾ ವಾದನ ಕಚೇರಿ. ಬೆಂಗಳೂರು, ಧಾರವಾಡ, ಆಕಾಶವಾಣಿ ನಿಲಯದಿಂದ ಹಲವಾರು ಬಾರಿ ಕಾರ್ಯಕ್ರಮ ಬಿತ್ತರ. ಹೊರರಾಜ್ಯದ ವಿಜಯವಾಡ, ಕಾಕಿನಾಡ, ರಾಜಮಹೇಂದ್ರಿ, ಬೆಂಗಳೂರಿನ ಗಾಯನ ಸಮಾಜ, ಕರ್ನಾಟಕ ಗಾನ ಕಲಾ ಪರಿಷತ್‌, ಮಲ್ಲೇಶ್ವರಂ ಸಂಗೀತ ಸಭಾ, ಮದರಾಸಿನ ರಸಿಕರಂಜನಿ ಸಭಾ, ಪಾರ್ಥಸಾರಥಿ ಸಂಗೀತ ಸಭಾ, ಮುಂಬಯಿ, ದೆಹಲಿ, ನಾಗಪುರ ಮುಂತಾದೆಡೆಗಳಲ್ಲಿ ಯಶಸ್ವಿ ವೀಣಾವಾದನ ಕಚೇರಿ. ಕೊಲಂಬಿಯ ಕಂಪನಿಯಿಂದ ಗಾನ ಮುದ್ರಿಕೆಗಳ ಮುದ್ರಣ. ತುಳಸಿ ಎಂಬ ಚಲನಚಿತ್ರದಲ್ಲಿ ವೀಣಾ ಕಚೇರಿ ದೃಶ್ಯ. ಬೆಂಗಳೂರಿನ ಗಾನಕಲಾ ಪರಿಷತ್ತಿನ ವಾರ್ಷಿಕ ಸಮ್ಮೇಳನದ ಅಧ್ಯಕ್ಷತೆ, ಗಾನಕಲಾ ಭೂಷಣ ಬಿರುದು. ಅಧ್ಯಕ್ಷರಾಗಿ ಆಯ್ಕೆಗೊಂಡ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆ. ಮೈಸೂರು ಅರಮನೆಯಿಂದ ಗಂಡ ಭೇರುಂಡ ಲಾಂಛನದ ಚಿನ್ನದ ಸರ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಪ್ರಶಸ್ತಿ, ಸನ್ಮಾನ. ತಂಜಾವೂರಿನ ಸಂಗೀತೋತ್ಸವದಲ್ಲಿ ಬಾಲಕೇಸರಿ ಬಿರುದು, ಚೆನ್ನೈನ ಟಿ.ವಿ.ಎಸ್‌ ಗ್ರೂಪ್‌ ವತಿಯಿಂದ ಕುಸುರಿಕೆತ್ತನೆಯ ಬೆಳ್ಳಿ ವೀಣೆ ಪ್ರದಾನ, ಈ ಬೆಳ್ಳಿ ವೀಣೆ ವಿಶೇಷತೆ ತಾಂಬೂಲ ಚವರ್ಣಕ್ಕೆ ಎಲೆ, ಅಡಿಕೆ, ಏಲಕ್ಕಿ, ಲವಂಗ, ಸುಣ್ಣ ಇಡಲು ಕರಂಡಿಕೆ, ಇದಲ್ಲದೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನ, ರಜತಪದಕ.   ಇದೇ ದಿನ ಹುಟ್ಟಿದ ಕಲಾವಿದ ಚಂದ್ರಮೌಳಿ ಬಿ.ಎನ್‌ – ೧೯೫೧

* * *

Details

Date:
July 11, 2024
Event Category: