Loading Events

« All Events

  • This event has passed.

ಪಂಕಜ ರಾಮಕೃಷ್ಣಯ್ಯ

October 29

೨೯.೧೦.೧೯೫೦ ಪ್ರಖ್ಯಾತ ಭರತ ನಾಟ್ಯ ವಿದುಷಿ ಪಂಕಜ ರಾಮಕೃಷ್ಣಯ್ಯ ನವರು ಹುಟ್ಟಿದ್ದು ಮೈಸೂರು. ತಂದೆ ಮಹಾದೇವ್‌, ತಾಯಿ ಪಾರ್ವತಮ್ಮ. ಓದಿದ್ದು ಬಿಎಸ್ಸಿ ನಂತರ ಎಂ.ಎ. ಭರತನಾಟ್ಯದಲ್ಲಿ ಪಡೆದ ವಿದ್ವತ್‌ಪದವಿ. ಸರಸ್ವತಿ ನೃತ್ಯ ಕಲಾಮಂದಿರದ ನಾಟ್ಯಾಚಾರ್ಯ ಎಂ. ವಿಷ್ಣುದಾಸ್‌ಮತ್ತು ಚಂದ್ರಮತಿಯವರಲ್ಲಿ ಭರತನಾಟ್ಯ ಶಿಕ್ಷಣ. ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜು, ಮೈಸೂರು ರಾಜ್ಯ ಮಟ್ಟದ ನೃತ್ಯ ಕಾರ‍್ಯಾಗಾರಗಳಲ್ಲಿ ಪಡೆದ ತರಬೇತಿ. ಜಾನಪದ ಕಲೆಗಳಾದ ಕಂಸಾಳೆ, ಕೊರವಂಜಿ, ಸುಗ್ಗಿ ಕುಣಿತ, ನಾಗ ನೃತ್ಯ, ಕೋಲಾಟ ಮುಂತಾದುವುಗಳನ್ನು ಮುಂದಿನ ಜನಾಂಗಕ್ಕೂ ಉಳಿಸಿ ಕಾಪಾಡುವಲ್ಲಿ ವಹಿಸುತ್ತಿರುವ ಅಪಾರ ಕಾಳಜಿ. ೧೯೮೪ ರಲ್ಲಿ ಸ್ಥಾಪಿಸಿದ ಸರ್ವೇಶ್ವರ ನೃತ್ಯ ಕಲಾ ಮಂದಿರದ ಮೂಲಕ ಇದುವರೆಗೂ ಸಾವಿರಕ್ಕೂ ಮಿಕ್ಕು ವಿದ್ಯಾರ್ಥಿಗಳಿಗೆ ನೀಡಿದ ತರಬೇತಿ. ಮಕ್ಕಳ ಪ್ರತಿಭೆಯನ್ನು ಗುರುತಿಸಲು ಪುಟಾಣಿಗಳಿಗಾಗಿ ವಿಶೇಷ ಶಿಕ್ಷಣ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ನೃತ್ಯ ಶಿಕ್ಷಣ ನೀಡುತ್ತಿರುವುದೇ ಈ ಸಂಸ್ಥೆಯ ಹೆಗ್ಗಳಿಕೆ. ಕಟ್ಟಡ ಸಹಾಯಾರ್ಥ ಹಮ್ಮಿಕೊಂಡಿದ್ದ ನಾಟಕೋತ್ಸವ, ನೃತ್ಯೋತ್ಸವ, ಹಾಸ್ಯೋತ್ಸವ ಮೈಸೂರಿನ ರಸಿಕರಿಗೆ ನೀಡಿದ ರಸದೌತಣ ಕಾರ್ಯಕ್ರಮಗಳು. ಜಯಚಾಮರಾಜ ಒಡೆಯರ ಸಮ್ಮುಖದಲ್ಲಿ, ಜಗನ್ಮೋಹನ ಅರಮನೆ, ಮೈಸೂರಿನ ಲಲಿತ ಕಲಾ ಮಹೋತ್ಸವ, ಶ್ರೀರಾಮನಾಥಪುರಂ, ಹೈದರಾಬಾದ್‌, ಮುಂತಾದೆಡೆ ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮಗಳು. ಭಾರತೀಯ ನೃತ್ಯ ಕಲಾ ಪರಿಷತ್ತಿನಿಂದ ‘ನೃತ್ಯಕಲಾ ಸಿಂಧು’, ಮೈಸೂರಿನ ಕಥಕ್‌ ಕೇಂದ್ರ, ದಸರಾ ವಸ್ತು ಪ್ರದರ್ಶನದಲ್ಲಿ ಪ್ರಶಸ್ತಿ, ದುರ್ಗಾಪರಮೇಶ್ವರಿ ನೃತ್ಯ ನಿಕೇತನ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕೃತರು.   ಇದೇದಿನಹುಟ್ಟಿದಕಲಾವಿದರು ಲಕ್ಷ್ಮಣದಾಸ ವೇಲಣಕರ – ೧೯೩೯ ಜಯರಾಮ ಉಡುಪ – ೧೯೬೫

* * *

Details

Date:
October 29
Event Category: