ಪಂಕಜ ಸಿಂಹ

Home/Birthday/ಪಂಕಜ ಸಿಂಹ
Loading Events
This event has passed.

೩೦..೧೯೪೮ ೨೦.೧೨.೨೦೦೦ ಸುಗಮ ಸಂಗೀತದ ಗಾನಕೋಗಿಲೆ ಎನಿಸಿದ್ದ ಪಂಕಜರವರು ಹುಟ್ಟಿದ್ದು. ಹಾಸನದಲ್ಲಿ. ತಂದೆ ಅಡ್ವೊಕೇಟ್ ಗೋವಿಂದರಾಜ್, ತಾಯಿ ಪ್ರತಿಭಾನ್ವಿತ ಪಿಟೀಲು ವಾದಕಿ ಶಾರದಮ್ಮ. ಮನೆಯಲ್ಲಿ ಸದಾ ಸಂಗೀತದ ವಾತಾವರಣ. ಪಡೆದಿದ್ದು ಎಂ.ಎ. ಪದವಿ, ಹವ್ಯಾಸಿ ಪರ್ತಕರ್ತೆಯಾಗಿ ಹಲವಾರು ಸಂಗೀತದ ಬಗೆಗಿನ ಲೇಖನ ವಿಮರ್ಶೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಿತ. ಚಿಕ್ಕಂದಿನಿಂದಲೂ ಒಲಿದುಬಂದ ಸಂಗೀತಕ್ಕೆ ತಾಯಿಯೇ ಗುರು. ನಂತರ ಸಂಗೀತಾಭ್ಯಾಸ ಕುರೂಡಿ ವೆಂಕಣ್ಣಾಚಾರ್‌ ಮತ್ತು ಎಸ್. ರಾಮನಾಥನ್ ರವರಲ್ಲಿ. ಶಾಲೆಯಲ್ಲಿದ್ದಾಗಲೇ ಸಂಗೀತ ಸ್ಪರ್ಧೆಗಳಲ್ಲಿ ಪಡೆದ ಬಹುಮಾನಗಳು. ಮೈಸೂರು ವಿ. ಸುಬ್ರಹ್ಮಣ್ಯ ರವರಲ್ಲಿ ವೀಣಾ ವಾದನದ ಅಭ್ಯಾಸ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಸೀನಿಯರ್‌ ಪರೀಕ್ಷೆಯ ತೇರ್ಗಡೆ. ಭರತನಾಟ್ಯದಲ್ಲೂ ಸೀನಿಯರ್‌ ಗ್ರೇಡ್ ಪರೀಕ್ಷೆಯಲ್ಲಿ ತೋರಿದ ಪ್ರಾವೀಣ್ಯತೆ. ಉಭಯಗಾನ ವಿದುಷಿ ಶ್ಯಾಮಲಜಿ ಭಾವೆ ಮತ್ತು ಎಂ. ಪ್ರಭಾಕರ್‌ (ಪಂಢರಿ ಬಾಯಿಯವರ ಸಹೋದರ) ಇವರ ಮಾರ್ಗದರ್ಶನದಲ್ಲಿ ಸುಗಮ ಸಂಗೀತದಲ್ಲಿ ಶಿಕ್ಷಣ. ಹಾಸನ, ಸಕಲೇಶಪುರ, ಮೈಸೂರು, ಬೆಂಗಳೂರುಗಳಲ್ಲಿ ನೀಡಿದ ಸುಗಮ ಸಂಗೀತ ಕಚೇರಿಗಳು. ಬೆಂಗಳೂರಿನ ಗಾಯನ ಸಮಾಜ, ಮಲ್ಲೇಶ್ವರಂ ಸಂಗೀತ ಸಭಾ, ಕರ್ನಾಟಕ ಗಾನ ಕಲಾಪರಿಷತ್ತು, ತ್ಯಾಗರಾಜ ಗಾನಸಭಾ ಮುಂತಾದ ಪ್ರತಿಷ್ಠಿತ ಸಂಗೀತ ಸಂಸ್ಥೆಗಳ ಸಂಗೀತೋತ್ಸವಗಳಲ್ಲಿ ಭಾಗಿ, ಪಡೆದ ವಿದ್ವಜ್ಜನರ ಮೆಚ್ಚುಗೆ. ಆಕಾಶವಾಣಿ, ದೂರದರ್ಶನಗಳಲ್ಲೂ ಕಾರ್ಯಕ್ರಮ ಪ್ರಸಾರ. ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಆಯೋಜಿಸಿದ್ದ ವಿಶ್ವ ಕನ್ನಡ ಸಮ್ಮೇಳನ, ಪುರಂದರ ಶತಮಾನೋತ್ಸವ ಸಮಿತಿ ಆಯೋಜಿಸಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ನೀಡಿದ ಕರ್ನಾಟಕ ಸಂಗೀತ ಹಾಗೂ ಸುಗಮ ಸಂಗೀತ ಕಚೇರಿ. ಎನ್.ಎಸ್.ರಾಮನ್ ರೊಡನೆ ಯುಗಳ ಗೀತೆಗಳ ಕಾರ್ಯಕ್ರಮ. ಜನ ಮೆಚ್ಚುಗೆ ಪಡೆದ ಕಾರ್ಯಕ್ರಮಗಳಲ್ಲೊಂದು. ‘ನಾದ ಸುರಭಿ’ ಸಂಗೀತ ಸಂಸ್ಥೆಯ ನಿರ್ದೇಶಕಿಯಾಗಿ ಹಲವಾರು ಶಿಷ್ಯರನ್ನು ತಯಾರು ಮಾಡಿದ ಕೀರ್ತಿ. ವ್ಯಾಸರಾಜ ಮಠದ ಶ್ರೀಪಾದಂಗಳವರಿಂದ ಗಾನಕೋಗಿಲೆ ಬಿರುದು. ಇಂದೂ ವಿಶ್ವನಾಥ ಸಂಗೀತ ನಿರ್ದೇಶನದ ಭಕ್ತಿ ಪಲ್ಲವಿ ಧ್ವನಿ ಸುರುಳಿ, ಸಾಕ್ಷರತಾ ಆಂದೋಲನದ ಧ್ವನಿ ಸುರಳಿ, ಹಲವಾರು ಧ್ವನಿ ಸುರುಳಿಗಳಿಗೆ ಹಾಡುಗಾರಿಕೆ, ನಿರ್ದೇಶನ, ಸಂಗೀತದ ಕಲೆಗಾಗಿ ಮುಡುಪಾಗಿಟ್ಟು ಬೆಂಗಳೂರು ಇಂದಿರಾನಗರದಲ್ಲಿ ಸಂಗೀತ ಪಾಠ ಹೇಳಲು ಹೊರಟು ಮಾರ್ಗ ಮಧ್ಯೆ ಕಾರಿನಲ್ಲೇ ಕುಸಿದು ತೀರಿಕೊಂಡಾಗ ಸಂಗೀತ ಕ್ಷೇತ್ರಕ್ಕಾದ ಅಳೆಯಲಾಗದ ನಷ್ಟ.   ಇದೇ ದಿನ ಹುಟ್ಟಿದ ಕಲಾವಿದೆ ಶೋಭಾ ಹುಣಸಗಿ – ೧೯೫೦.

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top