ಪಂಚಾಕ್ಷರಿ ಹಿರೇಮಠ

Home/Birthday/ಪಂಚಾಕ್ಷರಿ ಹಿರೇಮಠ
Loading Events
This event has passed.

೬-೧-೧೯೩೩ ಕವಿಮನಸ್ಸಿನ ಪ್ರಾಧ್ಯಾಪಕರಾದ ಪಂಚಾಕ್ಷರಿ ಹಿರೇಮಠರವರು ಹುಟ್ಟಿದ್ದು ಬಿಸರಹಳ್ಳಿ. ತಂದೆ ಮಲಕಯ್ಯ, ತಾಯಿ ಬಸಮ್ಮ. ಪ್ರಾಥಮಿಕ ಶಿಕ್ಷಣ ಬಿಸರಹಳ್ಳಿ. ಕೊಪ್ಪಳದಲ್ಲಿ ಮುಂದುವರಿಕೆ. ಹತ್ತರ ಹರೆಯದಲ್ಲೇ ಕವನ ಬರೆದು ಪ್ರಕಟಣೆ. ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ೩೩ ವರ್ಷ ಸೇವೆ, ನಿವೃತ್ತಿ. ಅಧ್ಯಾಪನದ ಜೊತೆಗೆ ಮುರುಘ ರಾಜೇಂದ್ರ ಮಠದಲ್ಲಿ ಸಹಾಯಕ ಸಂಶೋಧಕ, ಸಮಗ್ರ ವಚನ ಸಾಹಿತ್ಯ ಸಂಸ್ಕರಣೆ-ಪ್ರಕಟಣೆ ಹೊಣೆ. ತಮ್ಮದೇ ತಾರಾ ಗ್ರಂಥ ಪ್ರಕಾಶನದಲ್ಲಿ ಹಲವಾರು ವಿದ್ವಾಂಸರ ಕೃತಿಪ್ರಕಟಣೆ. ಅನುವಾದಕರಾಗಿಯೂ ಪ್ರಸಿದ್ಧರು. ಕಾವ್ಯ, ಕಥೆ, ಪ್ರಬಂಧ, ವಿಮರ್ಶೆ, ಜೀವನಚರಿತ್ರೆ, ವಿಚಾರ ಸಾಹಿತ್ಯ, ಪ್ರವಾಸಕಥನ, ಮಕ್ಕಳ ಸಾಹಿತ್ಯದಲ್ಲಿ ಸುಮಾರು ೮೦ ಕೃತಿ ರಚನೆ. ಉರ್ದು ಕವಿಗಳ ಪ್ರೇರಣೆಯಿಂದ ಮುಕ್ತಕಗಳ ರಚನೆ. ಪ್ರವಾಸ ಹವ್ಯಾಸ. ‘ಭಾರತದರ್ಶನ’ ಪ್ರವಾಸ ಸಾಹಿತ್ಯ ಪ್ರಕಟಣೆ. ೧೯೮೫ರಲ್ಲಿ  ಗ್ರೀಸ್‌ನ ಕೊರವೂ ನಗರದ ಕವಿಸಮ್ಮೇಳನದಲ್ಲಿ  ಪ್ರಮುಖ ಪಾತ್ರ. ಅಮೆರಿಕದ ಅರಿಜೋನ ವಿಶ್ವವಿದ್ಯಾಲಯದ ಡಾಕ್ಟರೇಟ್ ಪದವಿ. ಇವರ ಬದುಕಿನ ಬಗ್ಗೆ ಪ್ರೊ. ಎಚ್.ಮಾಸಾಪತಿ, ಯಲ್ಲಪ್ಪ ಹಲಕುರ್ಕಿ, ಗವಿಸಿದ್ದಪ್ಪ ಎಚ್. ಪಾಟೀಲ ಮೊದಲಾದವರಿಂದ ಕೃತಿ ರಚನೆ. ಚೈತ್ಯಾಕ್ಷಿ, ನೀ ರುದ್ರನಾಗು, ಗಾಳಿ-ಗಂಧ, ಬೆಳಕಿನ ಹೆಪ್ಪು ಹಾಕುವತನಕ, ಬಯಕೆ ಈ ಮನಕೆ, ಆರಂಭವ ಮಾಡುವೆ ಮುಂತಾದ ಸ್ವತಂತ್ರ ಕಾವ್ಯ ಸಂಗ್ರಹಗಳು. ಕೆಳದಿಯ ಬಗ್ಗೆ  ೫೦೫ ಮುಕ್ತಕಗಳು. ಒಂದು ಹೆಣ್ಣು ಒಂದು ಮಧುಪಾತ್ರೆ, ೨೭ ಉರ್ದು ಕತೆಗಳು, ಕ್ಷಿತಿಜ, ಕೃಷ್ಣಚಂದರ ಕಥೆಗಳು ಮುಂತಾದ-೯ ಸಣ್ಣಕಥಾಸಂಗ್ರಹ. ನಾರಿ, ಮಗ್ಗ ಚೆಲ್ಲಿದ ಬೆಳಕು ಮುಂತಾದ ೮ ಕಾದಂಬರಿಗಳು. ಕವೀಂದ್ರರು-ರವೀಂದ್ರರು, ಗಾಲಿಬ್, ಜ್ಞಾನಪೀಠ ಪ್ರಶಸ್ತಿ ವಿಜೇತ ಗೋರಕ್‌ಪುರಿ ಮೊದಲಾದ ೧೨ ವಿಮರ್ಶಾ ಗ್ರಂಥಗಳು. ಒಟ್ಟು ೬೦ ಮಿಕ್ಕು ಗ್ರಂಥ ರಚನೆ. ಸೋವಿಯತ್‌ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. ‘ವಾತ್ಸಲ್ಯ’ ೧೯೯೬ರಲ್ಲಿ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ.   ಇದೇ ದಿನ ಹುಟ್ಟಿದ ಸಾಹಿತಿಗಳು : ಎಂ.ಕೆ. ಜಯಲಕ್ಷ್ಮಿ – ೧೯೨೯ ಶ್ರೀನಿವಾಸ ಕುಲಕರ್ಣಿ – ೧೯೩೯ ಪರಿಮಳಾ ಜಿ. ರಾವ್ – ೧೯೪೧ ಎಂ.ಕೆ. ಬದರಿನಾಥ್ – ೧೯೪೮ ಡಾ. ಅ. ಸುಂದರ – ೧೯೩೩

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top