ಪಂಜೆ ಮಂಗೇಶರಾವ್

Home/Birthday/ಪಂಜೆ ಮಂಗೇಶರಾವ್
Loading Events
This event has passed.

೨೨.೨.೧೮೭೪ ೨೪.೧೦.೧೯೩೭ ಪಂಜೆಯವರು ಜನಿಸಿದ್ದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ. ತಂದೆ ರಾಮಪ್ಪಯ್ಯ, ತಾಯಿ ಸೀತಮ್ಮ. ದಕ್ಷಿಣ ಕನ್ನಡದ ಪಂಜದಲ್ಲಿದ್ದುದರಿಂದ ಮನೆತನದ ಹೆಸರು ‘ಪಂಜೆ’ ಎಂದಾಯಿತು. ಬಂಟ್ವಾಳದಲ್ಲಿ ಪ್ರಾಥಮಿಕ, ಮಂಗಳೂರಿನಲ್ಲಿ ಪ್ರೌಢಶಿಕ್ಷಣ, ಕಾಲೇಜು ವಿದ್ಯಾಭ್ಯಾಸ. ಬಿ.ಎ. ಪದವಿಯ ನಂತರ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗ. ನಂತರ ಎಲ್.ಟಿ. ಪರೀಕ್ಷೆ  ಪಾಸುಮಾಡು ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ, ಶಿಕ್ಷಣಾಕಾರಿಯಾಗಿ ಹಲವಾರು ಕಡೆ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಉಪಾಧ್ಯಾಯರಾಗಿದ್ದಾಗಲೇ ಬರೆಹದ ಪ್ರಾರಂಭ. ಹರಟೇಮಲ್ಲ, ರಾಮಪಂ, ಕವಿಶಿಷ್ಯ ಮುಂತಾದ ಗುಪ್ತನಾಮ. ಲೇಖನಗಳು ಮಂಗಳೂರಿನ ಸುಹಾಸಿನಿ, ಸತ್ಯದೀಪಿಕೆ ಪತ್ರಿಕೆಗಳಲ್ಲಿ ಪ್ರಕಟ. ಮೊದಲ ಕವನ ಸಂಕಲನವು ಬಾಷೆಲ್ ಮಿಷನ್ ಪ್ರೆಸ್‌ನಿಂದ ಪ್ರಕಟಿತ. ಮಡಿಕೇರಿಯಲ್ಲಿದ್ದಾಗ ರಚಿಸಿದ ಪದ್ಯ ‘ಹುತ್ತರಿಯ ಹಾಡು’ ಕೊಡಗಿನ ನಾಡಗೀತೆಯಾಯಿತು. ಕನ್ನಡದ ನವೋದಯದ ಸಮಯದಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟರು. ಬಾಲ ಸಾಹಿತ್ಯಮಂಡಲ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಬಾಲಸಾಹಿತ್ಯ ಪ್ರಕಟಣೆ. ತೂಗುವೆ ತೊಟ್ಟಿಲ, ಜೋಗುಳ, ಸಂಜೆಯ ಹಾಡು, ಆಡಿನಾಮರಿ, ಹೊಗೆಯಬಂಡಿ ಮುಂತಾದ ಉಕ್ತಿಗೀತೆಗಳು. ಡೊಂಬರ ಚೆನ್ನೆ, ಕಡೆಕಂಜಿ, ನಾಗಣ್ಣನ ಕನ್ನಡಕ ಮೊದಲಾದ ಲಘು ಹಾಸ್ಯ ಕಥನಗಳು. ಚಂದ್ರೋದಯ, ಭೀಷ್ಮ ನಿರ‍್ಯಾಣ, ಕಮಲ, ಲಕ್ಷ್ಮೀಶಕವಿ ಮುಂತಾದ ಹಳಗನ್ನಡ ವೃತ್ತ ಕಾವ್ಯಗಳು. ತೆಂಕಣ ಗಾಳಿಯಾಟ ಪದ್ಯದಲ್ಲಿ ಕೊಡಗಿನ ಪ್ರಕೃತಿ ಸೌಂದರ‍್ಯ ವರ್ಣನೆಯಿಂದ ತುಂಬಿದೆ. ಗುಡುಗುಡು ಗುಮ್ಮಟ, ಅರ್ಗಣೆಮುದ್ದೆ, ಸಿಗಡಿ ಯಾಕೆ ಒಣಗಲಿಲ್ಲ, ಹೇನು ಸತ್ತ ಕಾಗೆ, ಮೆಣಸಿನ ಕಾಳಪ್ಪ, ಮೂರು ಕರಡಿಗಳು, ಇಲಿಗಳ ಥಕಥೈ, ಅಂಗಳ ದುಗ್ಗು, ಹುಲಿಯೋ ಇಲಿಯೋ, ಒಡ್ಡನ ಓಟ ಮುಂತಾದ ಮಕ್ಕಳ ಸಣ್ಣ ಕಥೆಗಳು. ದುರ್ಗಾವತಿ, ಪ್ರಥುಲಾ, ಶೈಲಿನಿ-ಮುಂತಾದ ನೀಳ್ಗತೆಗಳು, ಕೋಟಿ ಚೆನ್ನಯ ಕಿರು ಕಾದಂಬರಿ, ಜೊತೆಗೆ ವೈದ್ಯರ ಒಗ್ಗರಣೆ- ಹಾಸ್ಯ ಪ್ರಧಾನ ಕಥೆ ; ಪಂಚ ಕಜ್ಜಾಯ-ಸಂಶೋಧನಾ ಕೃತಿ, ಶಬ್ದಮಣಿ ದರ್ಪಣ-ಸಂಪಾದಿತ ಕೃತಿ. ಎಲ್ಲವೂ ಇವರ ಜನ್ಮ ಶತಮಾನೋತ್ಸವದ ನಾಲ್ಕು ಸಂಪುಟಗಳಲ್ಲಿ  ಅಡಕಗೊಂಡು ಪ್ರಕಟವಾಗಿವೆ. ಕನ್ನಡವನ್ನು ಕಟ್ಟಿ ಬೆಳೆಸಿದ ಪಂಜೆಯವರಿಗೆ ಸಂದ ಗೌರವ-ರಾಯಚೂರಿನ ೨೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ.   ಇದೇ ದಿನ ಹುಟ್ಟಿದ ಸಾಹಿತಿಗಳು : ಕೆ.ವಿ. ಕೃಷ್ಣಯ್ಯ   – ೧೯೩೪ ನಿಂಗಣ್ಣ ಸಣ್ಣಕ್ಕಿ – ೧೯೩೯ ವೀಣಾ ಶಾಂತೇಶ್ವರ – ೧೯೪೫ ರೂಪ ಹಾಸನ – ೧೯೬೭ ಎಂ. ಜೈಕುಮಾರ್ – ೧೯೫೨ ವಿರೂಪಾಕ್ಷ ಕರಡ್ಡಿ – ೧೯೫೨ ರೇಖಾ. ಕೆ.ಎನ್. – ೧೯೭೧

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top