ಪಂಡಿತ ತಾರಾನಾಥ್

Home/Birthday/ಪಂಡಿತ ತಾರಾನಾಥ್
Loading Events
This event has passed.

೫-೬-೧೮೯೧ ೩೦-೧೦-೧೯೪೨ ಆಯುರ್ವೇದ, ಯೋಗಶಾಸ್ತ್ರ, ಸಂಗೀತ, ತತ್ತ್ವಜ್ಞಾನ, ಶಿಕ್ಷಣ, ಸಾಹಿತ್ಯ, ರಾಜಕಾರಣ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ದುಡಿದ ತಾರಾನಾಥರು ಹುಟ್ಟಿದ್ದು ಮಂಗಳೂರಿನಲ್ಲಿ. ತಂದೆ ರಂಗರಾಯರು, ತಾಯಿ ರಾಜೀವಮ್ಮ. ತಂದೆಯಿಂದ ಕಲಿತದ್ದು ಸಂಸ್ಕೃತ ಮತ್ತು ಸಂಗೀತ. ತಾಯಿಯಿಂದ ಕಲಿತದ್ದು ಶೀವಲೀಲೆ, ಹರಿವಿಜಯ, ದಾಸಬೋಧೆಯ ಕೀರ್ತನೆಗಳು. ತಾಯಿಯನ್ನು ಕಳೆದುಕೊಂಡು ಸೇರಿದ್ದು ಅಕ್ಕನ ಆಶ್ರಯ. ಅಧ್ಯಾತ್ಮಿಕ ಜ್ಞಾನಾರ್ಜನೆಯ ಹುಚ್ಚಿನಿಂದ ಬಾಲ್ಯದಲ್ಲಿಯೇ ಸಂನ್ಯಾಸಿಗಳೊಡನೆ ಅಲೆದಾಟ. ನಂತರ ಹೈದರಾಬಾದ್ ನಿಜಾಂ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಮುಗಿಸಿ ಸೇರಿದ್ದು ಹೈದರಾಬಾದ್ ವೈದ್ಯಕೀಯ ಕಾಲೇಜು. ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟು ೧೯೧೨ರಲ್ಲಿ ಕೆಲಸಕ್ಕೆ ಸೇರಿದ್ದು ಬಿದರೆ, ರಾಯಚೂರಿನಲ್ಲಿ ಶಾಲಾ ಶಿಕ್ಷಕರಾಗಿ. ಆಗ ಅಲ್ಲಿಗೆ ಆಗಮಿಸಿದ್ದ ನೇಪಾಳದ ಯೋಗಿ ಉತ್ತಮದಾಸ ಪರಮಹಂಸರು ಮತ್ತು ಯೋಗೀಶ್ವರಾನಂದರಿಂದ ಪಡೆದ ಯೋಗ ಮತ್ತು ಆಯುರ್ವೇದದ ದೀಕ್ಷೆ . ತಾರಾನಾಥರು ತುಂಗಭದ್ರಾ ತೀರದಲ್ಲಿ ಮಂತ್ರಾಲಯ ರೈಲ್ವೆ ಸ್ಟೇಷನ್ ಬಳಿ ತೆರೆದದ್ದು ‘ಪ್ರೇಮಾ-ತನಯ’ ಆಶ್ರಮ. ಕಲಿತ ವಿದ್ಯೆ, ಸಮಾಜದ ದೀನ ದಲಿತರಿಗೆ ಮೀಸಲಿಡುವ ಪಣ. ಆಯುರ್ವೇದ, ಸಾಹಿತ್ಯ, ಯೋಗ, ಸಮಾಜಶಾಸ್ತ್ರ, ಪತ್ರಿಕೋದ್ಯಮ ಇವೆಲ್ಲಾ ಶಿಕ್ಷಣಕ್ಕೂ ಮಾಡಿದ ಏರ್ಪಾಡು. ಆಯುರ್ವೇದ ಔಷಗಳ ಪರಿಚಯದ ಕೃತಿ-ಪ್ರಸಿದ್ಧ ರಸೌಷಗಳು, ಸುಲಭ ಚಿಕಿತ್ಸೆ. ೧೯೨೭ರಲ್ಲಿ  ಗಾಂಜಿಯವರು ಆರೋಗ್ಯ ಸುಧಾರಣೆಗೆಂದು ನಂದಿ ಬೆಟ್ಟಕ್ಕೆ ಬಂದಾಗ ತಾರಾನಾಥರು ಶುಶ್ರೂಕರಾಗಿ ದುಡಿದರು. ಡಾ. ರಾಧಾಕೃಷ್ಣನ್‌ರ ಸಲಹೆಯಂತೆ ‘ದೀನಬಂಧು’ ನಾಟಕವನ್ನು ಹಿಂದಿಯಲ್ಲಿ ಬರೆದು ಆಡಿ, ಬಂದ ಹಣವನ್ನು ಗಾಂಜಿಗೆ ಅರ್ಪಿಸಿದರು. ಗಾಂಜಿ ನಾಟಕ ನೋಡಿ ಮೆಚ್ಚಿ ಮುನ್ನುಡಿ ಬರೆದುಕೊಟ್ಟರು. ಸ್ವತಃ ಕಬೀರನ ಪಾತ್ರ ಮಾಡಿ ಉತ್ತಮ ನಟನೆಂದು ನಿರೂಪಿಸಿದರು. ಮೋಹನಾಸ್ತ್ರ, ಇನ್‌ಸಾಫ್ ಇವರ ಪ್ರಸಿದ್ಧ ನಾಟಕಗಳು. ರಾಯಚೂರಿನಲ್ಲಿ ನಡೆದ (೧೯೩೭) ಅಖಿಲ ಭಾರತ ಆಯುರ್ವೇದ ಮತ್ತು ಯುನಾನಿ ಅನುವಂಶಿಕ ವೈದ್ಯ ಸಮ್ಮೇಳನ ಅಧ್ಯಕ್ಷತೆ ವಹಿಸಿದ್ದರು. ಇವರು ನಿಧನರಾದದ್ದು  ೧೯೪೨ರ ಅಕ್ಟೋಬರ್ ೩೦ರಂದು.   ಇದೇ ದಿನ ಹುಟ್ಟಿದ ಸಾಹಿತಿಗಳು : ಮೋಕ್ಷಗುಂಡಂ ಕೃಷ್ಣಮೂರ್ತಿ – ೧೮೮೪-೨.೩.೧೯೪೦ ಸೀತಾದೇವಿ ಪಡುಕೋಣೆ – ೧೯೦೩-೧೧.೧೨.೧೯೬೯ ನೀಳಾದೇವಿ – ೧೯೩೨ ಮಲ್ಲೇಪುರಂ ವೆಂಕಟೇಶ್ – ೧೯೫೨ ಸೂ. ಸುಬ್ರಹ್ಮಣ್ಯಂ – ೧೯೩೫ ಕೊಪ್ಪರಂ ಅನ್ನಪೂರ್ಣ – ೧೯೫೪ ಪು. ಶ್ರೀನಿವಾಸಭಟ್ಟ, ಕಟೀಲು – ೧೯೩೯

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top