Warning: mysqli_query(): MySQL server has gone away in E:\kanaja_new\wp-includes\wp-db.php on line 2056

Warning: mysqli_query(): Error reading result set's header in E:\kanaja_new\wp-includes\wp-db.php on line 2056

ಪಂ. ಆರ್.ಕೆ. ಬಿಜಾಪುರೆ – ಕಣಜ

ಪಂ. ಆರ್.ಕೆ. ಬಿಜಾಪುರೆ

Home/Birthday/ಪಂ. ಆರ್.ಕೆ. ಬಿಜಾಪುರೆ
Loading Events
This event has passed.

೦೭.೦೧.೧೯೧೭ ಸುಪ್ರಸಿದ್ಧ ಹಾರ್ಮೋನಿಯಂ ಸ್ವತಂತ್ರ ವಾದಕ ಬಿಜಾಪುರೆಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಕಾಗವಾಡ. ತಂದೆ ಕಲ್ಲೋಪಂತ ಬಿಜಾಪುರೆಯವರು, ತಾಯಿ ರುಕ್ಮಿಣಿಬಾಯಿ. ಸಾಮಾನ್ಯ ವಿದ್ಯಾಭ್ಯಾಸ ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆ. ಬಾಲ್ಯದಿಂದಲೂ ಸಂಗೀತದತ್ತ ಒಲವು. ಅಣ್ಣಿಗೇರಿ ಮಲ್ಲಯ್ಯನವರಿಂದ ಸಂಗೀತ ಪಾಠ ಪ್ರಾರಂಭ. ಪ್ರಸಿದ್ಧ ಹಾರ್ಮೋನಿಯಂ ವಾದಕರಾದ ಪಂ. ರಾಜವಾಡೆ, ಪಂ. ಗೋವಿಂದರಾವ್ ಗಾಯಕ್‌ವಾಡ್, ಪಂ. ವಿಠ್ಠಲರಾವ್ ಕೋರಗಾವ್‌ಕರ್‌ರಲ್ಲಿ ಸತತ ಅಭ್ಯಾಸ. ಕೆಲಕಾಲ ಪೈ. ಮೆಹಬೂಬ್‌ಖಾನ್ ಮಿರಜಕರ್ ರವರಲ್ಲಿ ತಬಲ ವಾದನದ ಶಿಕ್ಷಣ. ೧೯೫೩ರಲ್ಲಿ ಅಖಿಲ ಭಾರತೀಯ ಗಾಂಧರ್ವ ಮಹಾವಿದ್ಯಾಲಯದಿಂದ ಸಂಗೀತ ವಿಶಾರದ (ಗಾಯನ) ಹಾಗೂ ಸಂಗೀತ ಅಲಂಕಾರ (ಹಾರ್ಮೋನಿಯಂ) ಪರೀಕ್ಷೆಯಲ್ಲಿ ಇಡೀ ಭಾರತಕ್ಕೆ ಪ್ರಥಮ ಸ್ಥಾನ ಗಳಿಸಿದ ಕೀರ್ತಿ. ಆದರೆ ಧ್ವನಿಯ ತೊಂದರೆಯಿಂದಾಗಿ ಸ್ವತಂತ್ರ ಹಾರ್ಮೋನಿಯಂ ವಾದಕರಾಗಿ ಬಂದ ಪ್ರಸಿದ್ಧಿ. ಶಿರಹಟ್ಟಿ ವೆಂಕೋಬರಾವ್ ನಾಟಕ ಕಂಪನಿಯಲ್ಲಿ ಹಾರ್ಮೋನಿಯಂ ವಾದಕರಾಗಿ, ಸಂಗೀತ ಸಂಯೋಜಕರಾಗಿ ಸಲ್ಲಿಸಿದ ಸೇವೆ. ೧೯೩೭ರಲ್ಲಿ ಬೆಳಗಾವಿಯಲ್ಲಿ ಆಯೋಜಿಸಲಾದ ಎಚ್.ಎಂ.ವಿ. ಧ್ವನಿಮುದ್ರಣ ಕೇಂದ್ರದಲ್ಲಿ ಹಾರ್ಮೋನಿಯಂ ಮತ್ತು ಆರ್ಗನ್ ಸಾಥಿ. ಭಾರತದಲ್ಲಿ ನಡೆದ ರಷ್ಯನ್ ಉತ್ಸವದಲ್ಲಿ ಹಾರ್ಮೋನಿಯಂ ಪ್ರದರ್ಶನ, ವಿಡಿಯೋ ಚಿತ್ರೀಕರಣ. ಧಾರವಾಡ, ಪುಣೆ, ಮುಂಬಯಿ ಆಕಾಶವಾಣಿ ಕೇಂದ್ರಗಳಿಂದ ಸೋಲೊ ಹಾರ್ಮೋನಿಯಂ ವಾದನದ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಪ್ರಸಾರ. ಹಲವಾರು ಆಕಾಶವಾಣಿ ಕೇಂದ್ರಗಳ ಧ್ವನಿಪರೀಕ್ಷೆಯ ಸದಸ್ಯರಾಗಿ, ಬೆಳಗಾವಿ ಕಲಾಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ. ೧೯೩೮ರಲ್ಲಿ ಬೆಳಗಾವಿಯಲ್ಲಿ ಶ್ರೀರಾಮ ಸಂಗೀತ ಮಹಾವಿದ್ಯಾಲಯ ಸ್ಥಾಪಿನೆ ಮತ್ತು ಬೆಂಗಳೂರಿನಲ್ಲಿ ಬಿಜಾಪುರ ಹಾರ್ಮೋನಿಯಂ ಫೌಂಡೇಶನ್ ರಚನೆ. ‘ಮೇರು’ ಧ್ವನಿ ಸುರಳಿ ಬಿಡುಗಡೆ. ಸಂಗೀತ ಸಾಧನೆಗೆ ಸಂದ ಗೌರವಗಳು ಹಲವಾರು. ಧಾರವಾಡದಲ್ಲಿ ಪಂ. ಮಲ್ಲಿಕಾರ್ಜುನ ಮನಸೂರರು, ಬೆಳಗಾವಿಯಲ್ಲಿ ಪಂ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ ರವರಿಂದ ಸತ್ಕಾರ, ಕರ್ನಾಟಕ ಸಂಗೀತ, ನೃತ್ಯ ಅಕಾಡಮಿಯಿಂದ ‘ಕರ್ನಾಟಕ ಕಲಾತಿಲಕ’, ಪುಣೆಯ ಟೆಂಬೆ ಪ್ರತಿಷ್ಠಾನದಿಂದ ‘ಸಂಗೀತಕಾರ್’ ಪುರಸ್ಕಾರ, ಬೆಂಗಳೂರಿನ ಹಿಂದೂಸ್ತಾನಿ ಸಂಗೀತ ಕಲಾಕಾರ ಮಂಡಲಿಯಿಂದ ‘ನಾದಶ್ರೀ’ ಬಿರುದು ಮತ್ತು ಸಂಗೀತ ವಿದ್ವಾನ್, ಟಿ. ಚೌಡಯ್ಯ ಪ್ರಶಸ್ತಿ, ಮಹೋಪಾಧ್ಯಾಯ ಬಿರುದು ಮುಂತಾದುವು. ಇದೇ ದಿನ ಹುಟ್ಟಿದ ಕಲಾವಿದರು : ವಾಣಿ ಕೃಷ್ಣಸ್ವಾಮಿ – ೧೯೭೩

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top