ಪಂ. ಆರ್.ವಿ. ಶೇಷಾದ್ರಿ ಗವಾಯಿ

Home/Birthday/ಪಂ. ಆರ್.ವಿ. ಶೇಷಾದ್ರಿ ಗವಾಯಿ
Loading Events

೨೧-೩-೧೯೨೪ ೧೯-೩-೨೦೦೩ ಸಂಗೀತ ಶಿಕ್ಷಕ, ಪ್ರಸಾರಕ, ಗಾಯಕ, ವಾಗ್ಗೇಯಕಾರರಾದ ಶೇಷಾದ್ರಿ ಗವಾಯಿಗಳು ಹುಟ್ಟಿದ್ದು ದಾವಣಗೆರೆಯಲ್ಲಿ. ತಂದೆ ರಾಜಾಪುರ ವೆಂಕಟಸುಬ್ಬರಾವ್, ತಾಯಿ ತಿಮ್ಮಮ್ಮ. ಒಂಬತ್ತರ ಬಾಲ್ಯದಿಂದಲೇ ರಂಗಭೂಮಿ ಬಾಲನಟನಾಗಿ, ಬಾಲಕೃಷ್ಣ, ಪ್ರಹ್ಲಾದನಾಗಿ, ವಾಮನರಾವ್ ಮಾಸ್ತರ ಕಂಪನಿ, ತಳಕಲ್ ವೆಂಕಟರೆಡ್ಡಿ ಕಂಪನಿ, ಹಂದಿಗನೂರು ಸಿದ್ಧರಾಮಪ್ಪ ಕಂಪನಿ, ಕಲ್ಕೋಟಿ ಚನ್ನಬಸವಯ್ಯನವರ ಅರವಿಂದ ನಾಟಕ ಕಂಪನಿಯ ನಟನಾಗಿ ಪಡೆದ ಖ್ಯಾತಿ. ಚನ್ನಬಸವಯ್ಯನವರಲ್ಲಿ ಕಲಿತ ಹಾರ್ಮೋನಿಯಂ ವಾದನ ಕಲೆ. ಪಂಚಾಕ್ಷರಿ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತ ಕಲಿಕೆ. ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್‌ರು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸಿದರೆ ಹಿಂದೂಸ್ತಾನಿ ಸಂಗೀತ ಪ್ರಚಾರಕ್ಕೆ ಬಂದುದು ಬೆಂಗಳೂರಿಗೆ. ಅರವಿಂದ ಸಂಗೀತ ವಿದ್ಯಾಲಯ ಸ್ಥಾಪನೆ. ನೂರಾರು ಶಿಷ್ಯರಿಗೆ ತರಬೇತಿ. ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಹಾಕಿದ ಭದ್ರ ಬುನಾದಿ. ರಾಜ್ಯ ಸಂಗೀತ, ನೃತ್ಯ ಅಕಾಡಮಿ ಅಧ್ಯಕ್ಷರ ಜವಾಬ್ದಾರಿ. ಸಂಗೀತ, ಕಲೆ, ಸಾಹಿತ್ಯ ಪ್ರಚಾರಕ್ಕಾಗಿ ಪ್ರಾರಂಭಿಸಿದ್ದು ‘ಗಾಯನ ಗಂಗಾ’ ಎಂಬ ಸಂಗೀತ ಮಾಸ ಪತ್ರಿಕೆ. ‘ಉರುಗಾಚಲ’ ಅಂಕಿತದಲ್ಲಿ ಅನೇಕ ಕೃತಿಗಳ ರಚನೆ. ೫೦೦ಕ್ಕೂ ಹೆಚ್ಚು ಭಕ್ತಿ ಗೀತೆಗಳಿಗೆ ಸ್ವರ ಸಂಯೋಜನೆ. ಸಂಗೀತ ಕಲಾರವಿಂದ ಭಾಗ ೧, ೨, ಪುಸ್ತಕಗಳಿಗೆ ಕರ್ನಾಟಕ ಸರಕಾರದಿಂದ ಬಹುಮಾನ. ತತ್ತ್ವ ರತ್ನಾಕರ ಬಹುಜನಪ್ರಿಯ ಪುಸ್ತಕ. ವಚನ ಗಾಯನ ವಿಭೂಷಣರೆಂದೇ ಪ್ರಸಿದ್ಧಿ. ಹೆಸರಾಂತ ಹಿಂದೂಸ್ತಾನಿ ಗಾಯಕರಾದ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮುಂತಾದವರಿಗೆ ನೀಡಿದ ಹಾರ್ಮೋನಿಯಂ ಸಾಥಿ. ದೆಹಲಿ, ಕೋಲ್ಕತ್ತಾ, ಮುಂಬಯಿ, ನಾಗಪುರ, ಹೈದರಾಬಾದ್‌ಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ದೊರೆತ ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಸಂಗೀತ ಸಾಗರ, ಸಂಗೀತ ಕಲಾರತ್ನ, ಸಂಗೀತ ವಿಶಾರದ, ಸಂಗೀತ ಸುಧಾರ್ಣವ, ನಾದಶ್ರೀ ಬಿರುದುಗಳು. ರಾಜ್ಯ ಸಂಗೀತ ನೃತ್ಯ ಅಕಾಡಮಿ, ಚಂದ್ರಹಾಸ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಮಹೋಪಾಧ್ಯಾಯ ಬಿರುದು ಮುಂತಾದುವುಗಳ ಜೊತೆಗೆ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷ ಪದವಿ.   ಇದೇ ದಿನ ಹುಟ್ಟಿದ ಕಲಾವಿದರು : ಕೃಷ್ಣಾಬಾಳಾಶೇಟ್ ಕರ್ಡೇಕರ – ೧೯೩೮

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

ಕೇಂದ್ರ ಸರ್ಕಾರದ ಜಾಲತಾಣಗಳು

ತಾಂತ್ರಿಕ‌ ಜಾಲತಾಣಗಳು

ಕನ್ನಡ ಸಂಬಂಧಿ ಜಾಲತಾಣಗಳು

ಆಯೋಗಗಳು

ನ್ಯಾಯಾಲಯಗಳು

ಡೌನ್‌ಲೋಡ್‌ಗಳು

Go to Top