
- This event has passed.
ಪಂ. ಎನ್.ಆರ್. ರಾಮರಾವ್
September 17
೧೭. ೯. ೧೯೨೭ ೨೧. ೪. ೨೦೦೩ ದಕ್ಷಿಣ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಸಿತಾರ್‌ವಾದ್ಯ ಸಂಗೀತದ ಮೂಲಕ ಪ್ರಚುರಗೊಳಿಸಿದವರಲ್ಲಿ ಪ್ರಮುಖರಾದ ರಾಮರಾವ್ ಹುಟ್ಟಿದ್ದು ಹಾಸನ. ತಂದೆ ರಾಮಸ್ವಾಮಿ, ತಾಯಿ ಶಂಕರಮ್ಮ, ಬಿ.ಎಸ್ಸಿ ಪದವಿಯ ನಂತರ ಪಂ. ರವಿಶಂಕರ್‌ರವರಲ್ಲಿ ಸಿತಾರ್‌ವಾದನದ ಸತತ ಅಭ್ಯಾಸ. ದಕ್ಷಿಣ ಭಾರದಲ್ಲಿ ರವಿಶಂಕರ್ ಸಿತಾರ್‌ವಾದನದ ಛಾಯೆ ಮೂಡಿಸಿದವರಲ್ಲಿ ಅಗ್ರಗಣ್ಯರು. ಆಕಾಶವಾಣಿ ‘ಎ’ ಶ್ರೇಣಿ ಕಲಾವಿದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಕಾರ್ಯಕ್ರಮ ಪ್ರಸಾರ. ಮುಂಬಯಿಯ ಭಾರತೀಯ ಸಂಗೀತ ಮತ್ತು ನೃತ್ಯ ಶಿಕ್ಷಪೀಠ, ಮುಲುಂದ್‌ನಲ್ಲಿನ ರಾಗೇಶ್ರೀ, ರಾಜಕೋಟೆಯ ಭಾರತೀಯ ಸಂಗೀತ ಸಂಸದ್, ಬರೋಡದ ಭಾರತೀಯ ಸಂಗೀತ ವಿದ್ಯಾಲಯ ಮುಂತಾದೆಡೆ ನೀಡಿದ ಪ್ರಾತ್ಯಕ್ಷಿಕೆ ಮತ್ತು ವಾದನ ಕಚೇರಿಗಳು. ಅಹಮದಾಬಾದ್, ಪಾಂಡಿಚೆರಿ ಮತ್ತು ಮದರಾಸಿನ ಅಲಯನ್ಸ್ ಫ್ರಾಂಚೈಸ್, ಕೊಚಿನ್‌ನ ಕೇರಳ ಲಲಿತ ಕಲಾಸಂಘ, ತಿರುಚಿಯ ಲಲಿತ ಕಲಾ ಸಂಘ, ಸಿರಸಿ, ಕಾಸರಗೋಡಿನ ಸಂಗೀತೋತ್ಸವ, ಬೆಂಗಳೂರಿನ ಅಖಿಲ ಭಾರತ ಸಂಗೀತ ಸಮ್ಮೇಳನ ಮುಂತಾದೆಡೆ ನಡೆಸಿಕೊಟ್ಟ ಕಾರ್ಯಕ್ರಮಗಳು. ಅಮೆರಿಕಾ, ಕೆನಡಾ, ಲಂಡನ್, ಪೂರ್ವ ಆಫ್ರಿಕಾ, ಇಂಡೋನೇಷ್ಯ, ಬ್ಯಾಂಕಾಕ್, ಈಜಿಪ್ಟ್, ಮಸ್ಕಟ್, ಸಿಂಗಾಪೂರ್, ಮಲೇಷಿಯಾ ಮುಂತಾದೆಡೆ ಸಂಗೀತ ಕಚೇರಿಗಳು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಟಿ. ಚೌಡಯ್ಯ ಪ್ರಶಸ್ತಿ, ಇಂಟರ್‌ನ್ಯಾಷನಲ್ ರೋಟರಿ ಸಂಸ್ಥೆಯಿಂದ ಡಿಸ್ಟಿಂಗ್ಯುಷ್‌ಡ್ ಸಿಟಿಜನ್ ಅವಾರ್ಡ್, ಹಿಂದೂಸ್ತಾನಿ ಕಲಾಕಾರ ಮಂಡಲಿಯಿಂದ ನಾದಶ್ರೀ ಪ್ರಶಸ್ತಿ ಗೌರವಗಳು. ಇದೇ ದಿನ ಹುಟ್ಟಿದ ಕಲಾವಿದರು ಉಡುಪಿ ಲಕ್ಷ್ಮೀನಾರಾಯಣ – ೧೯೨೬ ಪರ್ವತಕರ ಜಿ. ಎಸ್. – ೧೯೨೮ ಮಾಲಾ ಶಶಿಕಾಂತ್ – ೧೯೬೦ ಗೋಪಾಲ ರಾಯಚೂರ್ – ೧೯೬೫ ವಾಣಿ ಕೌಶಿಕ್ – ೧೯೬೮
* * *