
- This event has passed.
ಪಂ. ಪಂಚಾಕ್ಷರಿ ಸ್ವಾಮಿ ಮತ್ತೀಗಟ್ಟಿ
October 12
೧೨.೧೦.೧೯೨೮ ಹಿಂದೂಸ್ತಾನಿ ಸಂಗೀತದ ದಿಗ್ಗಜರಲ್ಲೊಬ್ಬರಾದ ಪಂಚಾಕ್ಷರಸ್ವಾಮಿಯವರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಶಿಶುನಾಳ ಗ್ರಾಮದಲ್ಲಿ. ತಂದೆ ಚನ್ನಬಸವಯ್ಯಸ್ವಾಮಿ, ತಾಯಿ ಸಾತವ್ವ. ಚಿಕ್ಕಂದಿನಿಂದಲೇ ಒಲಿದು ಬಂದ ಸಂಗೀತದಿಂದ ಏಳನೆಯ ವಯಸ್ಸಿಗೇ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಂಚಾಕ್ಷರಿ ಗವಾಯಿಗಳಿಂದ ಗುರುಕುಲ ಪದ್ಧತಿಯಲ್ಲಿ ಕಲಿತ ಸಂಗೀತ. ಎಂಟು ವರ್ಷ ಗ್ವಾಲಿಯರ್ ಘರಾಣೆಯ ವಿವಿಧ ವರಸೆಗಳ ಕಲಿಕೆ. ಪಂ. ಮಲ್ಲಿಕಾರ್ಜುನ ಮನ್ಸೂರರಿಂದ ಜೈಪುರ ಘರಾಣ ಪದ್ಧತಿಯಲ್ಲಿ ಸಂಗೀತದ ಮುಂದುವರೆದ ಶಿಕ್ಷಣ. ರಾಷ್ಟ್ರಾದ್ಯಂತ ಗುರು ಮನ್ಸೂರರೊಡನೆ ನಡೆಸಿಕೊಟ್ಟ ಹಲವಾರು ಕಾರ್ಯಕ್ರಮಗಳು. ಪುಣೆಯ ಪಂ. ನಿವೃತ್ತ ಬುವಾ ಸರ್ ನಾಯಕ್‌ರ ಬಳಿ ಜೈಪುರ ಘರಾಣೆಯ ಮುಂದುವರೆದ ಶಿಕ್ಷಣ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾಗಿ ನೇಮಕ. ೧೯೫೩ರಿಂದ ಆಕಾಶವಾಣಿಯ ’ಎ’ ಶ್ರೇಣಿಯ ಕಲಾವಿದರಾಗಿ ರಾಷ್ಟ್ರೀಯಜಾಲದಲ್ಲಿ, ದೂರದರ್ಶನದಲ್ಲಿ, ಮುಂಬಯಿ, ಕೋಲ್ಕತ್ತ, ಪುಣೆ ಮುಂತಾದೆಡೆಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು. ಅಮೆರಿಕಾ, ಯೂರೋಪ್ ಮಂತಾದೆಡೆ ವಿದೇಶ ಪ್ರವಾಸ, ಹಲವಾರು ಅಕಾಡಮಿಗಳ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ನೇಮಕ. ದೇಶವಿದೇಶಗಳಲ್ಲಿ ಹೊಂದಿರುವ ಅಪಾರ ಶಿಷ್ಯವರ್ಗ. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ, ಅಮೆರಿಕದ ನಿರ್ಮಲ ಜಯನಂದಯ್ಯ, ಎ.ಯು.ಪಾಟೀಲ್, ಮೀರಾಗುಂಡಿ, ಮೃತ್ಯುಂಜಯ ಅಗಡಿ, ನಾಗರಾಜ ಹವಾಲ್ದಾರ್ ಪ್ರಮುಖ ಶಿಷ್ಯರು. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಹಲವಾರು ಸಂಘ ಸಂಸ್ಥೆಗಳಿಂದ ನಾದಬ್ರಹ್ಮ, ಸಂಗೀತ ಕಲಾನಿಧಿ, ಲಯಬ್ರಹ್ಮ ಮತ್ತು ಕರ್ನಾಟಕ ಸರಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ ಪುರಸ್ಕೃತರು. ಇದೇದಿನಹುಟ್ಟಿದಕಲಾವಿದರು ವಸಂತ ಕವಲಿ -೧೯೩೦ ಬದರಿನಾರಾಯಣ್ ಆರ್. – ೧೯೫೩ ಶಶಿಕಲಾ ಚಂದ್ರಶೇಖರ್ – ೧೯೬೪
* * *