Loading Events

« All Events

  • This event has passed.

ಪಂ. ವಸಂತ ಕನಕಾಪೂರ

November 9

೯.೧೧.೧೯೩೭ ಹಾರ್ಮೋನಿಯಂ ವಾದನದ ಮಾಂತ್ರಿಕರೆನಿಸಿರುವ ಪಂ. ವಸಂತ ಕನಕಾಪೂರರವರು ಹುಟ್ಟಿದ್ದು ಹುಬ್ಬಳ್ಳಿ. ತಂದೆ ಭೀಮರಾವ್ ಸ್ವಾಮಿರಾವ್ ಕನಕಾಪೂರ, ತಾಯಿ ಭಾರತೀಬಾಯಿ, ಐದನೆಯ ವಯಸ್ಸಿನಿಂದಲೇ ಸಂಗೀತ ಶಿಕ್ಷಣ ಆರಂಭಿಸಿದ್ದು ಆರ್.ಬಿ. ದೇಸಾಯಿ ಮತ್ತು ಗೋಪಾಲರಾವ್ ದೇಸಾಯಿಯವರಲ್ಲಿ, ಹನುಮಂತರಾವ್ ವಾಳ್ವೇಕರ ಮತ್ತು ವಿಠಲಸಾ ಕಬಾಡಿಯವರಲ್ಲಿ ಹೆಚ್ಚಿನ ಮಾರ್ಗದರ್ಶನ. ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ವಿಶಾರದ ಪದವಿ. ಹನ್ನೊಂದನೇ ವಯಸ್ಸಿಗೆ ಸುರಶ್ರೀ ಕೇಶರಬಾಯಿ ಕೇರಕರ ರವರಿಗೆ  ನೀಡಿದ ಹಾರ್ಮೋನಿಯಂ ಸಾಥಿ. ಬಾಲ್ಯದಲ್ಲೇ ಮೈಸೂರು ಅರಮನೆಯಲ್ಲಿ ಮಹಾರಾಜರ ಮುಂದೆ ಹಾರ್ಮೋನಿಯಂ ಕಚೇರಿ ನೀಡಿ ಗಳಿಸಿದ ಪ್ರಸಿದ್ಧಿ. ಮುಂಬಯಿ, ಕೋಲ್ಕತ್ತಾ, ಮೈಸೂರು, ಮದರಾಸು, ಧಾರವಾಡ, ಪೂನಾ ಮೊದಲಾದ ಕಡೆ ನಡೆಸಿಕೊಟ್ಟ ಕಚೇರಿಗಳು. ಮುಂಬಯಿಯಲ್ಲಿ ಅಮೀರ್‌ಖಾನ್, ಅಝಮತ್‌ಖಾನ್, ಹುಸೇನ್‌ಖಾನ್, ಭೀಮಸೇನ ಜೋಶಿ ಮುಂತಾದ ಮಹಾನ್ ಗಾಯಕರಿಗೆ ನೀಡಿದ ಹಾರ್ಮೋನಿಯಂ ಸಹಕಾರ. ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್, ಪರ್ವಿನ್ ಸುಲ್ತಾನ, ಪ್ರಭಾ ಅತ್ರಿ ಮುಂತಾದವರುಗಳಿಗೆ ರೇಡಿಯೋ ಸಂಗೀತ ಸಮ್ಮೇಳನದಲ್ಲಿ ನೀಡಿದ ಸಾಥಿ. ಆಕಾಶವಾಣಿ ‘ಎ’ ಶ್ರೇಣಿ ಕಲಾವಿದರು. ಆಕಾಶವಾಣಿಯಲ್ಲಿ ಭಕ್ತಿಗೀತೆ, ಭಾವಗೀತೆ, ಶರಣರ ವಚನಗಳಿಗೆ ಸಂಗೀತ ಸಂಯೋಜನೆ. ಎರಡು ಬಾರಿ ಅಮೆರಿಕಾ ಪ್ರವಾಸ ಮಾಡಿ ಹಲವಾರು ಕಡೆ ನಡೆಸಿಕೊಟ್ಟ ಕಾರ್ಯಕ್ರಮ. ಮಹಾರಾಷ್ಟ್ರ ಸರಕಾರದಿಂದ ಮಂಜೂಶಾ ರತ್ನ, ವಾದನ ಗಂಧರ್ವ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ಕಲಾತಿಲಕ, ಕರ್ನಾಟಕ ಕಲಾಕಾರ ಮಂಡಲಿಯಿಂದ ನಾದಶ್ರೀ, ಆಕಾಶವಾಣಿ ಉತ್ತಮ ಸಂಗೀತ ಸಂಯೋಜಕ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಿ.ವಿ. ಅತ್ರಿ ನೆನಪಿನ ಸಂಗೀತಗಂಗಾ ಸಂಸ್ಥೆಯ ಸ್ವರಗಂಧರ್ವ ಪ್ರಶಸ್ತಿ ಮುಂತಾದುವು.   ಇದೇ ದಿನ ಹುಟ್ಟಿದ ಕಲಾವಿದರು ಕುಲಕರ್ಣಿ ಎಚ್.ಎಸ್. – ೧೯೩೦ ಸಾರಂಗಮಠ – ೧೯೩೬ ಆನೂರು ದತ್ತಾತ್ರೇಯ ಶರ್ಮ – ೧೯೫೮ ಲಲಿತಾ ಬಿ. – ೧೯೬೫

Details

Date:
November 9
Event Category: