Loading Events

« All Events

  • This event has passed.

ಪರ್ವತವಾಣಿ

September 2, 2023

೦೨೧೯೧೧ ೧೭೧೯೯೪ ನಟ, ನಿರ್ದೇಶಕ, ನಾಟಕಕಾರ ಪರ್ವತವಾಣಿ ನಾಮಾಂಕಿತ ಪಿ.ನರಸಿಂಗರಾವ್ ಹುಟ್ಟಿದ್ದು ತಮಿಳುನಾಡಿನ ಹೊಸೂರು ಬಳಿಯ ಮಾರಾಂಡಪಟ್ಟಿಯ ಹತ್ತಿರದ ಪರ್ವತವಾಡಿ. ತಂದೆ ಗೋಪಾಲರಾವ್, ತಾಯಿ ರುಕ್ಮಿಣಮ್ಮ. ನಾಟಕದಲ್ಲಿ ನಟಿಸುತ್ತಾ, ಹಲವಾರು ನಾಟಕಗಳ ರಚನೆ, ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತರಾಗದೆ ಸದಾ ನಾಟಕಗಳಲ್ಲಿ ಭಾಗಿ. ಭದ್ರಾವತಿಯಲ್ಲಿ ನಡೆದ ನಾಟಕದಲ್ಲಿ ವಿ.ಕೃ.ಗೋಕಾಕರು ಇವರ ಕಂಚಿನ ಕಂಠಕ್ಕೆ ಮಾರುಹೋಗಿ ಕರೆದದ್ದು ’ಪರ್ವತವಾಣಿ’ ಮುಂದೆ ಅದೇ ಹೆಸರು ಖಾಯಂ. ಹಲವಾರು ಇಂಗ್ಲಿಷ್ ನಾಟಕಗಳ ಭಾಷಾಂತರ. ಈ ನೆಲದ್ದೆನ್ನುವಂತಹ ದೇಸಿ ಸೊಗಡು. ಅನುವಾದಗಳು – ವಾರ್ಷಿಕೋತ್ಸವ, ಕಾಡ್ಮನ್ಸ, ಔತಣ, ಆಶೀರ್ವಾದ, ಬೆಳ್ಳಕ್ಕಿ ಮುಂತಾದುವು.  ಸ್ವತಂತ್ರವೆನ್ನಬಹುದಾದ ನಾಟಕಗಳು, ನಾನಾನಿವೇ, ಉಂಡಾಡಿಗುಂಡ, ಸುಂದರೋಪ ಸುಂದ್ರ, ಬಹದ್ದೂರ್‌ಗಂಡ. ಸಂಪೂರ್ಣ ಸ್ವತಂತ್ರ ರಚನೆ- ತಪ್ಪು ಹೆಜ್ಜೆ, ಸಪ್ತಪದಿ, ಫೋಳಿನ್‌ ಮಾಲ್‌, ಕೀಚಕ, ತಿರುಮಂತ್ರ, ಪಾಚೋಪಾಪಚ್ಚಿ ಪಾಚೋ, ಮದ್ಯಪಾನ, ಪಿಂಡಕ್ಕಾಗಿ, ಹಗ್ಗದ ಕೊನೆ, ನಗೆಪಾಟಲು, ಸತಿಸಾವಿತ್ರಿ ಮುಂತಾದ ೮೦ ಕ್ಕೂ ಹೆಚ್ಚು ನಾಟಕಗಳ ರಚನೆ. ರಂಗಭೂಮಿಗೆ ಕೊಟ್ಟ ಬಹುದೊಡ್ಡ ಕೊಡುಗೆ. ಕನ್ನಡ ಸಾಹಿತ್ಯ ಪರಿಷತ್‌ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,  ಕರ್ನಾಟಕ ನಾಟಕ ಆಕಾಡೆಮಿ ಪ್ರಶಸ್ತಿ ಅಲ್ಲದೆ ಕೆಲಕಾಲ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿಯೂ ಸಲ್ಲಿಸಿದ ಸೇವೆ. ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳ ಜೊತೆಗೆ ೧೯೮೫ರಲ್ಲಿ ಸ್ನೇಹಿತರು, ರಂಗಭೂಮಿಯ ಅಭಿಮಾನಿಗಳು ಅರ್ಪಿಸಿದ ಗೌರವಗ್ರಂಥ ‘ಪರ್ವತವಾಣಿ’. ಇದೇ ದಿನ ಹುಟ್ಟಿದ ಕಲಾವಿದರು : ಎನ್. ತಿಪ್ಪಯ್ಯ – ೧೯೩೩ ಬಿ.ಎಸ್. ವಿಜಯರಾಘವನ್ – ೧೯೩೫ ಕೆ.ಎಂ. ಭಾದ್ರಿ – ೧೯೪೬

* * *

Details

Date:
September 2, 2023
Event Category: