ಪಲ್ಲವಿ ಆರ್‌. ಚಂದ್ರಸಿಂಗ್‌

Home/Birthday/ಪಲ್ಲವಿ ಆರ್‌. ಚಂದ್ರಸಿಂಗ್‌
Loading Events

೧೫-೫೧೯೧೮ ೧೩೧೯೮೮ ಸಂಗೀತ ಕ್ಷೇತ್ರದಲ್ಲಿ ಸ್ಪರ್ಶಬ್ರಹ್ಮರೆನಿಸಿದ್ದ ಚಂದ್ರಸಿಂಗ್‌ ಹುಟ್ಟಿದ್ದು ಮೈಸೂರು ಜಿಲ್ಲೆಯ ನಾಗನಹಳ್ಳಿಯಲ್ಲಿ. ತಂದೆ ರತನ್‌ಸಿಂಗ್‌, ತಾಯಿ ಕಮಲಾಬಾಯಿ. ಹುಟ್ಟಿದ ಐದು ತಿಂಗಳಲ್ಲಿ ತಂದೆ, ಐದು ವರ್ಷದವನಾಗಿದ್ದಾಗ ತಾಯಿಯ ಪ್ರೀತಿಯಿಂದ ವಂಚಿತರಾಗಿ ಸೇರಿದ್ದು ಮಧುರೆ. ಮಧುರಾ ಬಾಯ್ಸ್ ನಾಟಕ ಮಂಡಲಿಯಲ್ಲಿ ಬಾಲನಟನಾಗಿ ಅನೇಕ ನಾಟಕಗಳಲ್ಲಿ ವಹಿಸಿದ ಪಾತ್ರ. ನಟರಿಗೆ ಹಾಡುವುದು ಅಗತ್ಯವಾಗಿದ್ದ ಕಾಲದಲ್ಲಿ ಕಲಿತ ಸಂಗೀತ. ನಾಯನಾ ಪಿಳ್ಳೆ, ಕಾಂಚೀಪುರಂ ಜಯರಾಮಶರ್ಮ, ಪಿ.ವಜ್ರವೇಲು ಮುಂತಾದವರಲ್ಲಿ ಪ್ರಾರಂಭಿಕ ಶಿಕ್ಷಣ. ಪುದುಕೋಟೈ ಸ್ವಾಮಿನಾಥ ಪಿಳ್ಳೆಯವರಲ್ಲಿ ಮುಂದುವರೆದ ಶಿಕ್ಷಣ. ಬೆಂಗಳೂರಿಗೆ ಬಂದು ಸ್ಥಳೀಯ ಶಿಷ್ಯರಿಗೆ ನೀಡಿದ ಸಂಗೀತ ಶಿಕ್ಷಣ. ಪಲ್ಲವಿ ಎಸ್‌.ಚಂದ್ರಪ್ಪನೊಡನೆ ಜಂಟಿಯಾಗಿ ನಡೆಸಿಕೊಟ್ಟ ಅನೇಕ ಕಾರ್ಯಕ್ರಮಗಳು. ಗಾಯನ ಸಮಾಜದ ವಾರ್ಷಿಕ ಸಂಗೀತೋತ್ಸವಗಳು, ಕರ್ನಾಟಕ ಗಾನಕಲಾ ಪರಿಷತ್ತು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮುಂತಾದೆಡೆ ಅಪರೂಪದ ಪಲ್ಲವಿಗಳನ್ನು ಹಾಡಿ ಪಡೆದ ಪ್ರಸಿದ್ಧಿ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಲಿಯ ವಿಶೇಷ ಸಂಗೀತ ಪರೀಕ್ಷಾ ಮಂಡಲಿಯ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ. ಸಂಗೀತ ನೃತ್ಯ ಅಕಾಡೆಮಿಯಿಂದ ಕ್ಲಿಷ್ಟ ಪಲ್ಲವಿಗಳ ಪ್ರಾತ್ಯಕ್ಷಿಕೆಯ ವಿಡಿಯೋ ಚಿತ್ರೀಕರಣ. ಕನಕದಾಸರ ೪೦ ದೇವರನಾಮಗಳಿಗೆ ಮಾಡಿದ ರಾಗ ಸಂಯೋಜನೆ, ಸ್ವರ ಸಾಹಿತ್ಯ ಗಾಯನಗಂಗಾ ಮಾಸಪತ್ರಿಕೆಯಲ್ಲಿ ಪ್ರಕಟಿತ. ಸಂಗೀತ ವಿದ್ವಾಂಸರಾದ ಮೈಸೂರು ವಾಸುದೇವಾಚಾರ್ಯರಿಂದ ಗಾಯನ ಸಮಾಜದ ವಾರ್ಷಿಕ ಸಮ್ಮೇಳನದಲ್ಲಿ ಡಾ. ಬಿ.ದೇವೇಂದ್ರಪ್ಪನವರು ಸ್ಥಾಪಿಸಿದ್ಧ ಮಾರುತಿ ಸೇವಾ ಸಂಗೀತ ಸಮಾಜದಿಂದ ಗಾನಶೇಖರ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಮೀನಾಕ್ಷಿ ಸುಂದರಂ ಕಲ್ಚರ್‌ ಪರ್‌ಫಾರ್ಮಿಂಗ್‌ ಆರ್ಟ್ಸ್‌ ‌ವತಿಯಿಂದ ಸನ್ಮಾನ ಮುಖ್ಯವಾದವುಗಳು.   ಇದೇದಿನಹುಟ್ಟಿದಕಲಾವಿದರು ಅನಂತಸ್ವಾಮಿ ಸಿ.ಜಿ. – ೧೯೩೭

* * *

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top