ಪಲ್ಲವಿ ಎಸ್. ಚಂದ್ರಪ್ಪ

Home/Birthday/ಪಲ್ಲವಿ ಎಸ್. ಚಂದ್ರಪ್ಪ
Loading Events
This event has passed.

೧೧.೦.೧೯೧೬ ೨೨.೧೦.೧೯೮೬ ಕರ್ನಾಟಕ ಸಂಗೀತಕ್ಕೆ ಅವಧಾನಪದ್ಧತಿಯ (ಎರಡು ಕೈಯಲ್ಲೂ ಬೇರೆ ಬೇರೆಗತಿಯ ತಾಳ ಹಾಕುವ) ಪಲ್ಲವಿಗಳನ್ನು ಪರಿಚಯಿಸಿದ ಮೇರು ಪುರುಷರಾದ ಚಂದ್ರಪ್ಪನವರು ಹುಟ್ಟಿದ್ದು ಬೆಂಗಳೂರಿನ ದಂಡು ಪ್ರದೇಶ. ತಂದೆ ವಿದ್ವಾನ್ ಬಿ. ಶೇಷಪ್ಪ, ತಾಯಿ ಮುನಿಯಮ್ಮ. ಎಳೆಯ ವಯಸ್ಸಿನಲ್ಲಿಯೇ ತಾತನ ತೊಡೆಯೇರಿ ಸಂಗೀತದ ಆಲಿಕೆ. (ತಾತ ಮುರಾರಿ ತಿಮ್ಮಯ್ಯಶೆಟ್ಟರು ಸಂಗೀತ, ಗಮಕ, ಕಾವ್ಯವಾಚನ, ಕೀರ್ತನೆ, ಶಿವಶರಣರ ವಚನ ಹಾಡುವುದರಲ್ಲಿ ಅದ್ವಿತೀಯರು.) ಒಮ್ಮೆ ಕೇಳಿದರೆ ಸಾಕು ಅಚ್ಚಳಿಯದೆ ಮೆದುಳಿನಲ್ಲಿ ದಾಖಲಾಗುತ್ತಿತ್ತು. ಸ್ಕೂಲಿಗೆ ಕಳುಹಿಸಿದರೆ ಚಕ್ಕರ್‌ ಹೊಡೆದು ಮರದ ಕೆಳಗೆ ಸಂಗೀತಾಭ್ಯಾಸ. ಭಜನಾ ಮಂದಿರ, ಗುರು ಪೂಜಾ, ಸಾಂಸ್ಕೃತಿಕ ಕಾರ್ಯಕ್ರಮಗಳ ಜಾಗಗಳಲ್ಲೆಲ್ಲಾ ಹಾಜರ್‌. ಹುಡುಗನ ಹಾಡುಗಾರಿಕೆಗೆ ಮನಸೋತು ಮನೆಯ ಸಮಾರಂಭಗಳಿಗೆ ಆಹ್ವಾನಿಸಿ ಹಾಡು ಕೇಳಿ ಸಂತೋಷ ಪಡುತ್ತಿದ್ದ ಜನ. ಇವರ ಹಾಡು ಕೇಳಿ ನಾಗಸ್ವರ ವಿದ್ವಾಂಸರಾದ ಬಂಗಾರು ಎಸ್. ವೆಂಕಟಪ್ಪನವರು ಸ್ವತಃ ಕರೆದು ಕಲಿಸಿದ ಸಂಗೀತ ಪಾಠ. ನಂತರ ಟೈಗರ್‌ ವರದಾಚಾರ್ಯರಲ್ಲಿ ಪ್ರಥಮ ಶಿಷ್ಯರಾದ ಬಿ. ನರಸಿಂಹಮೂರ್ತಿ, ಕೆಲಕಾಲ ಬಿ. ದೇವೇಂದ್ರಪ್ಪನವರಲ್ಲೂ ಸಂಗೀತಾಭ್ಯಾಸ. ಮದರಾಸಿನ ದೊಡ್ಡ ಜವಳಿ ವ್ಯಾಪಾರಿ ಸಿ. ಲಕ್ಷ್ಮಣ್‌ರೊಡನೆ ಬೆಳೆದ ಸ್ನೇಹ. ಚಿತ್ರರಂಗ ಸೇರಲು ಹಾತೊರೆದ ಮನಸ್ಸು. ಪಾಂಡಿಚೇರಿಯಲ್ಲಿ ಏರ‍್ಪಾಡಾದ ಸಂಗೀತ ಕಚೇರಿ. ಅಚಾನಕವಾಗಿ ಜಮೀನ್ದಾರರೊಬ್ಬರ ಮನೆಯ ಮದುವೆಗೆ ಬಂದ ಸಂಗೀತಗಾರ ನರಸಿಂಹಲು ನಾಯಡು ರವರ ಬಳಿ ದೊರೆತ ಶಿಷ್ಯ ವೃತ್ತಿ. ಹಲವಾರು ಕಡೆ ನಡೆಸಿದ ಘನ ಕಚೇರಿಗಳು. ಚಿತ್ತೂರು ಸುಬ್ರಹ್ಮಣ್ಯ ಪಿಳ್ಳೆಯವರು ಕಚೇರಿಗೆ ಬಾರದೆ ಹೋದಾಗ ಇವರಿಗೆ ಹಾಡಲು ದೊರೆತ ಅವಕಾಶ. ಮದರಾಸಿನಲ್ಲಿ ಮನೆಮಾತಾದ ಪಲ್ಲವಿ ಚಂದ್ರಪ್ಪ. ಡಿ.ಕೆ.ಪಟ್ಟಮ್ಮಾಳ್ ಆಹ್ವಾನದ ಮೇರೆಗೆ ಮದರಾಸು ಮ್ಯೂಸಿಕ್ ಅಕಾಡಮಿಯಲ್ಲೂ ನಡೆಸಿಕೊಟ್ಟ ಸಂಗೀತ. ಅನೇಕ ಅಪರೂಪದ ಪಲ್ಲವಿ, ಅಷ್ಟೋತ್ತರ ಶತತಾಳದ ಅವಧಾನ ಪದ್ಧತಿಯಲ್ಲಿ ಪಲ್ಲವಿಗಳ ಪ್ರಾತ್ಯಕ್ಷಿಕೆ. ಖ್ಯಾತ ನೃತ್ಯಪಟು ಶಾಂತಾರಾಮ್‌ ನೃತ್ಯಕ್ಕೆ ಸಂಗೀತ ಸಂಯೋಜನೆ. ಶಂಕರಪುರಂನ ಥಿಯೋಸಫಿಕಲ್ ಸೊಸೈಟಿ, ಗಾನಕಲಾ ಪರಿಷತ್‌ನಲ್ಲಿ ಹಾಡುಗಾರಿಕೆ. ಆಕಾಶವಾಣಿಯ ಕಲಾವಿದರ ಆಯ್ಕೆ ಸಮಿತಿ, ಕರ್ನಾಟಕ ಗಾನ ಕಲಾ ಪರಿಷತ್ ತಜ್ಞರ ಸಮಿತಿ, ಪರೀಕ್ಷಾ ಮಂಡಲಿಯ ಅಧ್ಯಕ್ಷರಾಗಿ ಸಲಹೆ ಮಾರ್ಗದರ್ಶನ. ಕೇಂದ್ರ ಸರ್ಕಾರದ ನೃತ್ಯ ಅಕಾಡೆಮಿಗಾಗಿ ತಾಳಾವಧಾನ ಪಲ್ಲವಿಗಳ ಚಿತ್ರೀಕರಣ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯಿಂದ ವಿಡಿಯೋ ಚಿತ್ರೀಕರಣ. ಅವಧಾನ ಪಲ್ಲವಿ ವಿಶ್ಲೇಷಣ, ತಿಲಕ, ಗಾನಕಲಾಭೂಷಣ, ಲಯಯೋಗಿ, ತಾಳ ನಿರ್ಣಯ ಸಿಂಧು ಬಿರುದು, ಪುರಭವನದಲ್ಲಿ ನಡೆದ ಕಚೇರಿ. ಬಂಗಾರದ ತೋಡ ತೊಡಿಸಿ ಸನ್ಮಾನ. ಪಲ್ಲವಿ, ಸಂಗೀತ ವಿಜ್ವಾನ್ ಬಿರುದು.   ಇದೇ ದಿನ ಹುಟ್ಟಿದ ಕಲಾವಿದರು ಗುಂಡಾಭಟ್ಟಜೋಶಿ – ೧೯೩೪ ವಾಸಂತಿಕದಿರೆ – ೧೯೩೫ ವಜ್ರಮುನಿ – ೧೯೪೪

ಸಂಪರ್ಕ ಮಾಹಿತಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಇ-ಕನ್ನಡ ವಿಭಾಗ
ಮೊದಲನೆಯ ಮಹಡಿ, ಕನ್ನಡ ಭವನ
ಜಯಚಾಮರಾಜೇಂದ್ರ ಒಡೆಯರ್ ರಸ್ತೆ
ಬೆಂಗಳೂರು- ೫೬೦ ೦೦೨

Phone: ೦೮೦-೨೨೨೨೭೪೭೮

Fax: ೦೮೦-೨೨೨೧೪೩೭೯

Web: http://www.kanaja.karnataka.gov.in

ಕಣಜ – ಅಂತರಜಾಲ ಕನ್ನಡ ಜ್ಞಾನಕೋಶ

ಕಣಜವು ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗದ ಪರಿಕಲ್ಪನೆಯಂತೆ ರೂಪಿಸಿ, ಪ್ರಸಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾರಿಗೊಳಿಸುತ್ತಿರುವ ಅಂತರಜಾಲ ಕನ್ನಡ ಜ್ಞಾನಕೋಶವಾಗಿದೆ. ಎಲ್ಲ ಬಗೆಯ ಜ್ಞಾನ ಸಾಹಿತ್ಯವನ್ನೂ ಕಲಿಕೆಗಾಗಿ ಕನ್ನಡದಲ್ಲಿ ಸಾರ್ವಜನಿಕರಿಗೆ ನೀಡುವುದು ಯೋಜನೆಯ ಉದ್ದೇಶವಾಗಿದೆ.
‘ಕಣಜದಲ್ಲಿ ನೀವೂ ಬರೆಯಬಹುದು. ಈ ಲೇಖನಗಳ ಹಕ್ಕುಸ್ವಾಮ್ಯದ ವಿವರಕ್ಕಾಗಿ ಈ ಕೊಂಡಿಗೆ ಬನ್ನಿ.

ಇತ್ತೀಚಿನ ಕೃತಿಗಳು

Go to Top